Tuesday, December 9, 2025

ಸತ್ಯ | ನ್ಯಾಯ |ಧರ್ಮ

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಜೈಲಿನಲ್ಲಿ ನಟ ದರ್ಶನ್ ಗಲಾಟೆ, ಸಹ ಕೈದಿಗಳಿಗೆ ಕಿರುಕುಳ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಖ್ಯಾತ ನಟ ದರ್ಶನ್ ಅವರು ಸಹ ಕೈದಿಗಳೊಂದಿಗೆ ಗಲಾಟೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಸೆಲ್‌ನಲ್ಲಿರುವ ಇತರ ಕೈದಿಗಳನ್ನು ಅವರು ಪೀಡಿಸುತ್ತಿದ್ದಾರೆ ಎಂದು ವರದಿಯಾಗಿದೆ.

ದರ್ಶನ್ ಅವರ ಎರಡನೇ ಬಾರಿಯ ಜಾಮೀನು ರದ್ದಾದ ನಂತರ ಕಾರಾಗೃಹದ ನಿಯಮಗಳನ್ನು ಕಟ್ಟುನಿಟ್ಟಾಗಿ ಬಿಗಿಗೊಳಿಸಲಾಗಿದೆ. ಇದರಿಂದ ದರ್ಶನ್ ಅವರಲ್ಲಿ ಅಸಹನೆ ಹೆಚ್ಚಾಗಿದೆ ಎಂದು ಜೈಲು ಮೂಲಗಳು ಹೇಳುತ್ತಿವೆ. ದರ್ಶನ್ ಇತರ ಕೈದಿಗಳನ್ನು ಬಯ್ಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿಂದೆ, ಒಬ್ಬ ಸಹ ಕೈದಿ ದರ್ಶನ್‌ಗೆ ಊಟ ತಂದುಕೊಡುವ ಸೌಲಭ್ಯವಿತ್ತು.

ಇತ್ತೀಚೆಗೆ ಕೆಲವು ಕೈದಿಗಳು ಜಲ್ಸಾ (ಮೋಜು) ಮಾಡುತ್ತಿರುವ ವಿಡಿಯೋಗಳು ಹೊರಬಂದ ಹಿನ್ನೆಲೆಯಲ್ಲಿ ಸರ್ಕಾರವು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಐಪಿಎಸ್ ಅಂಶು ಕುಮಾರ್ ಅವರನ್ನು ಜೈಲು ಅಧಿಕಾರಿಯಾಗಿ ನೇಮಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page