ಪರ್ತ್/ಆಸ್ಟ್ರೇಲಿಯಾ: ಅಕ್ಟೋಬರ್ 16 ರಿಂದ ಟಿ-20 ವಿಶ್ವಕಪ್ ಪ್ರಾರಂಭವಾಗಲಿರುವ ಹಿನ್ನಲೆಯಲ್ಲಿ, ಸೋಮವಾರ ಪರ್ತ್‌ನ WACA ನಲ್ಲಿ (ಪಶ್ಚಿಮ ಆಸ್ಟ್ರೇಲಿಯನ್ ಕ್ರಿಕೆಟ್ ಸಂಸ್ಥೆ) ಭಾರತ ತಂಡವು ಪಶ್ಷಿಮ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 158 ರನ್‌ಗಳ ಗಳಿಸಿದೆ.
ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಂತರ ಮೊದಲು ಓಪನರ್‌ಗಳಾಗಿ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಕಣಕ್ಕಿಳಿದರು. ಈ ವೇಳೆ ಮೊದ-ಮೊದಲು ರನ್ ಗಳಿಸುವಲ್ಲಿ ರೋಹಿತ್ ಶರ್ಮ ಪರಡಾಡುತ್ತಿದ್ದು, ಬೆಹೆರೆಂಡೋಫ್ ಬೌಲಿಂಗ್ ವೇಳೆ ವೇಗವಾಗಿ ರನ್‌ಗಳಿಸಲು ಹೋಗಿ ಔಟ್ ಆಗಿ ಪೆವಿಲಿಯನ್ ಸೇರಿದರು.
ರೋಹಿತ್ ನಿರ್ಗಮನದ ನಂತರ ಮೂರನೇ ಕ್ರಮಾಂಕದಲ್ಲಿ ಸ್ಕ್ರೀಜ್‌ಗೆ ಇಳಿದ ದೀಪಕ್ ಹೂಡಾ ಬೆಹೆರೆಂಡೋಫ್ ಅವರ ಎರಡನೇ ಎಸೆತದಲ್ಲಿ ಸಿಕ್ಸರ್ ಹೊಡೆದು ತಂಡಕ್ಕೆ ಉತ್ತಮ ರನ್ ಕಲೆಹಾಕುವ ಭರವಸೆ ನೀಡಿದರು. ಆದರೆ ಭರವಸೆಯನ್ನು ಬಹಳ ಸಮಯ ಉಳಿಸಿಕೊಳ್ಳದೆ ಬೆಹೆರೆಂಡೋಫ್ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ತಂಡ 5 ಓವರ್‌ಗಳಿಗೆ 29 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತು.
ತದನಂತರ ಬಂದ ಸುರ್ಯಕುಮಾರ್ ಯಾದವ್ ಬಿರುಸಿನ ಆಟ ವಾಡುವ ಮೂಲಕ ತಂಡಕ್ಕೆ ರನ್ ಸೇರಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಜೊತೆಯಾಗಿ ಸಾಥ್ ನೀಡುತ್ತಿದ್ದ ಪಂತ್ ಔಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಮತ್ತು ಸುರ್ಯಕುಮಾರ್ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಹೊಸ ಭರವಸೆ ಮೂಡಿಸಿದರು.
ಭರವಸೆ ಆಟವಾಡುತ್ತಿದ್ದ ಹಾರ್ದಿಕ್ ಪಾಂಡ್ಯ 27 ರನ್ ಗಳಿಸಿ ತಂಡಕ್ಕೆ ಮರಳಿದರು. ಈ ವೇಳೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಯಾದವ್ 35 ಎಸೆತಗಳಿಗೆ 52 ರನ್‌ಗಳಿಸಿ ಅರ್ಧಶತಕ ದಾಖಲಿಸಿಕೊಂಡರು.
ಅರ್ಧಶತಕ ಸಿಡಿಸಿ ಪೆವಿಲಿಯನ್ ಸೇರಿದ ಯಾದವ್ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಬಿರುಸಿನ ಆಟವಾಡದ ಕಾರಣ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158 ಗಳಿಸಿತು. ಈ ಮೂಲಕ ಎದುರಾಳಿ ತಂಡಕ್ಕೆ 159 ರನ್ ಗುರಿ ನೀಡಲು ಸಾಧ್ಯಾವಾಯಿತು.