Wednesday, July 9, 2025

ಸತ್ಯ | ನ್ಯಾಯ |ಧರ್ಮ

‘ನಮ್ಮ ಮೆಟ್ರೋ’ದಲ್ಲಿ ತಪ್ಪಿದ ಬಾರೀ ಅನಾಹುತ

ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಮ್ಮ ಮೆಟ್ರೋ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲಿ ದೊಡ್ಡ ಅನಾಹುತ ತಪ್ಪಿದೆ. ಮಹಿಳೆಯೊಬ್ಬರು ಅಚಾನಕ್ಕಾಗಿ ಟ್ರಾಕ್ ಗೆ ಜಿಗಿದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು ಯಾವುದೇ ಜೀವಹಾನಿ ಆಗಿಲ್ಲ ಎಂದು ವರದಿಯಾಗಿದೆ.

ಇಂದಿರಾ ನಗರದ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರಂ 1ರಲ್ಲಿ ಈ ಘಟನೆ ನಡೆದಿದ್ದು, ಪ್ಲಾಟ್ಫಾರಂ ನಿಂದ ಮೆಟ್ರೋ ಟ್ರಾಕ್ ಗೆ ಮಹಿಳೆಯೊಬ್ಬರು ಜಿಗಿದಿದ್ದಾರೆ. ಕೆಳಗೆ ಬಿದ್ದ ಮೊಬೈಲ್ ತೆಗೆದುಕೊಳ್ಳಲು 750KV ವೋಲ್ಟ್ ವಿದ್ಯುತ್ ಹರಿಯುವ ನಮ್ಮ ಮೆಟ್ರೋ ಟ್ರ್ಯಾಕ್ ಗೆ ಮಹಿಳೆ ಜಿಗಿದಿದ್ದಾರೆ.

ತಕ್ಷಣ ಮೆಟ್ರೋ ಸಿಬ್ಬಂದಿಗಳು ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಮೆಟ್ರೋ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ.

ಮಹಿಳೆ ಟ್ರ್ಯಾಕ್ ಗೆ ಜಿಗಿದ ಪರಿಣಾಮ 15 ನಿಮಿಷಗಳ ಕಾಲ ಪರ್ಪಲ್ ಲೈನ್ ನಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಮಹಿಳೆಯನ್ನು ಮೇಲಕ್ಕೆ ಎತ್ತಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page