Sunday, August 10, 2025

ಸತ್ಯ | ನ್ಯಾಯ |ಧರ್ಮ

ಅರಮನೆಯತ್ತ ಹೆಜ್ಜೆ ಹಾಕಿದ ಅಭಿಮನ್ಯು ಬಳಗ – ಸಿಬ್ಬಂದಿಯಿಂದ ಅದ್ಧೂರಿ ಬೀಳ್ಕೊಡುಗೆ

ಮೈಸೂರು: ಮೈಸೂರಿಗೆ (Mysore) ಬಂದಿರುವ ದಸರಾ ಗಜಪಡೆಗೆ (Dasara) ಅಶೋಕಪುರಂನ ಅರಣ್ಯ ಭವನದಲ್ಲಿ ಪೂಜೆ ಮಾಡಿ ಅರಮನೆಗೆ (Palace) ಬೀಳ್ಕೊಡಲಾಗಿದೆ.

ಅರಿಶಿನ-ಕುಂಕುಮ ಹಚ್ಚಿ ಪೂಜೆ
ಆಗಸ್ಟ್‌ 4 ರಂದು ಬಂದಿದ್ದ ಗಜಪಡೆಯನ್ನ ಇದೀಗ ಅರಮನೆಗೆ ಕಳುಹಿಸಲಾಗಿದ್ದು, ಅರಮನೆಯ ಪುರೋಹಿತ ಎಸ್‌. ವಿ ಪ್ರಹ್ಲಾದ್‌ ರಾವ್‌ ಅವರ ನೇತೃತ್ವದಲ್ಲಿ ಪೂಜೆಯನ್ನ ಮಾಡಲಾಗಿದ್ದು, ಅಭಿಮನ್ಯು, ಮಹೇಂದ್ರ, ಧನಂಜಯ, ಭೀಮ,  ಕಾವೇರಿ, ಲಕ್ಷ್ಮಿಯನ್ನ ಸಾಲಾಗಿ ನಿಲ್ಲಿಸಿ, ಅವುಗಳ ಪಾದವನ್ನ ತೊಳೆದು ಅರಿಶಿನ-ಕುಂಕಮ ಹಚ್ಚಿ, ಹೂವು ಹಾಕಿ ಪೂಜೆ ಮಾಡಲಾಗಿದೆ. ಬಗೆಬಗೆಯ ತಿಂಡಿ ನೀಡಿ ಬೀಳ್ಕೊಡುಗೆ
ಕೇವಲ ಪೂಜೆ ಮಾತ್ರವಲ್ಲದೇ, ಬಗೆಬಗೆಯ ತಿಂಡಿಗಳನ್ನ ಸಹ ನೈವೇದ್ಯ ಮಾಡಲಾಗಿದೆ. ಗಂದ, ಪಂಚಫಲ, ಚಕ್ಕಲಿ, ಮೋದಕ, ಕಲ್ಲು ಸಕ್ಕರೆ, ನಿಪ್ಪಟ್ಟು, ಕಡುಬು, ಬೆಲ್ಲ, ದ್ರಾಕ್ಷಿ, ಹೋಳಿಗೆ, ಕೋಡಂಬಿ ಹೀಗೆ ಆನೆಗಳಿಗೆ ವಿವಿಧ ವಸ್ತುಗಳನ್ನ ನೈವೇದ್ಯ ಮಾಡಲಾಗಿದೆ.ಡಿಸಿಎಫ್‌ ಪ್ರಭುಗೌಡ ಅವರು ಆನೆಗಳಿಗೆ ಹೂವುಗಳನ್ನ ಅರ್ಪಿಸಿ ಅರಮನೆಗೆ ಕಳುಹಿಸಿದ್ದಾರೆ. ಮೈಸೂರಿನ ಅಶೋಕ ಸರ್ಕಲ್‌, ರಾಮಸ್ವಾಮಿ ಸರ್ಕಲ್‌ ಹಾಗೂ ಚಾಮರಾಜ್‌ ಡಬಲ್‌ ರೋಡ್‌ ಮೂಲಕ ಗಜಪಡೆ

ಆಗಸ್ಟ್‌ 4ರಂದು ಬಂದಿದ್ದ ಗಜಪಡೆ
ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡ ಮೈಸೂರಿಗೆ ಆಗಸ್ಟ್‌ 4ರಂದು ಬಂದಿದ್ದವು, ಆ ದಿನ ಸಹ ಆನೆಗಳಿಗೆ ಪೂಜೆ ಮಾಡಿ ಪುಷ್ಪಾರ್ಚನೆಯೊಂದಿಗೆ ಗಜ ಪ್ರಯಾಣ ಆರಂಭ ಮಾಡಲಾಗಿತ್ತು. ಮೊದಲ ತಂಡದಲ್ಲಿ ಮತ್ತಿಗೂಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಏಕಲವ್ಯ ಹಾಗೂ ಬಳ್ಳೆ ಶಿಬಿರದ ಲಕ್ಷ್ಮಿ, ದುಬಾರೆ ಶಿಬಿರದ ಪ್ರಶಾಂತ, ಧನಂಜಯ, ಕಂಜನ್‌ ಹಾಗೂ ಕಾವೇರಿ ಆನೆಗಳು ಮೈಸೂರಿಗೆ ಬಂದಿದ್ದವು.

ಈ ಬಾರಿ ಸಹ 59 ವರ್ಷದ ಅಭಿಮನ್ಯು ಅಂಬಾರಿ ಹೊರಲಿದ್ದಾನೆ ಎಂದು ಡಿಎಸ್‌ಎಫ್‌ ಪ್ರಭುಗೌಡ ಮಾಹಿತಿ ನೀಡಿದ್ದಾರೆ. ಅಲ್ಲದೇ, ಈಗಾಗಲೇ ಆನೆಗಳ ಆರೋಗ್ಯ ತಪಾಸಣೆ ಆಗಿದ್ದು, ಅವುಗಳ ಹೆಲ್ತ್‌ ಕಾರ್ಡ್‌ ಅನ್ನು ದಸರಾ ಹೈ ಪವರ್‌ ಕಮಿಟಿಗೆ ಕಳುಹಿಸಲಾಗಿತ್ತು. ಅವುಗಳ ಆಧಾರದ ಮೇಲೆ ಯಾವೆಲ್ಲಾ ಆನೆಗಳು ದಸರಾದಲ್ಲಿ ಭಾಗವಹಿಸಲಿದೆ ಎಂಬುದನ್ನ ಹೈ ಪವರ್‌ ಕಮಿಟಿ ನಿರ್ಧಾರ ಮಾಡಿ ಪಟ್ಟಿ ಬಿಡುಗಡೆ ಮಾಡಿತ್ತು. ಈ ಬಾರಿಯ ದಸರಾ 11 ದಿನಗಳ ಕಾಲ ನಡೆಯಲಿದ್ದು. ಹೀಗಾಗಿ ಮತ್ತಿಗೋಡು ಕ್ಯಾಂಪ್, ದೊಡ್ಡ ಹರವೆ, ಭೀಮನಕಟ್ಟೆ, ದುಬಾರೆ, ಬಳ್ಳೆ ಹಾಗೂ ಬಂಡೀಪುರ ಕ್ಯಾಂಪ್ಗಳಿಗೆ ಅಧಿಕಾರಿಗಳು ಮತ್ತು ಪಶುವೈದ್ಯರು ಭೇಟಿ ನೀಡ್ಜ್ ಆನೆಗಳ ಆರೋಗ್ಯ ತಪಾಸಣೆ ನಡೆಸಿದ್ದರು.  ಆನೆ ಕ್ಯಾಂಪ್ ಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸುಮಾರು 25 ಗಂಡು ಹಾಗೂ ಹೆಣ್ಣಾನೆಗಳ ಆರೋಗ್ಯ ಪರಿಶೀಲನೆ ಮಾಡಿದ್ದರು.  ಪ್ರತಿವರ್ಷ ಹೆಣ್ಣು ಹಾಗೂ ಗಂಡು ಆನೆಗಳಿಗೆ ವಿವಿಧ ಪರೀಕ್ಷೆಗಳನ್ನ ಮಾಡಲಾಗುತ್ತದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page