Monday, July 28, 2025

ಸತ್ಯ | ನ್ಯಾಯ |ಧರ್ಮ

30 ಕೆಜಿ ತೂಕದ ಗೋಲ್ಡ್ ಫಿಶ್ ಹಿಡಿದು ವಿಶ್ವದಾಖಲೆ ಮುರಿದ ಬ್ರಿಟಿಷ್ ಮೀನುಗಾರ

ನ್ಯೂಯಾರ್ಕ್‌: ಬ್ರಿಟಿಷ್‌ ಮೀನುಗಾರರೊಬ್ಬರು 30.5 ಕೆಜಿಯ ಗೋಲ್ಡ್‌ ಫಿಶ್‌ ಒಂದನ್ನು ಹಿಡಿದಿದ್ದು, ವಿಶ್ವದ ಅತಿದೊಡ್ಡ ಗೊಲ್ಡ್‌ ಫಿಶ್‌ ಹಿಡಿದಿರುವ ದಾಖಲೆ ಸೃಷ್ಟಿಸಿದ್ದಾರೆ.

42 ವರ್ಷದ ಆಂಡಿ ಹ್ಯಾಕೆಟ್‌ ಎಂಬುವರು, ವಿಶ್ವದ ಪ್ರಮುಖ ಕಾರ್ಫ್‌ ಮೀನುಗಾರಿಕೆಯಲ್ಲಿ ಒಂದಾದ ಫ್ರಾನ್ಸ್‌ ಶಾಂಪೇನ್ನಲ್ಲಿರುವ ಬ್ಲೂವಾಟರ್‌ ಲೇಕ್ಸ್‌ನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ಈ ಮೀನನ್ನು ಹಿಡಿದ್ದಾರೆ ಎಂದು ಬ್ಲೂವಾಟರ್‌ ಲೇಕ್ಸ್‌ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಈ ಕುರಿತು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದ್ದು, ಆಂಡಿ ಹ್ಯಾಕೆಟ್‌ ಹಿಡಿದಿರುವ ʼದಿ ಕ್ಯಾರೆಟ್ ಎಂಬ ಅಡ್ಡಹೆಸರನ್ನು ಹೊಂದಿರುವ ದೈತ್ಯಾಕಾರದ ಕಿತ್ತಳೆ ಮಾದರಿಯ ಮೀನುʼ 67 ಪೌಂಡ್ 4 ಔನ್ಸ್ ತೂಕವನ್ನು ಹೊಂದಿದೆ. ಅಂದರೆ 30.5 ಕೆಜಿ ಭಾರವಾಗಿದೆ.  2019 ರಲ್ಲಿ ಅಮೆರಿಕದ ಮಿನ್ನೆಸೋಟದಲ್ಲಿ ಜೇಸನ್ ಫುಗೇಟ್ ಹಿಡಿದ ವಿಶ್ವದ ಅತಿದೊಡ್ಡ ಗೋಲ್ಡ್ ಫಿಶ್ 13.6 ಕೆಜಿ ಇತ್ತು. ಆದರೆ ಈ ಮೀನು ಅದಕ್ಕಿಂತ ದೊಡ್ಡದಾಗಿದ್ದು, ವಿಶ್ವದ ಅತೀ ಡೊಡ್ಡ ಗೋಲ್ಡನ್‌ ಪಿಶ್‌ ಎಂದು ಪ್ರಕ್ಯಾತಿ ಪಡೆದುಕೊಂಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಹ್ಯಾಕೆಟ್‌, ಇಷ್ಟು ದೊಡ್ಡ ಮೀನನ್ನು ಹಿಡಿದಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ʼ ಕ್ಯಾರೆಟ್‌ ಅಲ್ಲಿದೆ ಎಂದು ನನಗೆ ಯಾವಾಗಲೂ ತಿಳಿದಿತ್ತು. ಆದರೆ ನಾನು ಅದನ್ನು ಹಿಡಿಯುತ್ತೇನೆ ಎಂದು ಎಂದಿಗೂ ಭಾವಿಸಿರಲಿಲ್ಲ. ನನಗೆ ಆ ಮೀನನ್ನು ಹಿಡಿಯಲು ಸುಮಾರು 25 ನಿಮಿಷ ಬೇಕಾಯಿತು, ಅದು ನಾನು ಹಾಕಿದ ಬಲೆಗೆ ಬಿದ್ದಾಗ ನಾನು ಅದನ್ನು ಹಿಡಿಯಲು ಪ್ರಯತ್ನಿಸಿದೆ, ಆದರೆ ಅದು ನನ್ನನ್ನೇ ಮೇಲಕ್ಕೆ ಕೆಳಕ್ಕೆ ಮಾಡಿತು, ಆಗಲೇ ನನಗೆ ತಿಳಿದಿದ್ದು ಅದು ತುಂಬಾ ದೊಡ್ಡ ಮೀನು ಎಂದು, ಮೀನು ಹಿಡಿಯುವ ಮುಂಚೆ ಸುಮಾರು ದೂರದಲ್ಲಿಯೇ ನನಗೆ ಅದರ ಬಣ್ಣ ಕಾಣುತ್ತಿತ್ತು. ಒಟ್ಟಿನಲ್ಲಿ ಅದನ್ನು ಹಿಡಿಯುವುದು ಒಂದು ಅದ್ಬುತ ಮತ್ತು ಅದೃಷ್ಟದ ಕ್ಷಣವಾಗಿತ್ತುʼ ಎಂದು ಹೇಳಿದ್ದಾರೆ.

ಮೀನು ಹಿಡಿದು ಅದರ ಜೊತೆ ಪೋಟೋ ಕ್ಲಿಕ್ಕಿಸಿಕೊಂಡಿರುವ ಆಂಡಿ ಹ್ಯಾಕೆಟ್‌, ಆ ಮೀನನ್ನು ಸುರಕ್ಷಿತವಾಗಿ ಮತ್ತೆ ಸರೋವರಕ್ಕೆ ಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಆಂಡಿ ಅವರು ಹಿಡಿದಿರುವ ಮೀನಿನ ಮೂರು ಪೋಟೋಗಳನ್ನು ಹಂಚಿಕೊಂಡಿರುವ ಬ್ಲೂವಾಟರ್ ಲೇಕ್ಸ್, ಶೀರ್ಷಿಕೆಯಲ್ಲಿ ʼ ಕ್ಯಾರೆಟ್‌ (ಮೀನು) ತೂಕ 67.4 ಪೌಂಡ್‌! ವೆಲ್‌ ಡನ್‌ ಆಂಡಿ ಎಂದು ಬರೆದುಕೊಂಡಿದೆ. ಇದೀಗ ಆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸುದ್ದಿ ತಿಳಿದವರು ಆಶ್ಚರ್ಯಚಕಿತರಾಗಿದ್ದು, ಅಭಿನಂದನೆಗಳನ್ನು ತಿಳಿಸಿದ್ದಾರೆ.

ಬ್ಲೂವಾಟರ್ ಲೇಕ್ಸ್ ಫೇಸ್‌ ಬುಕ್‌ ಖಾತೆ , ಹಂಚಿಕೊಂಡಿರುವ ಪೋಟೋಗಳು

Related Articles

ಇತ್ತೀಚಿನ ಸುದ್ದಿಗಳು

You cannot copy content of this page