Wednesday, June 19, 2024

ಸತ್ಯ | ನ್ಯಾಯ |ಧರ್ಮ

ಆತ್ಮಾಹುತಿ ಬಾಂಬ್ ಸ್ಫೋಟ: 35 ಕ್ಕೇರಿದ ಸಾವಿನ ಸಂಖ್ಯೆ

ಕಾಬುಲ್ : ಕಾಜ್ ಉನ್ನತ ಶಿಕ್ಷಣ ಕೇಂದ್ರದ ಕೊಠಡಿಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ವಿದ್ಯಾರ್ಥಿಗಳ ಸಾವಿನ ಸಂಖ್ಯೆ 35 ಕ್ಕೆ ಏರಿಕೆಯಾಗಿದೆ ಎಂದು ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆ ನಿಯೋಗವು ಮಾಹಿತಿ ನೀಡಿದೆ.

ಶುಕ್ರವಾರದಂದು ಕಾಬುಲ್ ನ ದೇಷ್ಟ್ – ಇ – ಬಾರ್ಚಿಯಲ್ಲಿರುವ ಶಿಕ್ಷಣ ಕೇಂದ್ರದ ಕೊಠಡಿಯೊಂದರಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳ ಪರೀಕ್ಷೆಗೆ ಪೂರ್ವ ತಯಾರಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಬಾಂಬ್ ದಾಳಿಕೋರನೊಬ್ಬನು ಆತ್ಮಾಹುತಿಯಾಗಿ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದ ಘಟನೆ ನಡೆದಿದೆ.

ಈ ಸ್ಫೋಟದಿಂದಾಗಿ 35 ಜನರು ಮೃತಪಟ್ಟಿದ್ದು, 82 ಕ್ಕಿ ಹೆಚ್ಚು ವಿದ್ಯಾರ್ಥಿಗಳು ಗಂಭೀರ ಸ್ಥಿತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಿಶ್ವಸಂಸ್ಥೆ ನಿಯೋಗವು ಮಾಹಿತಿ ನೀಡಿದೆ.

ಇಷ್ಟು ದೊಡ್ಡ ದುರಂತ ನಡೆದರೂ ಇದುವರೆಗೆ ಯಾವುದೇ ಸಂಘಟನೆಯೂ ನಡೆದ ದಾಳಿಯ ಬಗ್ಗೆ ಹೊಣೆ ಹೊತ್ತುಕೊಂಡಿಲ್ಲ ಎಂದು ಕಾಜ್ ಉನ್ನತ ಶಿಕ್ಷಣ ಕೇಂದ್ರ ತಿಳಿಸಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ಕುವೆಂಪು-ಗಾಂಧಿ ಭೇಟಿ ಹಿಂದಿನ ರಹಸ್ಯವೇನು?: ಚಿಂತಕ ನಿಕೇತ್‌ ರಾಜ್‌ ಮೌರ್ಯ ಮಾತು Niketh Talks | Gandhi | Kuvempu

Related Articles

ಇತ್ತೀಚಿನ ಸುದ್ದಿಗಳು