ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ನಮ್ಮ ಕುಟುಂಬದ ಬಗ್ಗೆ ಹರಡಿರುವ ಬಹುತೇಕ ಕಥೆಗಳು ಸತ್ಯಕ್ಕೆ ದೂರ: ಆತ್ಮಕಥೆ ಬರೆಯಲು ಕಾರಣ ತಿಳಿಸಿದ ಸೋನಿಯಾ ಗಾಂಧಿಸ್ಥಳೀಯ ಸಂಸ್ಥೆಗಳ ಚುನಾವಣಾ ಮೀಸಲಾತಿ ಹಂಚಿಕೆ ಹಕ್ಕು ಸರ್ಕಾರದ್ದು, ಜನರದ್ದಲ್ಲ: ಸುಪ್ರೀಂಕೋರ್ಟ್ಮತದಾರರ ಪಟ್ಟಿಯಿಂದ ಹೆಸರು ತೆಗೆದರೆ ದೇಶದಿಂದಲೇ ಗಡಿಪಾರು ಭೀತಿ: ಮುಸ್ಲಿಂ ಕುಟುಂಬಗಳಲ್ಲಿ ಹೆಚ್ಚಿದ ಪೌರತ್ವ ಕಳೆದುಕೊಳ್ಳುವ ಆತಂಕಶಿವಮೊಗ್ಗ ವಿಮಾನ ನಿಲ್ದಾಣ: ಮಲೆನಾಡಿಗೆ ಕಿರೀಟವಾಗಬೇಕಿದ್ದದ್ದು, “ಕಪ್ಪುಚುಕ್ಕೆ” ಆದ ಬಗೆತಿಂಗಳಿಗೆ ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ ₹350 ಕೋಟಿ ಜಿಎಸ್‌ಟಿ ವಹಿವಾಟು!ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಅಮಾನತುಗೊಂಡ ಅಧ್ಯಕ್ಷರಿಂದ ₹4.17 ಕೋಟಿ ಅಕ್ರಮ ಹಣ ವರ್ಗಾವಣೆ ಆರೋಪಕರ್ನಾಟಕ ಸಚಿವ ಸಂಪುಟಕ್ಕೆ ಮಹಿಳಾ ಸಚಿವೆಯ ಸೇರ್ಪಡೆ ಸಾಧ್ಯತೆ: ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತಿರುವ ಕಾಂಗ್ರೆಸ್ಬೆಂಗಳೂರಿನಲ್ಲಿ ಮನೆಮನೆಗೆ ತೆರಳಿ ನಿವಾಸಿಗಳ ಮಾಹಿತಿ ಸಂಗ್ರಹ: ಪೊಲೀಸರಿಗೆ ಜವಾಬ್ದಾರಿ ನೀಡಲು ಸರ್ಕಾರದ ಚಿಂತನೆಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ: ₹30 ಲಕ್ಷ ಸುಪಾರಿ ನೀಡಿದ್ದ ಮಾಜಿ ಸ್ನೇಹಿತ ಸೇರಿ ಐವರ ಬಂಧನಆಂಧ್ರ ಕರಾವಳಿಗೆ ಅಪ್ಪಳಿಸಲಿರುವ ಅಕ್ವಾನ್ ಚಂಡಮಾರುತ: ಗಂಟೆಗೆ 145 ಕಿ.ಮೀ. ವೇಗದಲ್ಲಿ ಬೀಸಲಿದೆ ಗಾಳಿ; ಹಲವು ರಾಜ್ಯಗಳಿಗೆ ಭಾರಿ ಮಳೆ ಎಚ್ಚರಿಕೆಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್‌ನಿಂದ ಸ್ಕ್ರೀನಿಂಗ್ ಸಮಿತಿಗಳ ರಚನೆಇಂದು ಬೆಂಗಳೂರಿನಲ್ಲಿ ಟೆಕ್ ಸಮಿಟ್ ಆರಂಭ: ಎಐ, ರೋಬೋಟಿಕ್ಸ್ ಮತ್ತು ಡೀಪ್‌ಟೆಕ್ ತಂತ್ರಜ್ಞಾನಕ್ಕೆ ವಿಶೇಷ ಒತ್ತುಓಲಾ, ಉಬರ್ ಸೇರಿದಂತೆ ಎಲ್ಲಾ ಟ್ಯಾಕ್ಸಿಗಳಿಗೂ ಮೀಟರ್ ಕಡ್ಡಾಯಕ್ಕೆ ಸರ್ಕಾರ ಸಿದ್ಧತೆ; ನಿಯಮ ಉಲ್ಲಂಘಿಸಿದರೆ ವಾಹನ ಜಪ್ತಿ ಎಚ್ಚರಿಕೆ!ವಿಜಯಲಕ್ಷ್ಮೀ–ಧನ್ವೀರ್ ವಿವಾದಕ್ಕೆ ಹೈಕೋರ್ಟ್ ಮಧ್ಯಂತರ ಬ್ರೇಕ್: ಮೂರು ಎಫ್‌ಐಆರ್‌ಗಳ ತನಿಖೆ ಸ್ಥಗಿತಬೇಲೂರಿನಲ್ಲಿ ಮತ್ತೊಂದು ಕಾಡಾನೆ ದಾಳಿ – 2 ದಿನಗಳಲ್ಲಿ ಇಬ್ಬರ ದುರ್ಮರಣಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ: ಬಿಜೆಪಿ ನಾಯಕರ ಮನವೊಲಿಕೆಗೆ ಕುಮಾರಸ್ವಾಮಿ ಯತ್ನಬೆಂಗಳೂರಿನಿಂದ ಮಧುರೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌

ವಿಜಯಲಕ್ಷ್ಮೀ–ಧನ್ವೀರ್ ವಿವಾದಕ್ಕೆ ಹೈಕೋರ್ಟ್ ಮಧ್ಯಂತರ ಬ್ರೇಕ್: ಮೂರು ಎಫ್‌ಐಆರ್‌ಗಳ ತನಿಖೆ ಸ್ಥಗಿತ

PPeepal Media Desk

Peepal Media Desk ಕ್ರೈಂ, ಸಿನಿಮಾ

• 1 ನಿಮಿಷದ ಓದು

ವಿಜಯಲಕ್ಷ್ಮೀ–ಧನ್ವೀರ್ ವಿವಾದಕ್ಕೆ ಹೈಕೋರ್ಟ್ ಮಧ್ಯಂತರ ಬ್ರೇಕ್: ಮೂರು ಎಫ್‌ಐಆರ್‌ಗಳ ತನಿಖೆ ಸ್ಥಗಿತ

ವಿಜಯಲಕ್ಷ್ಮೀ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಧನ್ವೀರ್ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲು

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ಗೌಡ ನಡುವಿನ ಮಾತಿನ ಸಮರ ಇದೀಗ ನ್ಯಾಯಾಲಯದ ಅಂಗಳದಲ್ಲಿ ಮುಂದುವರಿದಿದೆ. ತಮ್ಮ ವಿರುದ್ಧ ದಾಖಲಾಗಿರುವ ಮೂರು ಪೊಲೀಸ್ ಪ್ರಕರಣಗಳನ್ನು ಪ್ರಶ್ನಿಸಿ ಧನ್ವೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಪ್ರಕರಣಗಳ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡುವ ಮೂಲಕ ನಟನಿಗೆ ತಾತ್ಕಾಲಿಕ ಕಾನೂನು ಪರಿಹಾರ ಒದಗಿಸಿದೆ.

ವಿಜಯಲಕ್ಷ್ಮೀ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಧನ್ವೀರ್ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪ್ರಕರಣಗಳು ಕಾನೂನುಬದ್ಧವಾಗಿಲ್ಲ ಎಂದು ಆಕ್ಷೇಪಿಸಿ ಅವುಗಳನ್ನು ರದ್ದುಗೊಳಿಸುವಂತೆ ಕೋರಿ ಧನ್ವೀರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸೋಮವಾರ ನಡೆದ ವಿಚಾರಣೆಯಲ್ಲಿ ಧನ್ವೀರ್ ಪರ ವಕೀಲರು, ದೂರುಗಳಲ್ಲಿ ನಿಂದನೆಯ ಆರೋಪ ಮಾಡಲಾಗಿದೆಯಾದರೂ, ಯಾವ ಮಹಿಳೆಯನ್ನು ಉದ್ದೇಶಿಸಿ ಅವಾಚ್ಯ ಪದಗಳನ್ನು ಬಳಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿಲ್ಲ ಎಂದು ವಾದಿಸಿದರು. ಕೇವಲ ಆಕ್ಷೇಪಾರ್ಹ ಪದಗಳ ಬಳಕೆಯ ಆಧಾರದಲ್ಲಿ ಶಾಂತಿಭಂಗದ ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂಬ ಅಂಶವನ್ನೂ ನ್ಯಾಯಪೀಠದ ಮುಂದಿಟ್ಟರು.

ಮೂರು ಎಫ್‌ಐಆರ್‌ಗಳ ತನಿಖೆ ಸ್ಥಗಿತ

ಆದರೆ, ಧನ್ವೀರ್ ಪರ ವಾದಕ್ಕೆ ಸರ್ಕಾರದ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಉಭಯ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರ ಏಕಸದಸ್ಯ ಪೀಠವು ಮೂರು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ತನಿಖೆಗೆ ಮಧ್ಯಂತರ ತಡೆ ನೀಡಿತು.

ಇದೇ ವೇಳೆ ವಿವಾದಕ್ಕೆ ಸಂಬಂಧಿಸಿದಂತೆ ನಿಂದನೆ ನಡೆದಿದೆ ಎನ್ನಲಾದ ಆಡಿಯೋದ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿರುವುದು ಪ್ರಕರಣದ ಮುಂದಿನ ಬೆಳವಣಿಗೆಗೆ ಮಹತ್ವ ಪಡೆದುಕೊಂಡಿದೆ.

ನವೆಂಬರ್ 21ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು, ಆಡಿಯೋ ದಾಖಲೆ ಹಾಗೂ ಎರಡೂ ಕಡೆಯ ವಾದಗಳ ಆಧಾರದಲ್ಲಿ ಮುಂದಿನ ಕಾನೂನು ಪ್ರಕ್ರಿಯೆ ಸಾಗಲಿದೆ. ಸದ್ಯದ ಆದೇಶ ಧನ್ವೀರ್‌ಗೆ ತಾತ್ಕಾಲಿಕ ನಿರಾಳತೆ ನೀಡಿದ್ದರೂ, ಮೂರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವ ಕುರಿತ ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ.

PPeepal Media Desk

Peepal Media Desk

Peepal Media · ಕ್ರೈಂ ವಿಭಾಗ

ಸಂಬಂಧಿತ ಸುದ್ದಿಗಳು