Monday, December 16, 2024

ಸತ್ಯ | ನ್ಯಾಯ |ಧರ್ಮ

ಭಾರತದ ಮಿಲಿಟರಿ ವಿಜಯದ ಫೋಟೋ ಕಿತ್ತು ಹಾಕಿ,‌ ರಾರಾಜಿಸುತ್ತಿರುವ ಚಾಣಕ್ಯನ- ಕೃಷ್ಣನ ಪೈಂಟಿಂಗ್!

ಹೊಸದಿಲ್ಲಿ: ಭಾರತದ ಮಹಾನ್ ಮಿಲಿಟರಿ ವಿಜಯವಾದ ಡಿಸೆಂಬರ್ 16, 1971 ರ ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದ ಢಾಕಾದಲ್ಲಿ ಪಾಕಿಸ್ತಾನಿ ಸೇನೆಯು ಶರಣಾಗತಿಗೆ ಸಹಿ ಮಾಡುತ್ತಿರುವ ಫೋಟೋವನ್ನು ಸೇನಾ ಮುಖ್ಯಸ್ಥರ ಕಚೇರಿಯಿಂದ ತೆಗೆದುಹಾಕಲಾಗಿದೆ. ಈ ಘಟನೆಯ ಚಿತ್ರವನ್ನು ಬರೆದು ದಶಕಗಳಿಂದ ಕಚೇರಿಯಲ್ಲಿ ಹೆಮ್ಮೆಯಿಂದ ನೇತು ಹಾಕಲಾಗಿತ್ತು, ಆಗಾಗ್ಗೆ ಭೇಟಿ ನೀಡುವ ವಿದೇಶಿ ಗಣ್ಯರು ಮತ್ತು ಮಿಲಿಟರಿ ಜನರಲ್‌ಗಳೊಂದಿಗೆ ನಡೆಸುವ ಅಧಿಕೃತ ಸಭೆಗಳನ್ನು ಅದರ ಮುಂದೆ ನಡೆಸಲಾಗುತ್ತು ಮತ್ತು ಫೋಟೋ ತೆಗೆಸಿಕೊಳ್ಳಲಾಗುತ್ತಿತ್ತು.

ಡಿಸೆಂಬರ್‌ 11 ರಂದು ಪ್ರಕಟಿಸಲಾಗಿರುವ ಭಾರತೀಯ ಸೇನೆಯು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ – ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಈ ಹಿಂದೆ ಇದ್ದ ಬಾಂಗ್ಲಾ ವಿಮೋಚನೆಯ ಫೋಟೋ ಇರುವ ಜಾಗದಲ್ಲಿ ಹೊಸ ಪೇಂಟಿಂಗ್‌ನ ಹಾಕಿ, ಅದರ ಮುಂದೆ ನೇಪಾಳದ ಆರ್ಮಿ ಮುಖ್ಯಸ್ಥರ ಜೊತೆಗೆ ಫೋಟೋ ತೆಗೆಸಿಕೊಂಡಿರುವುದು ಕಂಡು ಬಂದಿದೆ.

ಹಳೆಯ ಮಿಲಿಟರಿ ವಿಜಯದ ಫೋಟೋವನ್ನು ಕಿತ್ತು ಹಾಕಿ ಹೊಸ ಫೋಟೋ ಹಾಕಿದ ಬಗ್ಗೆ ಮೊದಲು ದಿ ಟೆಲಿಗ್ರಾಫ್ ವರದಿ ಮಾಡಿತು. ಈ ಹೊಸ ಫೋಟೋದಲ್ಲಿ ಮಹಾಭಾರತದ ಮತ್ತು ಚಾಣಕ್ಯನ ಫೋಟೋಗಳನ್ನು ಕೂರಿಸಲಾಗಿದೆ.

ಲಡಾಖ್‌ನ ಪ್ಯಾಂಗೊಂಗ್ ಸರೋವರದ ದಡದಲ್ಲಿರುವ ಟ್ಯಾಂಕ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊಂದಿರುವ ಈ ಹೊಸ ಪೈಂಟಿಂಗ್‌ನಲ್ಲಿ, ಯೋಧರು, ಕುರುಕ್ಷೇತ್ರದಲ್ಲಿ ಅರ್ಜುನನ ರಥ ಓಡಿಸುತ್ತಿರುವ ಕೃಷ್ಣ ಮತ್ತು ಕೈ ಯೆತ್ತಿ ಏನೋ ತೋರಿಸುತ್ತಿರುವ ಚಾಣಕ್ಯನನ್ನು ಚಿತ್ರಿಸಲಾಗಿದೆ. ಈ ಮೂಲಕ ಭಾರತದ ಮಹತ್ವದ ಐತಿಹಾಸಿಕ ವಿಜಯವೆಂದು ದಾಖಲಾಗಿರುವ ಬಾಂಗ್ಲಾ ವಿವೋಚನೆಯ ಸಂಬಂಧಿತ ಪೈಂಟಿಂಗನ್ನು ತೆಗೆದುಹಾಕಲಾಗಿದೆ.

ಹಲವಾರು ವಿಮರ್ಶಕರು ಈ ಬದಲಾವಣೆಯು ರಾಜಕೀಯ ಪ್ರೇರಿತವಾಗಿದೆ ಎಂದು ಕರೆದ್ದಾರೆ, ಕೆಲವರು ಸರ್ಕಾರವು ಪ್ರಧಾನಿ ಇಂದಿರಾ ಗಾಂಧಿಯವರ ಅಡಿಯಲ್ಲಿ ಸಂಭವಿಸಿದ 1971 ರ ಈ ವಿಜಯವನ್ನು ಜನರು ಮರೆಯುವಂತೆ ಮಾಡುವ ಬಿಜೆಪಿಯ ಕುತಂತ್ರ ಎಂದು ಕರೆದಿದ್ದಾರೆ.

ಟೀಕೆಗೆ ಪ್ರತಿಕ್ರಿಯೆಯಾಗಿ, ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ದಿ ಟೆಲಿಗ್ರಾಫ್‌ನೊಂದಿಗೆ ಮಾತನಾಡುತ್ತಾ , ‘ಕರಮ್ ಕ್ಷೇತ್ರ – ಕಾರ್ಯಗಳ ಕ್ಷೇತ್ರ’ ಎಂಬ ಶೀರ್ಷಿಕೆಯ ಈ ಹೊಸ ವರ್ಣಚಿತ್ರವನ್ನು ಸಮರ್ಥಿಸಿಕೊಂಡರು, ಇದು ಸೇನೆಯ “ಸದಾಚಾರಕ್ಕೆ ಸಮಯಾತೀತ ಬದ್ಧತೆಯ” ಪ್ರಾತಿನಿಧ್ಯ ಎಂದು ವಿವರಿಸಿದರು.

28 ಮದ್ರಾಸ್‌ನ ಲೆಫ್ಟಿನೆಂಟ್ ಕರ್ನಲ್ ಥಾಮಸ್ ಜಾಕೋಬ್ ರಚಿಸಿದ ಈ ವರ್ಣಚಿತ್ರವು ಆಧುನಿಕ ತಂತ್ರಜ್ಞಾನದ ಪ್ರಗತಿಯೊಂದಿಗೆ ಮಹಾಭಾರತದ ಬೋಧನೆಗಳು ಮತ್ತು ಚಾಣಕ್ಯನ ಬುದ್ಧಿವಂತಿಕೆಯಿಂದ ಪ್ರೇರಿತವಾದ ಧರ್ಮಕ್ಕೆ ಸೇನೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಧಿಕಾರಿ ವಿವರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಈ ಹೊಸ ಪೈಂಟಿಂಗ್‌ನಲ್ಲಿ ಇರುವ ಪೂರ್ವ ಲಡಾಕಿನ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ಮಧ್ಯೆ ಇರುವ ಪರಿಸ್ಥಿತಿ ವಿಷಮವಾಗಿರುವ ಸಮಯದಲ್ಲೇ ಹಳೆಯ ಪೈಂಟಿಂಗ್‌ ತೆಗೆದುಹಾಕಿರುವುದು ಅನೇಕರು ಹುಬ್ಬೇರಿಸುವಂತೆ ಮಾಡಿದೆ.

ಢಾಕಾದಲ್ಲಿ ನಡೆದ ಶರಣಾಗತಿ ಸಮಾರಂಭದಲ್ಲಿ ತೆಗೆದ ಪ್ರಖ್ಯಾತ ಛಾಯಾಚಿತ್ರದಲ್ಲಿ, ಭಾರತ ಮತ್ತು ಬಾಂಗ್ಲಾದೇಶದ ಪಡೆಗಳ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಅರೋರಾ ಅವರ ಮುಂದೆ ಪಾಕಿಸ್ತಾನದ ಲೆಫ್ಟಿನೆಂಟ್ ಎಕೆಕೆ ನಿಯಾಜಿ ಶರಣಾಗತಿಗೆ ಸಹಿ ಹಾಕುತ್ತಿರುವುದು ಒಂದು ಐತಿಹಾಸಿಕ ಘಟನೆಯಾಗಿತ್ತು. ಇದನ್ನು ಭಾರತದ ಮಿಲಿಟರಿ ಇತಿಹಾಸದಲ್ಲಿ ಹೆಮ್ಮೆಯಿಂದ ಸ್ವೀಕರಿಸಲಾಗಿತ್ತು.

ಇದರ ಪೈಟಿಂಗ್‌ ಅನ್ನು ಕಿತ್ತುಹಾಕಿರುವ ಬಗ್ಗೆ , ನಿವೃತ್ತ ಮೇಜರ್ ಜನರಲ್ ಯಶ್ ಮೋರ್ X ನಲ್ಲಿ ನಿರಾಶೆಯನ್ನು ವ್ಯಕ್ತಪಡಿಸಿ, ಫೋಟೋವನ್ನು “ನಮ್ಮ ಆಧುನಿಕ ಇತಿಹಾಸದಲ್ಲಿ ನಡೆದ ಏಕೈಕ ಮಿಲಿಟರಿ ವಿಜಯ” ಎಂದು ಕರೆದರು. ಅದನ್ನು ತೆಗೆದುಹಾಕಿರುವುದು ಅದರಲ್ಲಿ ಪಾಲುದಾರರಾದವರಿಗೆ ಮತ್ತು ಇತಿಹಾಸದ ಉತ್ಸಾಹಿಗಳಿಗೆ ತೀವ್ರ ದುಃಖ ತಂದಿದೆ ಎಂದು ಅವರು ಹೇಳಿದರು.

ನಿವೃತ್ತ ಮಿಲಿಟರಿ ಅಧಿಕಾರಿಗಳಿಂದ ಟೀಕೆ:

Related Articles

ಇತ್ತೀಚಿನ ಸುದ್ದಿಗಳು

You cannot copy content of this page