Sunday, June 16, 2024

ಸತ್ಯ | ನ್ಯಾಯ |ಧರ್ಮ

Netflix ನಿಂದ ಬಳಕೆದಾರರಿಗೆ ಶಾಕ್; ಹೊಸ ನಿಯಮದಿಂದ ಆಗಿರೋ ಸಮಸ್ಯೆ ಏನು?

ಭಾರತದಲ್ಲಿ ಒಟಿಟಿ ಪ್ಲಾಟ್ ಫಾರಂ ಶುರುವಾದ ದಿನಗಳಿಂದ ಅಂಗೈಯಲ್ಲೇ ಪ್ರಪಂಚ ಸಿಕ್ಕಿದಂತಾಗಿದೆ. ಅದರಲ್ಲೂ Netflix ಮತ್ತು ಅಮೆಜಾನ್ ಸಂಸ್ಥೆಗಳು ಭಾರತದ ಮಟ್ಟಿಗೆ ತನ್ನ ವ್ಯಾಪ್ತಿಯನ್ನು ಅತಿ ಹೆಚ್ಚು ವಿಸ್ತರಿಸಿ ಅರ್ಧ ಮನರಂಜನಾ ಲೋಕವನ್ನೇ ತನ್ನ ಹಿಡಿತಕ್ಕೆ ತಗೆದುಕೊಂಡಿದೆ. ಆದರೆ ಈಗ Netflix ಸಂಸ್ಥೆ ತನ್ನ ಗ್ರಾಹಕರಿಗೆ ಸಣ್ಣ ಶಾಕ್ ನೀಡಿದೆ.

ಭಾರತದಲ್ಲಿ ಬಹುತೇಕ ಮಂದಿ Netflix ಖಾತೆ ಹೊಂದಿರದಿದ್ದರೂ ಪರೋಕ್ಷವಾಗಿ Netflix ಬಳಕೆದಾರರಾಗಿದ್ದರು. ತನ್ನ ಸ್ನೇಹಿತರ ಖಾತೆಯನ್ನೇ ಹತ್ತಾರು ಮಂದಿ ಉಪಯೋಗಿಸುವ ಮೂಲಕ Netflix ನ ಮನರಂಜನೆ ಎಲ್ಲೆಡೆ ಹರಿದಾಡಿತ್ತು. ಅಂದ್ರೆ ಇಂಟರ್ನೆಟ್ ಒಂದಿದ್ದರೆ ಸಾಕು ಯಾರದ್ದಾದರೂ ಖಾತೆ ಬಳಸಿ Netflix ನ ಲಾಭ ಪಡೆದುಕೊಳ್ಳುತ್ತಿದ್ದರು. ಆದರೆ Netflix ಈಗ ಇದಕ್ಕೆ ಬ್ರೇಕ್ ಹಾಕಿದೆ.

ಅಂದ್ರೆ ಒಬ್ಬರ ಖಾತೆಯ ಅಡಿಯಲ್ಲಿ ಹತ್ತಾರು ಮಂದಿ ಒಟಿಟಿ ಮನರಂಜನೆ ಪಡೆಯುವುದನ್ನು Netflix ಭಾರತದಲ್ಲಿ ಸ್ಥಗಿತಗೊಳಿಸಿದೆ. ಈ ಮೂಲಕ Netflix ನ ಖಾತೆ ಮತ್ತು ಪಾಸ್ವರ್ಡ್ ಬಳಸಿ ತಾವೂ ಅದರಲ್ಲಿ ಬರುವ ಚಿತ್ರ ಹಾಗೂ ವೆಬ್ ಸೀರೀಸ್ ಮಜ ಸವಿಯುವ ಆಸೆಗೆ Netflix ತಣ್ಣೀರೆರಚಿದೆ.

ತನ್ನ ನಿರ್ಧಾರವನ್ನು ಬ್ಲಾಗ್ ಮೂಲಕ ಹಂಚಿಕೊಂಡಿರುವ Netflix “ತಾವು ಮಾತ್ರವಲ್ಲದೆ ಇತರರೊಂದಿಗೂ Netflix ಹಂಚಿಕೊಃಡ ಗ್ರಾಹಕರಿಗೆ ಇಂದಿನಿಂದ ಇಮೇಲ್ ಮೂಲಕ ಸಂದೇಶ ಕಳಿಸಲಾಗುವುದು. ನಿಗದಿತ ಸಾಧನ (Device) ಹೊರತುಪಡಿಸಿ, ಅದೇ ಖಾತೆಯಿಂದ ಬೇರೆ ಕಡೆ ಖಾತೆ ತೆರೆದರೆ ಪ್ರೊಫೈಲ್ ವರ್ಗಾವಣೆ ಮತ್ತು ಬಳಕೆಯ ನಿರ್ವಹಣೆ ಹಾಗೂ ಸಾಧನಗಳ ಕುರಿತು ಮಾಹಿತಿ ಕೇಳಲಾಗುವುದು” ಎಂದು ಹೇಳಿದೆ.

“ನಮ್ಮ ಗ್ರಾಹಕರಿಗೆ ಮನರಂಜನೆಯ ಹಲವು ಅವಕಾಶಗಳು ಇರುವುದು ನಮಗೆ ಗೊತ್ತಿದೆ. ಹೀಗಾಗಿ ಹೊಸಹೊಸ ಮನರಂಜನೆಗಾಗಿ ನಾವು ತುಂಬಾ ಹಣ ವ್ಯಯಿಸುತ್ತಿದ್ದೇವೆ. ವೀಕ್ಷಕರ ಅಭಿರುಚಿ, ಮನಸ್ಸು ಹಾಗೂ ಭಾಷೆಗಳಿಗೆ ತಕ್ಕಂತೆ ವಿಸ್ತೃತ ಆಯ್ಕೆಯನ್ನು ನೀಡುತ್ತಿದ್ದೇವೆ. ಹೀಗಾಗಿ ನೆಟ್ಫ್ಲಿಕ್ಸ್ ನೋಡುಗರಿಗೆ ವಿಶೇಷ ಮನರಂಜನೆ ಕೊಡುವುದು ನಮ್ಮ ಉದ್ದೇಶ” ಎಂದು ಹೇಳಿದೆ.

ಗ್ರಾಹಕರು ಏನು ಮಾಡಬೇಕು?
ಈಗಾಗಲೇ ಖಾತೆ ಹೊಂದಿರುವವರು ತಮ್ಮ ಖಾತೆಯ ಮೂಲಕ ಯಾರೆಲ್ಲಾ ಲಾಗಿನ್ (Login) ಆಗಿದ್ದಾರೆ ಎಂದು ಪತ್ತೆ ಹಚ್ಚಬೇಕು. ಇದಕ್ಕಾಗಿ ಸೆಕ್ಯೂರಿಟಿ ಅಂಡ್ ಪ್ರೈವೆಸಿ ಸೆಟ್ಟಿಂಗ್ ನಲ್ಲಿ ಇರುವ ತಮ್ಮ ಖಾತೆಯನ್ನು ಆಯ್ಕೆ ಮಾಡಿ, ಮ್ಯಾನೇಜ್ ಆಕ್ಸೆಸ್ ಅಂಡ್ ಡಿವೈಸ್ ನ್ನು ಆಯ್ಕೆ ಮಾಡಬೇಕು. ಯಾವುದಕ್ಕೆ ಅನುಮತಿ ಇಲ್ಲವೋ ಅದನ್ನು ಸೈನ್ ಔಟ್ (sign out) ಮಾಡಿ ಪಾಸ್ವರ್ಡ್ ಬದಲಿಸಬೇಕು. ಇಷ್ಟಾದರೂ ಅದೇ ಖಾತೆ ಬೇರೆ ಕಡೆ ಬಳಸುತ್ತಿದ್ದರೆ ತಮ್ಮ ಖಾತೆಯನ್ನು ತಾವೇ ಕಳೆದುಕೊಳ್ಳುವ ಸಾಧ್ಯತೆ ಇದೆ.

ಇನ್ನು ಒಂದೇ ಇಂಟರ್ನೆಟ್ ಸಂಪರ್ಕ ಹೊಂದಿರುವ ಟಿವಿಯನ್ನು ನೆಟ್ಫ್ಲಿಕ್ಸ್ ಬಳಕೆದಾರರ ಸ್ವತ್ತು ಎಂದು ಪರಿಗಣಿಸುತ್ತದೆ. ಹೀಗಾಗಿ ಅಂತಹ ಗ್ರಾಹಕರು ತಮ್ಮ ಟಿವಿ ಮೂಲಕ Netflix ಗೆ ಸೈನ್ ಇನ್ ಆಗಬೇಕು ಎಂದು ಸಂಸ್ಥೆ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು