Friday, June 14, 2024

ಸತ್ಯ | ನ್ಯಾಯ |ಧರ್ಮ

ಆಮ್‌ ಆದ್ಮಿ ಪಕ್ಷದ ಪ್ರಣಾಳಿಕೆ ಬಿಡುಗಡೆ : ಅಭಿವೃದ್ಧಿ ಮಾರ್ಗದಲ್ಲಿ ಪೃಥ್ವಿ ರೆಡ್ಡಿ  

ವಿಜಯಪುರ : ಇಂದು ವಿಜಯಪುರ ಆಮ್‌ ಆದ್ಮಿ ಪಕ್ಷದವರು ಚುನಾವಣೆಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 25 ವರ್ಷಗಳಿಂದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕಕ್ಷಗಳಿಗೆ ಅವಕಾಶ ಕೊಟ್ಟಿದ್ದೀರ ಈಗ ಆಮ್‌ ಆದ್ಮಿ ಪಕ್ಷಕ್ಕ ಒಂದು ಅವಕಾಶ ಕೊಡಿ ಎಂದು ಎಎಪಿ ಅಧ್ಯಕ್ಷ ಪೃಥ್ವಿ ರೆಡ್ಡಿ  ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಪ್ರಧಾನಿ ಮಂತ್ರಿ ಮೋದಿ ಮತ್ತು ಬಿಜೆಪಿ  ನಾಯಕರು ಇಡೀ ದೇಶದಲ್ಲಿ ಓಡಾಡಿ ಕಾಂಗ್ರೆಸ್‌ ಮುಕ್ತ ಭಾರತ  ಮಾಡುತ್ತೇವೆ ಅಂತಿದ್ದಾರೆ. ನೀವು ನಿಜವಾದ ರಾಜಕೀಯ ನೋಡಬೇಕು ಅಂದರೆ ವಿಜಯಪುರಕ್ಕೆ ಬರಬೇಕು. ಚುನಾವಣೆ ಅನ್ನೊದು ಒಂದು ನೆಪ ಅಷ್ಟೇ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರು ಬಸನಗೌಡ ಪಾಟೀಲ್‌ ಯತ್ನಾಳ್‌ ಆಗಲಿ, ಎಂ.ಬಿ.ಪಾಟೀಲ್‌ ಆಗಿರಲಿ ಅವರ ಹೊಂದಾಣಿಕೆ ನೋಡಿದರೆ ಎಲ್ಲರಿಗೂ ಆಶ್ಚರ್ಯ ಆಗುತ್ತೆ. 35 ವಾರ್ಡ್‌ ಗಳನ್ನು ಹಂಚಿಕೊಂಡು ಎಲ್ಲಿ ಕಾಂಗ್ರೆಸ್‌ ಕ್ಯಾಂಡಿಡೇಟ್ಸ್‌ ಪ್ರಬಲವಾಗಿದ್ದಾರೆ ಅಲ್ಲಿ ಕಾಂಗ್ರೆಸ್‌ ಗೆದ್ದು ಬರಲಿ ಅಂತ ಬಿಜೆಪಿ ವೀಕ್‌ ಕ್ಯಾಂಡಿಡೇಟ್‌ ಅನ್ನು ಹಾಕಿದ್ದಾರೆ. ಬಿಜೆಪಿ ಪ್ರಬಲವಾಗಿ ಇರುವ ಕಡೆ ಕಾಂಗ್ರೆಸ್‌ ವೀಕ್‌ ಕ್ಯಾಂಡಿಡೇಟ್‌ ಅನ್ನು ಹಾಕಿದ್ದಾರೆ. ಇದರಿಂದ ಒಂದೇ ವಿಷಯ ತಿಳಿಯುತ್ತೆ. ನೀವು ಬಿಜೆಪಿ, ಕಾಂಗ್ರೆಸ್‌ ಯಾವುದಕ್ಕಾದರೂ ವೋಟ್‌ ಮಾಡಿ ಕೊನೆಯಲ್ಲಿ ನಿಮಗೆ ಸಿಗುವುದು ಕೆಟ್ಟ ಆಸ್ಪತ್ರೆ, ಕೆಟ್ಟ ಚರಂಡಿ, ಕೆಟ್ಟ ಸರ್ಕಾರಿ ಶಾಲೆ ಅಷ್ಟೇ ಎಂದು ಹೇಳಿದ್ದಾರೆ.

ನಾವು ಇವತ್ತು ಒಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಆಮ್‌ ಆದ್ಮಿ ಪಕ್ಷಕ್ಕೆ ನೀವು ವೋಟ್‌ ಹಾಕಿದರೆ ನಿಮ್ಮ ಜೀವನ ಎಷ್ಟರ ಮಟ್ಟಿಗೆ ಬದಲಾಗುತ್ತದೆ ಎಂದು ಪ್ರಣಾಳಿಕೆಯ ಬಗ್ಗೆ ಮಾತನಾಡಿ,

1.ಪ್ರತೀ ಮೂರು ವಾರ್ಡ್‌ಗೆ ದೆಹಲಿ ಮಾದರಿಯಲ್ಲಿ ಒಂದು ಮೊಹಲ್ಲಾ ಕ್ಮಿನಿಕ್‌ ಮಾಡುತ್ತೇವೆ. ಅಲ್ಲಿ ಪ್ರತಿಯೊಬ್ಬರೂ ಉಚಿತವಾಗಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬಹುದು.

2.ಪ್ರತೀ 5 ವಾರ್ಡ್‌ ಗೆ ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆ

3.ಪ್ರತೀ 5 ವಾರ್ಡ್‌ಗೆ ಒಂದು ಸಮುದಾಯ ಭವನ

4.ಪಾರ್ಕ್‌ಗಳು, ರಸ್ತೆಗಳು, ಕಸ ಮುಕ್ತ ಹಸಿರು ವಿಜಯಪುರ ಮಾಡಬೇಕು ಎಂದುಕೊಂಡಿದ್ದೇವೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.

ಹಾಗಯೇ 25 ವರ್ಷಗಳಿಂದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕಕ್ಷಗಳಿಗೆ ಅವಕಾಶ ಕೊಟ್ಟಿದ್ದೀರ ಈಗ ಆಮ್‌ ಆದ್ಮಿ ಪಕ್ಷಕ್ಕ ಒಂದು ಅವಕಾಶ ಕೊಡಿ ಎಂದು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು