ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋನ ‘ಜೋಡಿ ನಂ 1’ ಫಿನಾಲೆ ಅದ್ದೂರಿಯಾಗಿ ನಡಿದಿದ್ದು, ನಟ ಅಭಿಜಿತ್, ರೋಹಿಣಿ ಅವರು ಈ ಶೋನ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಹೌದು, ಕನ್ನಡದ ಹಿರಿಯ ನಟ ಅಭಿಜಿತ್ – ರೋಹಿಣಿ ದಂಪತಿ ‘ಜೋಡಿ ನಂ 1’ ರಿಯಾಲಿಟಿ ಶೋನ ವಿಜೇತರಾಗಿ ಹೊರಹೊಮ್ಮಿದ್ದು, 5 ಲಕ್ಷ ರೂಪಾಯಿಗಳ ಬಹುಮಾನ ಪಡೆದಿದ್ದಾರೆ. ಈ ಕಾರ್ಯಕ್ರಮಕ್ಕೆ ಐಂದ್ರಿತಾ ರೇ, ದಿಗಂತ್ ಸಾಕ್ಷಿಯಾದರು.
ಜೀ ವಾಹಿನಿಯ ಜೋಡಿ ನಂ 1 ಶೋನ ಮುಖ್ಯ ಜಡ್ಜ್ ಆಗಿ ನಟಿ ಮಾಳವಿಕಾ ಅವಿನಾಶ್, ‘ನೆನಪಿರಲಿ’ ಪ್ರೇಮ್ ಇದ್ದರು. ಪಟಪಟ ಮಾತಾಡುವ ಶ್ವೇತಾ ಚೆಂಗಪ್ಪ ನಿರೂಪಣೆ ವಿಭಾಗದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಶಸ್ತಿ ಗೆದ್ದ ಖುಷಿಯಿಂದ ಮಾತನಾಡಿದ ರೋಹಿಣಿ ಅವರು, “ನನಗೆ ಇಲ್ಲಿ ಸಿಕ್ಕ ಹಣಕ್ಕಿಂತ ಜಾಸ್ತಿ ನಮಗೆ ವಿಜಯ ಸಿಕ್ಕಿ ಬಹಳ ಸಮಯ ಆಗಿತ್ತು. ಇದಾದ ಮೇಲೆ ನನ್ನ ಪತಿ ವಿಜಯಪತಾಕೆ ಹಾರಿಸಬೇಕು” ಎಂದು ಹೇಳಿದ್ದಾರೆ.

ಕೀರ್ತಿ-ಅರ್ಪಿತಾ ಜೋಡಿ ರನ್ನರ್ ಅಪ್ ಆಗಿದ್ದು, 3 ಲಕ್ಷ ರೂಪಾಯಿ ಬಹುಮಾನ ದೊರೆತಿದೆ. ಎರಡನೇ ರನ್ನರ್ ಅಪ್ ಆಗಿ ಸಂತು-ಮಾನಸಾ ದಂಪತಿಗಳು ಹೊರಹೊಮ್ಮಿದ್ದು ಈ ಜೋಡಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.