Sunday, May 11, 2025

ಸತ್ಯ | ನ್ಯಾಯ |ಧರ್ಮ

ಬಾಗಲಕೋಟೆಯಲ್ಲಿ ತಂದೆಯನ್ನೇ ಕೊಂದು ಕೊಳವೆ ಬಾವಿಗೆ ತುರುಕಿದ ಮಗ

ಬಾಗಲಕೋಟೆ: ತಂದೆಯನ್ನು ಕೊಂದು 30 ತುಂಡುಗಳನ್ನಾಗಿ ಮಾಡಿ ಕೊಳವೆ ಭಾವಿಗೆ ತುರುಕಿದ ಘಟನೆ ಬಾಗಲಕೋಟೆಯ ಮುಧೋಳದಲ್ಲಿ ನಡೆದಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಇತ್ತೀಚ್ಚೆಗೆ ಅತಿ ಹೆಚ್ಚು ಸುದ್ದಿಯಲ್ಲಿರುವ, ಜನರನ್ನು ನಿಬ್ಬೆರಗು ಗೊಳಿಸಿದ ಘಟನೆ ದೆಹಲಿಯಲ್ಲಿ ಶ್ರದ್ಧಾಳ ಕೊಲೆ ಪ್ರಕರಣ. ಶ್ರದ್ಧಾಳನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿ ಪ್ರಿಡ್ಜ್‌ನಲ್ಲಿ ಇಟ್ಟರೆ, ಮತ್ತೊಂದು ಪ್ರಕರಣದಲ್ಲಿ ಸೂಟ್ಕೇಸ್‌ನಲ್ಲಿ, ಚೀಲದಲ್ಲಿ ಹೀಗೆ ಒಂದೊಂದಾಗಿ ಹೆಚ್ಚಾಗುತ್ತಲೇ ಇವೆ. ಇದೀಗ ಅದೇ ರೀತಿ ಮಗ ತನ್ನ ತಂದೇಯನ್ನೇ ಕೊಂದು ಕೊಳವೆಬಾವಿಯನ್ನು ತುರುಕಿರುವ ಘಟನೆ  ಬಾಗಲಕೋಟೆಯಲ್ಲಿ ನಡೆದಿದೆ.

ತಂದೆ ಕುಡಿದ ಮತ್ತಿನಲ್ಲಿ ಮನೆಗೆ ಬಂದು ಪ್ರತಿದಿನ ಗಲಾಟೆ ಮಾಡುತ್ತಿದ್ದ ಕಾರಣ ಅದನ್ನು ಸಹಿಸಿಕೊಳ್ಳಲಾಗದೆ 21 ವರ್ಷದ ವಿಠ್ಠಲ ಕುಳಲಿ ಎಂಬಾತನು ಆತನ ತಂದೆ ಪರಶುರಾಮ ಕುಳಲಿ(54) ಅವರನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ಕತ್ತರಿಸಿ ಕೊಳವೆ ಬಾವಿಯಲ್ಲಿ ತುರುಕಿರುವ ಘಟನೆ ಮುಧೋಳದಲ್ಲಿ ನಡೆದಿದೆ.

ಪತಿ ಕಾಣೆಯಾಗಿದ್ದಾರೆಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ನಂತರ ಕೊಲೆ ರಹಸ್ಯ ಬಯಲಾಗಿದ್ದು, ಈ ಕುರಿತು ಮುಧೋಳ ಪೊಲೀಶ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಠ್ಠಲ್‌ ಕುಳಲಿಯನ್ನು ಪೊಲೀಸರು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page