Thursday, June 13, 2024

ಸತ್ಯ | ನ್ಯಾಯ |ಧರ್ಮ

ಆಧಾರ್-ಪಡಿತರ ಕಾರ್ಡ್ ಲಿಂಕ್ ಮಾಡಲು 3 ತಿಂಗಳ ಗಡುವು ವಿಸ್ತರಣೆ

ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡದವರಿಗೆ ಕೇಂದ್ರ ಮತ್ತೊಂದು ಅವಕಾಶ ನೀಡಿದೆ. ಲಿಂಕ್‌ ಮಾಡಲು ಗಡುವು ವಿಸ್ತರಿಸುವುದಾಗಿ ಕೇಂದ್ರ ಪ್ರಕಟಿಸಿದೆ.

2024 ಜೂನ್ 30ರಂದು ಮುಕ್ತಾಯಗೊಳ್ಳಬೇಕಿದ್ದ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಪಡಿತರ ಚೀಟಿ ದುರ್ಬಳಕೆ ಹಿನ್ನೆಲೆಯಲ್ಲಿ ಅಕ್ರಮ ತಡೆಯಲು ಆಧಾರ್ ಮತ್ತು ಪಡಿತರ ಚೀಟಿ ಲಿಂಕ್ ಮಾಡಲು ಕೇಂದ್ರ ಆದೇಶಿಸಿದೆ.

ಆನ್‌ಲೈನ್ ಪೋರ್ಟಲ್ ಮೂಲಕ ಲಿಂಕ್ ಮಾಡಲು ಬಯಸುವವರು ರಾಜ್ಯ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್‌ಗೆ ಹೋಗಿ ಮತ್ತು ”link Aadhaar with the active ration card’ ಆಯ್ಕೆಯನ್ನು ಆರಿಸಿ. ಪಡಿತರ ಚೀಟಿ, ಆಧಾರ್ ಕಾರ್ಡ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ನಂತರ ಸಬ್ಮಿಟ್‌ ಮಾಡಬೇಕು.

ಅದರ ನಂತರ ನಿಮ್ಮ ಮೊಬೈಲ್ ಫೋನ್‌ಗೆ ಕಳುಹಿಸಲಾದ OTP ಸಂಖ್ಯೆಯನ್ನು ನಮೂದಿಸಿದರೆ ಆಧಾರ್ ಲಿಂಕ್ ಮಾಡುವಿಕೆ ಪೂರ್ಣಗೊಳ್ಳುತ್ತದೆ.

Related Articles

ಇತ್ತೀಚಿನ ಸುದ್ದಿಗಳು