Saturday, September 6, 2025

ಸತ್ಯ | ನ್ಯಾಯ |ಧರ್ಮ

ಈದ್ ಮಿಲಾದ್ ಆಚರಣೆ ಪ್ರಯುಕ್ತ ಸೌಹಾರ್ದ ಬೃಹತ್ ಮೆರವಣಿಗೆ

ಹಾಸನ : ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಹೊಸಲೈನ್ ರಸ್ತೆ ಮೂಲಕ ಬೃಹತ್ ಮೆರವಣಿಗೆ ಸಾಗಿದ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಡಿಜೆ ಸೌಂಡಿಗೆ ಮುಸ್ಲಿಂ ಬಾಂಧವರು ಕುಣಿದು ಕುಪ್ಪಳಿಸಿದರೇ, ಪಟಾಕಿ ಸಿಡಿಸಿ ಇನ್ನೊಂದು ಕಡೆ ದೊಡ್ಡ ದೊಡ್ಡ ಬಾವುಟಗಳನ್ನು ರಸ್ತೆ ಮಧ್ಯೆ ತಿರುಗಿಸುತ್ತಿರುವುದು ಕಂಡು ಬಂದಿತು.

 ನಗರದ ಹಳೆ ಮಟನ್ ಮಾರ್ಕೆಟ್ ಅಮೀರ್‌ಮೊಹಲ್ಲಾದ ಬಳಿ ಜಮಾಯಿಸಿದ ಮುಸ್ಲಿಂ ಬಾಂಧವರು ಡಬಲ್ ಟ್ಯಾಂಕ್ ವೃತ್ತದಿಂದ ಹೊರಟು ಹೊಸಲೈನ್, ವಲ್ಲಬಾಯಿ ರಸ್ತೆ ಮೂಲಕ ಸಂತೆಪೇಟೆ ವೃತ್ತದ ಮೂಲಕ ಬಿ.ಎಂ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಹಾಗೂ ಸಂಸದರು ಕೂಡ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾವಗಹಿಸಿ ಶುಭ ಹಾರೈಸಿ ಕೆಲ ಸಮಯ ಜೊತೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಸುಮಾರು ೧೫ ಸಾವಿರ ಮುಸ್ಲಿಂ ಸಮುದಾಯದ ಜನರು ಭಾಗವಹಿಸಿದ್ದು, ದಾರಿ ಉದ್ದಲಕ್ಕೂ ಅಲ್ಲಾ ಅಕ್ಬರ್ ಎನ್ನುವ ಘೋಷಣೆ ಕೇಳಿ ಬಂದಿತು. ಯುವಕರು ತಮ್ಮ ಕೈಯಲ್ಲಿ ಬಾವುಟ ಹಿಡಿದು ನೃತ್ಯ ಮಾಡುತ್ತಿದ್ದು, ಮೆರವಣಿಗೆಯಲ್ಲಿ ಡಿಜೆ ಸೌಂಡ್ ಹೆಚ್ಚು ಗಮನಸೆಳೆಯಿತು. ಹಬ್ಬದ ಹಿನ್ನೆಲೆ ನಗರದ ಹಲವು ಕಡೆಗಳಲ್ಲಿ ಹಸಿರು ಬಾವುಟ ರಾರಾಜಿಸುತ್ತಿದ್ದವು. ಶುಭಾಶಯ ಕೋರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಲಾಗಿದೆ. ಪ್ರಮುಖ ವೃತ್ತಗಳಲ್ಲಿ ಬಂಟಿಂಗ್ಸ್ ಕಟ್ಟಲಾಗಿತ್ತು. ಕೆಲವೆಡೆ ಬಿಳಿ ಹಾಗೂ ಕೆಂಪು ಬಾವುಟ ಸಹ ಹಾರಾಡಿದವು. ಹೇಮಾವತಿ ಪ್ರತಿಮೆಗೂ ಹಸಿರು ಬಂಟಿಂಗ್ಸ್‌ನಿಂದ ಅಲಂಕಾರ ಮಾಡಲಾಗಿತ್ತು. ಟಿಪ್ಪು ಸುಲ್ತಾನ್, ಹುಲಿ ವೇಷದಾರಿಗಳು ಇದ್ದರು. ಮೆರವಣಿಗೆಯಲ್ಲಿ ಸಾಗುವವರಿಗೆ ಅಲ್ಲಲ್ಲಿ ತಂಪಾದ ಪಾನಿಯ, ನೀರು, ಐಸ್ ಕ್ರೀಂ ವಿತರಿಸಲಾಗುತ್ತಿತ್ತು. ದಾರಿ ಉದ್ದಲಕ್ಕೂ ಪ್ಲಾಸ್ಟಿಕ್ ಲೋಟ, ಬಾಟಲ್ ಬಿದ್ದಿರುವುದು ಕಂಡು ಬಂದಿತು. ಮುನ್ನೆಚ್ಚರಿಕ ಕ್ರಮವಾಗಿ ಅಲ್ಲಲ್ಲಿ ಪೊಲೀಸ್ ಕ್ಯಾಮರಗಳ ಮೂಲಕ ಪೊಲೀಸರು ಸೆರೆ ಹಿಡಿಯುತಿದ್ದರು. ಹಳೇಮಟನ್ ಮಾರ್ಕೇಸ್ ಬಳಿ ಡಬಲ್ ಟ್ಯಾಂಕ್ ವೃತ್ತದಲ್ಲಿ ಕೆಲ ಮುಸ್ಲಿಂ ಬಂಧವರು ಬೃಹತ್ ಬಾವುಟವನ್ನು ತಿರುಗಿಸುತ್ತಿದ್ದಾಗ ವಿದ್ಯುತ್ ಲೈನ್ ಗಳು ಇರುವುದನ್ನು ಕಂಡು ಪೊಲೀಸ್ ಅಧಿಕಾರಿಗಳು ತಡೆಯಲು ಮುಂದಾದರು. ಇನ್ನು ಕಲ್ಲರ್ ಗ್ಯಾಸ್ ಆಕಾಶಕ್ಕೆ ಬಿಡುತ್ತಿದ್ರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸುತ್ತಿದ್ದರು. ಕಳೆದ ಬಾರಿ ೨೦ಕ್ಕೂ ಹೆಚ್ಚಿ ಡಿಜೆ ಸೌಂಡ್ ಗರ್ಜಿಸುತ್ತಿದ್ದರೇ ಈ ಬಾರಿ ಮೂರ‍್ನಾಲ್ಕು ಡಿಜೆಗೆ ಮಾತ್ರ ಪೊಲೀಸರು ಅವಕಾಶ ನೀಡಿದ್ದರು. ಈದ್ ಮಿಲಾದ್ ಹಿನ್ನಲೆ ನಗರಸಭೆ ವ್ಯಾಪ್ತಿಯಲ್ಲಿ ಬಾರ್ ಹಾಗೂ ವೈನ್‌ಶಾಪ್‌ಗಳನ್ನು ಬಂದ್ ಮಾಡಲಾಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page