Friday, January 17, 2025

ಸತ್ಯ | ನ್ಯಾಯ |ಧರ್ಮ

ಸಿರಿಧಾನ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿ – ಶಾಸಕ ಸ್ವರೂಪ್

ಹಾಸನ: ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಸಿರಿಧಾನ್ಯವನ್ನು ಬಳಕೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು. ಈ ಬಗ್ಗೆ ಹೆಚ್ಚೆಚ್ಚು ಪ್ರಚಾರದ ಅಗತ್ಯತೆ ಇದೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ತಿಳಿಸಿದರರು ನಗರದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ಕಾಲೇಜು ಕಾರೆಕೆರೆ ಹಾಗೂ ಹಾಸನ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಬಳಕೆ ಕುರಿತು ಅರಿವು ಮೂಡಿಸುವ ಜಾಥವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಧುನಿಕತೆಯ ಬದುಕಿನಲ್ಲಿ ಪೋಷಕ ಭರಿತ ಆಹಾರಗಳು ಸಿರಿ ಧಾನ್ಯಗಳು ಕಣ್ಮರೆಯಾಗುತ್ತಿರುವುದು ಕಂಡು ಬಂದಿರುತ್ತಿದೆ.

ತಮ್ಮ ತಮ್ಮ ಮನೆಯಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯವನ್ನು ಬಳಕೆ ಮಾಡುವುದರ ಮೂಲಕ ಉತ್ತಮ ಆರೋಗ್ಯವನ್ನು ತಮ್ಮದಾಗಿಸಿಕೊಳ್ಳಬಹುದು. ಸಿರಿದಾನ್ಯದ ಬಗ್ಗೆ ಇನು ಹೆಚ್ಚಿನ ಪ್ರಚಾರವು ಆಗಬೇಕಾಗಿದ್ದು, ಈಗಾಗಲೇ ಸಾವಯವದ ಸಂತೆ ಕೂಡ ವಾರಕ್ಕೊಮ್ಮೆ ನಗರದಲ್ಲಿ ನಡೆಯುತ್ತಿದೆ. ಇದು ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿನಿತ್ಯ ಪ್ರಚಾರವಾಗಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಇದೆ ತಿಂಗಳು 23 ರಿಂದ 25ರ ವರೆಗೂ ಅಂತರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಪ್ರಸ್ತೂತದಲ್ಲಿ ಯುವಜನರಿಗೆ ಸಿರಿಧಾನ್ಯ ತಿನ್ನುವದೇ ಫ್ಯಾಷನ್ ಟ್ರ‍್ರೆಂಡ್. ಆಗಿದೆ. ತಾತ ಮುತ್ತಾತನ ಕಾಲದಿಂದಲೂ ತಿನ್ನಲಾಗುತಿತ್ತು. ಸಾವಯವ ಆರ್ಗ್ಯೆನಿಕ ಎನ್ನುವುದೇ ಒಂದು ಟ್ರೆಂಡ್ ಆಗಿದ್ದು, ಸಲ್ಪ ಧರದಲ್ಲಿ ಹೆಚ್ಚು ಇರುತ್ತದೆ ಎಂದರು. ಸಿರಿಧಾನ್ಯವನ್ನು ಕಡಿಮೆ ಮಳೆಯಲ್ಲಿ, ಕಡಿಮೆ ನೀರಿನಲ್ಲಿ ಬೆಳೆಯಬಹುದು.

ಈ ಬೆಳೆಗಳು ಹೆಚ್ಚು ಲಾಭದಾಯಕವಾಗಿದೆ. ರೈತ ಸಮಿತ್ರರು ಹೆಚ್ಚು ಸಿರಿಧಾನ್ಯವನ್ನು ಬೆಳೆಯಬೇಕು. ಆಗೇ ನಾವುಗಳು ಕೂಡ ಅದನ್ನೆ ಬಳಕೆ ಮಾಡೋಣ ಎಂದು ಕಿವಿಮಾತು ಹೇಳಿದರು. ಗೋಧಿ ಮತ್ತು ಅನ್ನ ಸಿರಿಧಾನ್ಯವಲ್ಲ. ಇದರಿಂದ ರೋಗಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಾನು ಕೂಡ ಪ್ರಾಕ್ಟಿಕಲ್ ಆಗಿ ಸಿರಿಧಾನ್ಯ ಬಳಕೆ ಮಾಡುತ್ತಿದ್ದೇವೆ. ಒಳ್ಳೆಯ ಆಹಾರ ತಿಂದರೇ ಖಾಯಿಲೆ ಹತ್ತಿರ ಸುಳಿಯುವುದಿಲ್ಲ. ಸಿರಿಧಾನ್ಯದ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.


ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನಿರ್ವಾಹಣಾಧಿಕಾರಿ ಪೂರ್ಣಿಮಾ ಮಾತನಾಡಿ, ಅಂತರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಹಾಗೂ ಎಲ್ಲಾರೂ ಕೂಡ ಸಿರಿಧಾನ್ಯವನ್ನು ಉಪಯೋಗಿಸಬೇಕು ಎನ್ನುವ ಮಾಹಿತಿ ಕೊಡುವ ನಿಟ್ಟಿನಲ್ಲಿ ಜಾಗೃತಿಗಾಗಿ ಜಾಥಾ ಮಾಡಲಾಗುತ್ತಿದೆ. ನಾನು ಕಳೆದ ನಾಲ್ಕು ವರ್ಷಗಳಿಂದಲೂ ಸಿರಿಧಾನ್ಯವನ್ನು ಉಪಯೋಗಿಸುತ್ತಿದ್ದು, ಅದರ ಪ್ರಯೋಜನವನ್ನು ನಾನು ತಿಳಿದಿದ್ದೇನೆ ಎಂದರು. ರಕ್ತದ ಪ್ರಮಾಣದಲ್ಲಿ ಸಕ್ಕರೆ ನಿಯಂತ್ರಣಕ್ಕೆ ತುಂಬ ಅನುಕೂಲವಾಗುತ್ತದೆ.

ಇನ್ನು ನಮ್ಮ ತೂಕದ ಪ್ರಮಾಣ ಕೂಡ ಕಡಿಮೆಯಾಗುತ್ತದೆ. ಯಾವುದೇ ರಸಾಯನಿಕ ಇಲ್ಲದೇ ಬೆಳೆಯುವಂತಹ ಬೆಳೆಗಳು ಇದಾಗಿದೆ ಎಂದು ಕಿವಿಮಾತು ಹೇಳಿದರು. ರಿದಾನ್ಯಗಳು ಪೋಷಕಾಂಶಗಳ ಇವುಗಳನ್ನು ದಿನನಿತ್ಯ ಬಳಸುವುದರಿಂದ ಹಲವಾರು ರೋಗಗಳಾದ ರಕ್ತದ ಒತ್ತಡ, ಮಧುಮೇಹವನ್ನು ತಡೆಗಟ್ಟಬಹುದು ಜೊತೆಗೆ ಉತ್ತಮ ಆರೋಗ್ಯ ನಮ್ಮದಾಗುತ್ತದೆ ಎಂದು ಸಲಹೆ ನೀಡಿದರು. ಒಂದು ತಲೆ ಮಾರಿನ ಹಿಂದೆ ಅನ್ನದ ಬದಲು ನವಾಣೆ ಉಪಯೋಗಿಸುತ್ತಿದ್ರು. ಪ್ರಸ್ತೂತದಲ್ಲಿ ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಜಾಥವನ್ನು ಏರ್ಪಡಿಸಿರುವುದಾಗಿ ಹೇಳಿದರು.


ಸಿರಿಧಾನ್ಯಗಳ ಮತ್ತು ಸಾವಯವಗಳ ಜಾಗೃತಿ ಜಾಥವು ಜಿಲ್ಲಾ ಕ್ರೀಡಾಂಗಣದಿAದ ಹೊರಟು ಸಾಲಗಾಮೆ ರಸ್ತೆ, ಸಹ್ಯಾದ್ರಿ ವೃತ್ತ, ಮಹಾವೀರ ವೃತ್ತದಿಂದ ಹೇಮಾವತಿ ಪ್ರತಿಮೆ ಮುಂಬಾಗ ಮಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ, ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ತಮ್ಲಾಪುರ ಕೃಷ್ಣೇಗೌಡ, ತೋಟಗಾರಿಕೆ ಇಲಾಖೆ ಉಪಾನಿರ್ದೇಶಕಿ ಮಂಗಳಾ, ಹಿರಿಯ ಸಹಾಯಕ ನಿರ್ದೇಶಕ ಹರ್ಷಿ ತಬ್ಸಂ, ಸಹಾಯಕ ನಿರ್ದೇಶಕ ತೇಜುಕುಮಾರ್, ಕೋಕಿಲಾ, ಲೀಡ್ ಬ್ಯಾಂಕಿನ ಲತಾಸರಸ್ವತಿ ಇತರರು ಉಪಸ್ಥಿತರಿದ್ದರು. ರಮೇಶ್ ಕುಮಾರ್ ಸ್ವಾಗತಿಸಿದರು.

Edit

Related Articles

ಇತ್ತೀಚಿನ ಸುದ್ದಿಗಳು

You cannot copy content of this page