Monday, June 17, 2024

ಸತ್ಯ | ನ್ಯಾಯ |ಧರ್ಮ

ಟಾಪರ್ಸ್ ಗಳಿಗೆ ಹೆಲಿಕ್ಯಾಫ್ಟರ್‌ ರೈಡ್‌ ಅವಕಾಶ : ಭರವಸೆ ಉಳಿಸಿಕೊಂಡ ಛತ್ತೀಸ್‌ಗಢ ಸಿಎಂ

ಛತ್ತೀಸ್‌ಗಢ : 10 ಮತ್ತು 12ನೇ ತರಗತಿಯ ಟಾಪರ್ ವಿದ್ಯಾರ್ಥಿಗಳನ್ನು ಹೆಲಿಕ್ಯಾಫ್ಟರ್‌ ರೈಡ್‌ ಕರೆದೊಯ್ಯುವಂತೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌ ಅಲ್ಲಿನ ವಿದ್ಯಾರ್ಥಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

ಇದೇ ವರ್ಷದ ಮೇ ತಿಂಗಳಲ್ಲಿ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಸಿಎಂ ಭೂಪೇಶ್‌ ಬಘೇಲ್‌ ʼವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 10 ಮತ್ತು 12ನೇ ತರಗತಿಗಳಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಪಡೆದುಕೊಳ್ಳುವ ವಿದ್ಯಾರ್ಥಿಗಳನ್ನು ಸರ್ಕಾರದಿಂದ ಹೆಲಿಕ್ಯಾಫ್ಟರ್‌ ರೈಡ್‌ ಕರೆದುಕೊಂಡು ಹೋಗುತ್ತೇವೆʼ ಎಂದು ಭರವಸೆ ನೀಡಿದ್ದರು.

ವಿದ್ಯಾರ್ಥಿಗಳಿಗೆ ಕೊಟ್ಟ ಮಾತಿನಂತೆ ಇಂದು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರನ್ನು ಹೆಲಿಕ್ಯಾಫ್ಟರ್‌ ರೈಡ್‌ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಮಾತನಾಡಿದ ರಾಜ್ಯ ಸಚಿವ ಪ್ರೇಮಸಾಯಿ ಸಿಂಗ್ ಟೇಕಂ ʼವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದ್ದು, ಸಿಎಂ ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆʼ ಎಂದು ಹೇಳಿದ್ದಾರೆ.

ನಾವೆಲ್ಲಾ ಮೊದಲ ಬಾರಿಗೆ ಹೆಲಿಕ್ಯಾಫ್ಟರ್‌ ರೈಡ್‌ ಮಾಡಿದ್ದೇವೆ. ನಮಗೆ ತುಂಬಾ ಕುಷಿ ಆಗಿದೆ. ಇದರಿಂದ ನಮ್ಮ ಪೋಷಕರು ಉತ್ಸುಕರಾಗಿದ್ದಾರೆ. ಮುಂಬರುವ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದ ಕಡೆ ಗಮನ ಹರಿಸಲು ಇಂತಹ ಕಾರ್ಯಕ್ರಮಗಳು ಪ್ರೋತ್ಸಾಹ ನೀಡುವಂತಾಗುತ್ತದೆ ಎಂದು ಹೆಲಿಕ್ಯಾಫ್ಟರ್‌ ರೈಡ್‌ ಮಾಡಿದ ವಿದ್ಯಾರ್ಥಿಗಳು ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ನೋಡಿ : ದಕ್ಷಿಣದ ಚಿತ್ರಗಳಿಗೆ ಡಬ್ಬಿಂಗ್ ಮಾಡುವ 8 ಕಲಾವಿದರು

Related Articles

ಇತ್ತೀಚಿನ ಸುದ್ದಿಗಳು