ನ್ಯೂಯಾರ್ಕ್: ವಿಶ್ವಾದ್ಯಂತ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ವಿಶ್ವಸಂಸ್ಥೆಯ ವರದಿಯು ಆತಂಕ ವ್ಯಕ್ತಪಡಿಸಿದೆ.
ಪ್ರತಿದಿನ ಸರಾಸರಿ 137 ಮಹಿಳೆಯರು ಅಥವಾ ಯುವತಿಯರು (ಅಂದರೆ ಪ್ರತಿ 10 ನಿಮಿಷಕ್ಕೆ ಒಬ್ಬರ ಕೊಲೆ) ತಮ್ಮ ಸಂಗಾತಿ ಅಥವಾ ಕುಟುಂಬ ಸದಸ್ಯರ ಕೈಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. 2024 ರಲ್ಲಿ ವಿಶ್ವಾದ್ಯಂತ ಸ್ತ್ರೀ ಹತ್ಯೆಗಳ ಕುರಿತು ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ವಿಷಯಗಳು ಹೊರಬಿದ್ದಿವೆ.
2024 ರಲ್ಲಿ ಒಟ್ಟು 83,000 ಮಹಿಳೆಯರು ಮತ್ತು ಯುವತಿಯರು ಪುರುಷರ ಕೈಯಲ್ಲಿ ಕೊಲೆಯಾಗಿದ್ದಾರೆ. ಈ ಹತ್ಯೆಗಳಲ್ಲಿ 60 ಪ್ರತಿಶತದಷ್ಟು (60%) ಹತ್ಯೆಗಳು ಸಂತ್ರಸ್ತರಿಗೆ ಅತ್ಯಂತ ಆಪ್ತರಾದವರೇ ಮಾಡಿದ್ದಾರೆ ಎಂದು ವರದಿ ಹೇಳಿದೆ. “ಸಂಖ್ಯಾಶಾಸ್ತ್ರ ಹೇಳುವುದೇನೆಂದರೆ, ಮಹಿಳೆಯರು ಮುಖ್ಯವಾಗಿ… ಮನೆಯೊಳಗೇ ಹೆಚ್ಚು ಹಿಂಸೆಗೆ ಒಳಗಾಗುತ್ತಿದ್ದಾರೆ,” ಎಂದು ವರದಿಯು ಸ್ಪಷ್ಟಪಡಿಸಿದೆ.
