Monday, January 12, 2026

ಸತ್ಯ | ನ್ಯಾಯ |ಧರ್ಮ

ಭಾರತದ ಮಾನವ ಹಕ್ಕುಗಳ ದಾಖಲೆಗೆ ಭಾರಿ ಹಿನ್ನಡೆ: GANHRI ಮಾನ್ಯತೆ ಮತ್ತೆ ಮುಂದೂಡಿಕೆ

ಹೊಸದೆಹಲಿ: ಭಾರತದ ಮಾನವ ಹಕ್ಕುಗಳ ದಾಖಲೆಗೆ ಭಾರಿ ಹಿನ್ನಡೆಯಾಗಿದೆ. ವಿಶ್ವಸಂಸ್ಥೆಯ ಮಾನ್ಯತೆ ಪಡೆದ, ಜಿನೀವಾ ಮೂಲದ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ (GANHRI) ಈ ವರ್ಷದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಮಾನ್ಯತೆಯನ್ನು ಮುಂದೂಡಿದೆ.

ಈ ರೀತಿ ಮನ್ನಣೆ ನೀಡದಿರುವುದು ಇದು ಸತತ ಎರಡನೇ ಬಾರಿ. ಕಳೆದ ಸಲವೂ ಮನ್ನಣೆ ನೀಡುವುದನ್ನು ಮುಂದೂಡಲಾಗಿತ್ತು. ಈ ನಿರ್ಧಾರವು ಮಾನವ ಹಕ್ಕುಗಳ ಮಂಡಳಿಯಲ್ಲಿ ಹಾಗೂ ಕೆಲವು UN ಜನರಲ್ ಅಸೆಂಬ್ಲಿ ಸಂಸ್ಥೆಗಳಲ್ಲಿ ಭಾರತದ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಮೇ 1 ರಂದು ನಡೆದ ಮಾನ್ಯತೆಗಳ ಉಪ ಸಮಿತಿ (ಎಸ್‌ಸಿಎ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಮಿತಿಯ ಇತ್ತೀಚಿನ ವರದಿ ಇನ್ನಷ್ಟೇ ಬರಬೇಕಿದೆ.

ಹಿಂದಿನ ವರದಿಯಲ್ಲಿ ಮಾನ್ಯತೆಯನ್ನು ಮುಂದೂಡಲು ಶಿಫಾರಸು ಮಾಡಲು ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗಿದೆ. ಎನ್‌ಎಚ್‌ಆರ್‌ಸಿ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ, ಮಾನವ ಹಕ್ಕುಗಳ ತನಿಖೆಯ ಮೇಲ್ವಿಚಾರಣೆಗೆ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಮತ್ತು ಸಮಿತಿಯಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಕೊರತೆಯಿದೆ ಎಂದು ಅವರು ಹೇಳಿದ್ದಾರೆ. ಈ ನಿರ್ಧಾರವನ್ನು ಎನ್‌ಎಚ್‌ಆರ್‌ಸಿಗೆ ತಿಳಿಸಲಾಗಿದೆ ಎಂದು ಸಂಬಂಧಪಟ್ಟ ಮೂಲಗಳು ಖಚಿತಪಡಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page