ಅದಾನಿ ಗ್ರೂಪ್‌ನಿಂದ NDTV ಶೇ.29.18ರಷ್ಟು ಷೇರು ಸ್ವಾಧೀನ

ನವದೆಹಲಿ: ಅದಾನಿ ಗ್ರೂಪ್‌ ಮಾಧ್ಯಮ ಘಟಕದ ಎನ್‌ಡಿಟಿವಿಯ ಬಹುಪಾಲು ಪಾಲನ್ನು ಖರೀದಿಸಲಿದೆ ಎಂದು ತಿಳಿಸಿದೆ.

ಅದಾನಿ ಘಟಕವು ಪರೋಕ್ಷವಾಗಿ ನವದೆಹಲಿ ಟೆಲಿವಿಷನ್‌ ಲಿಮಿಟೆಡ್‌ (NDTV) ನಲ್ಲಿ ಶೇ 29.18 ರಷ್ಟು ಪಾಲನ್ನು ಖರೀದಿಸುತ್ತದೆ ಮತ್ತು ಶೇ 26 ರಷ್ಟನ್ನು ಮುಕ್ತ ಕೊಡುಗೆಯಾಗಿ ಸ್ವೀಕರಿಸುತ್ತದೆ. ಕಂಪನಿಯು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಕ್ತ ಕೊಡುಗೆಯು ರೂ 493 ಕೋಟಿ ಮೌಲ್ಯದ್ದಾಗಿದೆ.

ಇದಕ್ಕೂ ಮುನ್ನ ಮಂಗಳವಾರ ಅದಾನಿ ಅವರು ವಿಶ್ವಪ್ರಧಾನ್‌ ಕಮರ್ಷಿಯಲ್‌ ಪ್ರೈವೇಟ್‌ ಲಿಮಿಟೆಡ್‌ (VCPL)ನು 114 ಕೋಟಿ ರೂ.ಗೆ ಖರೀದಿಸಿರುವುದಾಗಿ ತಿಳಿಸಿದ್ದರು. VCPL, NDTV ಷೇರುದಾರ RRPR ನ ವಾರೆಂಟ್‌ಗಳನ್ನು ಹೊಂದಿದ್ದು, ಆ ವಾರೆಂಟ್‌ಗಳನ್ನು RRPRನ  ಶೇ 99.5 ರಷ್ಟು ಷೇರುಗಳಾಗಿ ಪರಿವರ್ತಿಸಲು ತನ್ನ ಹಕ್ಕುಗಳನ್ನು ಚಲಾಯಿಸಲಿದೆ.

Related Articles

ಇತ್ತೀಚಿನ ಸುದ್ದಿಗಳು