ಚಿಕ್ಕಬಳ್ಳಾಪುರ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದು ಎಂಟು ವರ್ಷಗಳಾಯಿತು ಆದರೂ ಕೂಡ ದೇಶದಲ್ಲಿ ಅಚ್ಚೇ ದಿನ್ ಎಲ್ಲಿ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥದಲ್ಲಿ ಕಾಂಗ್ರೇಸ್ ಪಾದಯಾತ್ರೆ ವೇಳೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂದು ಆಶ್ವಾಸನೆ ನೀಡಿದ್ದರು, ಆದರೆ ದೇಶದಲ್ಲಿ ಸುರಕ್ಷತೆ ಇದೆಯಾ?, ಜನಸಾಮಾನ್ಯರು- ರೈತರು ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ಇದೆಯಾ?, ದೇಶದಲ್ಲಿ ಇಂಧನಗಳ ಬೆಲೆ ಹೆಚ್ಚಾಗಿದೆ. 400 ರೂಪಾಯಿ ಇದ್ದ ಗ್ಯಾಸ್ ಬೆಲೆ 1100 ರೂ. ಆಗಿದೆ ಜೊತೆಗೆ ಉಳಿದ ಇಂಧನಗಳ ಬೆಲೆ ಕೂಡ ಹೆಚ್ಚಾಗಿದೆ. ಈ ಮೂಲಕ ದೇಶದಲ್ಲಿ ಜಿಎಸ್‌ಟಿ ಗಗನಕ್ಕೇರಿದೆ. ಹಾಗದರೆ ನಿಮ್ಮ ಅಚ್ಚೇ ದಿನ್ ಎಲ್ಲಿದೆ ಸ್ವಾಮಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.