Sunday, June 23, 2024

ಸತ್ಯ | ನ್ಯಾಯ |ಧರ್ಮ

ಅಭಿವೃದ್ಧಿ ಹೆಸರಲ್ಲಿ ಜನರಿಗೆ ಮೋಸ : ಡಿ.ಕೆ.ಶಿ ಆಕ್ರೋಶ

ಬೆಂಗಳೂರು: ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು. 2018ರಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಒಂದಾದರೂ ನಿಜವಾಗಿಸಿದ್ದೀರಾ. ನಾಡು- ನುಡಿಗಾಗಿ ಬಿಜೆಪಿ ಕೊಡುಗೆ ಶೂನ್ಯ. ಭ್ರಷ್ಟಾಚಾರದಲ್ಲಿ ಕರ್ನಾಟಕ ಇಂದು ದೇಶಕ್ಕೇ ರಾಜಧಾನಿಯಾಗಿದೆ . ಇದರ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇನ್ಮುಂದೆ ನಾವು ನಿರಂತರವಾಗಿ ಪ್ರಶ್ನೆ ಕೇಳುತ್ತೇವೆ. ನೈತಿಕತೆ ಇದ್ದರೆ ಉತ್ತರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ಸುಳ್ಳಿನ ಕಹಳೆ ಊದುತ್ತಿರುವ ಬಿಜೆಪಿ ನಾಯಕರೇ ನಮ್ಮ ಪ್ರಶ್ನೆಗೆ ಉತ್ತರ ನೀಡುತ್ತೀರಾ? ಎಂದು ಗುಡಿಗಿದರು.

ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದ ಮಾತು ಏನಾಯಿತು? ಉದ್ಯೋಗ ಸೃಷ್ಟಿ ಬಗ್ಗೆ ನೀವು ನೀಡಿದ್ದ ಭರವಸೆ ಏನಾಯಿತು? ಪರಿಶಿಷ್ಟ ಜಾತಿ-ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದಿದ್ದ 4,500 ಕೋಟಿ ಹಣ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಕ್ಕೆ ಬರುವ ದುರಾಸೆಯಿಂದ ಬಿಜೆಪಿ ಸರ್ಕಾರ ದೇಶದ ಜನರ ಮುಂದೆ ಸುಳ್ಳಿನ ಅರಮನೆಯನ್ನೇ ನಿರ್ಮಾಣ ಮಾಡಿತ್ತು. ಬಿಜೆಪಿ ಪ್ರಣಾಳಿಕೆಯಲ್ಲಿ ಶೇ. 90 ರಷ್ಟು ಇದ್ದಿದ್ದು ಬರೀ ಸುಳ್ಳು. ಚುನಾವಣಾ ಸಂದರ್ಭದಲ್ಲಿ ಜನರಿಗೆ ಮೋಸ ಮಾಡಿ ಈಗ ಬೇಡದ ಸಂಗತಿಗಳನ್ನು ಮುನ್ನಲೆಗೆ ತಂದು ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು