ಚಾಮರಾಜನಗರ : ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಓರ್ವ ವ್ಯಕ್ತಿ ಸಿಲುಕಿರುವ ಘಟನೆ ನಡೆದಿದೆ.
ಬೋನಿನೊಳಗೆ ಸಿಲುಕಿದ ವ್ಯಕ್ತಿಯೂ ಗಂಗವಾಡಿ ಗ್ರಾಮದ ನಿವಾಸಿ ಕಿಟ್ಟಿ ಎಂಬುವವರಾಗಿದ್ದಾರೆ. ಇವರು ಕುತೂಹಲಕ್ಕೆಂದು ಇಣುಕಿ ನೋಡಿದ ವ್ಯಕ್ತಿ ಮೂರು ಗಂಟೆಗೂ ಹೆಚ್ಚು ಕಾಲ ಬೋನಿನೊಳಗೆ ಲಾಕ್ ಆಗಿದ್ದಾರೆ. ಅರಣ್ಯ ಇಲಾಖೆಯೂ, ಇತ್ತೀಚಿಗೆ ಗಂಗವಾಡಿ ಗ್ರಾಮದಲ್ಲಿ 4 ಹಸುವನ್ನು ಕೊಂದು ಹಾಕಿದ್ದ ಚಿರತೆ ಸೆರೆಗಾಗಿ ಜಮೀನಿನಲ್ಲಿ ಬೋನು ಇಟ್ಟಿದ್ಧರು.
ಕುತೂಹಲದಿಂದ ಬೋನಿನ ಒಳಗೆ ಹೋಗಿ ಬಂಧಿಯಾಗಿದ್ದರು. ಕಿಟ್ಟಿ ಬೋನಿನ ಬಾಗಿಲು ತೆರೆಯಲು ಹರಸಾಹಸ ಪಟ್ಟಿದ್ದು, ಅಲ್ಲದೇ ನನ್ನನ್ನು ಕಾಪಾಡಿ ಎಂದು ಕೂಗಿ ಬೋನಿನೊಳಗೆ ಕೂಗಾಡಿದ್ದಾರೆ.
ಬಳಿಕ ಅಕ್ಕಪಕ್ಕ ಇದ್ದ ರೈತರು ತಳಕ್ಕೆ ಬಂದು ಕಿಟ್ಟಿಯನ್ನು ಬೋನಿನಿಂದ ಹೊರಗೆ ಕರೆ ತಂದಿದ್ದಾರೆ.
