Monday, June 17, 2024

ಸತ್ಯ | ನ್ಯಾಯ |ಧರ್ಮ

ತೆಲಂಗಾಣದಲ್ಲಿ ಆಕಸ್ಮಿಕ ಬೆಂಕಿ ; 8 ಮಂದಿ ಸಾವು

ತೆಲಂಗಾಣ ರಾಜ್ಯದ ಸಿಕಂದರಾಬಾದ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಅಕ್ಕಪಕ್ಕದ ಹೋಟೆಲ್ ಮತ್ತು ವಸತಿ ಸಮುಚ್ಚಯದ ಜನ ಭಯಬೀತರಾಗಿದ್ದಾರೆ.

ಹೋಟೆಲ್ ಮತ್ತು ಲಾಡ್ಜ್ ಸಮುಚ್ಚಯದ ನೆಲಮಹಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ರಿಚಾರ್ಜಿಂಗ್ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಈ ಬೆಂಕಿಯ ಪರಿಣಾಮದ ಹೊಗೆ ವ್ಯಾಪಕವಾಗಿ ಎಲ್ಲೆಡೆ ಆವರಿಸಿಕೊಂಡಿದೆ. ಸಧ್ಯಕ್ಕೆ ಸಿಕ್ಕ 8 ಮಂದಿ ಮೃತಪಟ್ಟಿದ್ದಾರೆ ಎಂದ ಸ್ಥಳೀಯವಾಗಿ ವರದಿಯಾಗಿದೆ.

ಉಳಿದಂತೆ ಹೋಟೆಲ್ ಸಮುಚ್ಚಯದಿಂದ ಹಲವಷ್ಟು ಮಂದಿ ಕಟ್ಟಡದ ಮೇಲಿಂದ ಹೊರಗೆ ಜಿಗಿದಿದ್ದಾರೆ. ಪರಿಣಾಮ ಕೆಲವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಅಷ್ಟು ಹೊತ್ತಿಗಾಗಲೇ ಸಾಕಷ್ಟು ಅನಾಹುತ ನಡೆದ ಪರಿಣಾಮ ಸುತ್ತಲಿನ ಜನ ಕೆಲ ಹೊತ್ತು ಭಯಬೀತ ವಾತಾವರಣದಲ್ಲಿ ಕಳೆಯುವಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು