Thursday, June 13, 2024

ಸತ್ಯ | ನ್ಯಾಯ |ಧರ್ಮ

5 ಭಾರತೀಯರಿದ್ದ ಹಡಗು ಅಪಹರಣ: ಕಣಕ್ಕಿಳಿದ ನೌಕಾಪಡೆ

ಸಮುದ್ರದ ನೀರಿನಲ್ಲಿ ಎಲ್ಲೆಂದರಲ್ಲಿ ಹೈ ಟೆನ್ಶನ್ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಡಗು ಅಪಹರಣ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಗುರುವಾರ ಸಂಜೆ ಸೊಮಾಲಿಯಾ ಕರಾವಳಿಯ ಬಳಿ ‘MV LILA NORFOLK’ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿದೆ.

ಹಡಗಿನಲ್ಲಿ ಸುಮಾರು 15 ಭಾರತೀಯ ಸಿಬ್ಬಂದಿ ಇದ್ದರು ಎನ್ನಲಾಗಿದೆ. ಭಾರತೀಯ ನೌಕಾಪಡೆಗೆ ಸೇರಿದ ವಿಮಾನವೊಂದು ಈ ಹಡಗಿನ ಮೇಲೆ ಕಣ್ಣಿಟ್ಟಿದೆ. ತುರ್ತು ಸಂದರ್ಭದಲ್ಲಿ ಹಡಗಿನಿಂದ ಭಾರತೀಯರನ್ನು ರಕ್ಷಿಸಲು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಚೆನ್ನೈ ಈಗಾಗಲೇ ಸೊಮಾಲಿಯಾ ಕರಾವಳಿಗೆ ತೆರಳಿದೆ.

ಮಾಧ್ಯಮ ವರದಿಗಳ ಪ್ರಕಾರ, ‘MV LILA NORFOLK’ ಎಂಬ ಸರಕು ಸಾಗಣೆ ಹಡಗು ಬ್ರೆಜಿಲ್‌ನ ಪೋರ್ಟೊ ಡೊ ಆಕ್ವೆಯಿಂದ ಬಹ್ರೇನ್‌ನ ಖಲೀಫಾ ಬಿನ್ ಸಲ್ಮಾನ್ ಬಂದರಿಗೆ ಹೊರಟಿದೆ. ಇದು ಜನವರಿ 11ರಂದು ಬಹ್ರೇನ್ ತಲುಪುವ ನಿರೀಕ್ಷೆಯಿತ್ತು. ಆದರೆ, ಡಿಸೆಂಬರ್ 30ರಿಂದ, ‘MV LILA NORFOLK’ ಕಂಪನಿಯ ಆಡಳಿತವು ಈ ಹಡಗಿನ ಸಂಪರ್ಕವನ್ನು ಕಳೆದುಕೊಂಡಿದೆ. ಯೆಮೆನ್‌ನ ಹೌತಿ ಉಗ್ರರ ವಿರುದ್ಧ ಕೈಜೋಡಿಸಿರುವ 12 ದೇಶಗಳ ಪಟ್ಟಿಯಲ್ಲಿ ಬಹ್ರೇನ್ ಕೂಡ ಇದೆ. ಹೀಗಾಗಿ ಬಹ್ರೇನ್ ದೇಶವನ್ನು ಗುರಿಯಾಗಿಸಿಕೊಂಡು ಈ ಅಪಹರಣ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಇದರ ಸಂಪೂರ್ಣ ವಿವರ ತಿಳಿಯಲು ಇನ್ನೂ ಕೆಲವು ಗಂಟೆಗಳ ಕಾಲ ಕಾಯಬೇಕಿದೆ.

ಈ ಘಟನೆಯ ಬಗ್ಗೆ ಭಾರತೀಯ ಸೇನಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈ ಘಟನೆ ಕುರಿತು ಗುರುವಾರ ಸಂಜೆ ನಮಗೆ ಮಾಹಿತಿ ಲಭಿಸಿದೆ. ಸೊಮಾಲಿಯಾ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗಿನ ಮೇಲೆ ಲೈಬೀರಿಯನ್ ಧ್ವಜವನ್ನು ಹಾರಿಸುಲಾಗುತ್ತಿದೆ ಎಂದು ವರದಿಯಾಗಿದೆ. ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು. ಅವರೊಂದಿಗೂ ನಾವು ಸಂವಹನ ನಡೆಸುತ್ತಿದ್ದೇವೆ’’ ಎಂದರು.

Related Articles

ಇತ್ತೀಚಿನ ಸುದ್ದಿಗಳು