ಬೆಂಗಳೂರು,ಅಕ್ಟೋಬರ್.31: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ನೋಂದಾಯಿತವಾಗಿರುವ ನಾಗರಿಕರ ಕೋವಿಡ್-19 ಪರೀಕ್ಷಾ ವಿವರಗಳ ಮಾಹಿತಿಯನ್ನು ಕದ್ದಿರುವುದಾಗಿ ಹ್ಯಾಕರ್ ಒಬ್ಬ ಹೇಳಿಕೊಂಡಿದ್ದಾನೆ.
ದೇಶದಲ್ಲಿ ನಡೆದ ಅತ್ಯಂತ ದೊಡ್ಡ ಡೇಟಾ ಸೋರಿಕೆಯ ಪ್ರಕರಣ ಇದಾಗಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಿಂದ 81.5 ಕೋಟಿಗೂ ಹೆಚ್ಚು ಭಾರತೀಯರ ವೈಯಕ್ತಿಕ ವಿವರಗಳು ಆನ್‌ಲೈನ್‌ನಿಂದ ಸೋರಿಕೆಯಾಗಿವೆ.
ಈ ಮಾಹಿತಿ ಸೋರಿಕೆ ಮೊದಲು ರೆಸೆಕ್ಯುರಿಟಿ ಎಂಬ ಅಮೆರಿಕದ ಸೈಬರ್ ಭದ್ರತೆ ಮತ್ತು ಗುಪ್ತಚರ ಸಂಸ್ಥೆಯ ಬಂದಿದೆ. ಈ ಸೈಬರ್ ಸಂಸ್ಥೆಯ ಪ್ರಕಾರ, ‘threat actor’ ಅಲಿಯಾಸ್ ‘pwn001’ ಬ್ರೀಚ್ ಫೋರಮ್‌ಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾನೆ.
ಯಾವ ಮಾಹಿತಿ ಸೋರಿಕೆಯಾಗಿದೆ?
pwn001, X ಹ್ಯಾಂಡಲ್ಸ್ (ಹಿಂದೆ Twitter), ಹೆಸರು, ಫೋನ್ ಸಂಖ್ಯೆ ಮತ್ತು ವಿಳಾಸಗಳೊಂದಿಗೆ ಆಧಾರ್ ಮತ್ತು ಪಾಸ್‌ಪೋರ್ಟ್ ಮಾಹಿತಿಯನ್ನೂ ಲೀಕ ಮಾಡಿದ್ದಾನೆ.; ICMR ನಲ್ಲಿ ನೋಂದಾಯಿಸಲಾದ ನಾಗರಿಕರ ಕೋವಿಡ್-19 ಪರೀಕ್ಷಾ ವಿವರಗಳಿಂದ ಇವುಗಳನ್ನು ಕದ್ದಿರುವುದಾಗಿ ಹ್ಯಾಕರ್ ಹೇಳಿಕೊಂಡಿದ್ದಾನೆ.
ಇದಕ್ಕೆ ಪುರಾವೆಯಾಗಿ ‘pwn001’ ಆಧಾರ್ ಡೇಟಾದೊಂದಿಗೆ ನಾಲ್ಕು ದೊಡ್ಡ ಮಾದರಿಗಳೊಂದಿಗೆ ಸ್ಪ್ರೆಡ್‌ಶೀಟ್‌ಗಳನ್ನು ಪೋಸ್ಟ್ ಮಾಡಿದ್ದಾನೆ. ಇವುಗಳನ್ನು ಅಧಿಕೃತ ಆಧಾರ್ ಕಾರ್ಡ್ ಐಡಿಗಳು ಎಂದು ಗುರುತಿಸಲಾಗಿದೆ.
ICMR ಅಥವಾ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲದಿದ್ದರೂ, ICMR ನಿಂದ ದೂರನ್ನು ಸ್ವೀಕರಿಸಿದ ನಂತರ ಸಿಬಿಐ ಈ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯಿದೆ.
.