Home ರಾಜ್ಯ ಚಿತ್ರದುರ್ಗ ಚಿತ್ರದುರ್ಗ | ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ, ಪಕ್ಷ ಬದಲಾಯಿಸಿ : ಪಂಜಾಬ್ ಸಿಎಂ ಭಗವಂತ...

ಚಿತ್ರದುರ್ಗ | ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಅಲ್ಲ, ಪಕ್ಷ ಬದಲಾಯಿಸಿ : ಪಂಜಾಬ್ ಸಿಎಂ ಭಗವಂತ ಮಾನ್

0

ಬಿಜೆಪಿಗೆ ಪರ್ಯಾಯವಾಗಿ ಕಾಂಗ್ರೆಸ್‌ಗೆ ಮತ ಹಾಕಿದರೆ ಬದಲಾವಣೆ ಅಸಾಧ್ಯ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಖರೀದಿಸುತ್ತದೆ. ಪಕ್ಷ ಬದಲಾದರೂ ಆಡಳಿತ ಒಂದೇ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಮ್ ಆದ್ಮ ಪಾರ್ಟಿ ಭಾನುವಾರ ಹಮ್ಮಿಕೊಂಡಿದ್ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶವನ್ನು ಶತಮಾನಗಳ ಕಾಲ ಆಳಿದ ಬ್ರಿಟಿಷರು ಸಂಪತ್ತು ಲೂಟಿ ಮಾಡಿದರು. ಭಾರತೀಯರಿಗೆ ಇದು ಬಹುದೊಡ್ಡದಾಗಿ ಕಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಮಿತ್ರರು ಬ್ರಿಟಿಷರನ್ನು ನಾಚಿಸುವಷ್ಟು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರೈಲು ನಿಲ್ದಾಣದಲ್ಲಿ ಟೀ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಅಧಿಕಾರ ಸಿಕ್ಕ ಬಳಿಕ ರೈಲುಗಳನ್ನೇ ಮಾರಾಟ ಮಾಡಿದರು. ವಿಮಾನ, LIC ಸೇರಿ ಸರ್ಕಾರಿ ಸ್ವಾಮ್ಯದ ಪ್ರತಿಯೊಂದನ್ನು ಖಾಸಗಿಯವರಿಗೆ ಒತ್ತೆ ಇಡುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಮಿತ್ರರು ಇಡೀ ದೇಶವನ್ನು ದೋಚುತ್ತಿದ್ದಾರೆ ಎಂದು ದೂರಿದರು.

ಮನ್ ಕಿ ಬಾತ್’ ಮೂಲಕ ಮೋದಿ ಅವರ ಮಾತನ್ನು ಜನರು ಕೇಳಿದ್ದಾರೆ ಮತ್ತವರನ್ನು ಎರಡು ಬಾರಿ ಪ್ರಧಾನಿ ಮಾಡಿದ್ದಾರೆ. ಆದರೆ, ಮೋದಿ ಜನರ ಮಾತು ಕೇಳುವುದು ಯಾವಾಗ ಎಂಬ ಪ್ರಶ್ನಿಸಿದ್ದಾರೆ.

ಪ್ರತಿಯೊಂದಕ್ಕೂ ತೆರಿಗೆ ವಿಧಿಸಿ ಬಡವರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಟೀ, ಮೊಸರು,ದೋಸೆ, ಪರೋಟ, ಇಂಧನ, ಊಟ, ಫ್ಯಾನ್ ದ್ವಿಚಕ್ರ ವಾಹನದ ಮೇಲೆ ಜಿಎಸ್‌ಟಿ ಹೇರಲಾಗಿದೆ. ಇಂತಹ ಆಡಳಿತ ನಿಮಗ ಬೇಕಾ?’ ಎಂದು ಪ್ರಶ್ನಿಸಿದರು.

You cannot copy content of this page

Exit mobile version