Friday, March 7, 2025

ಸತ್ಯ | ನ್ಯಾಯ |ಧರ್ಮ

ಇನ್ಫೋಸಿಸ್ ಬಳಿಕ ಈಗ ಅಗರ್ವಾಲ್ ಅವರ OLA ಕಂಪನಿ ನೌಕರರ ವಜಾ

ನವದೆಹಲಿ : ನಾರಾಯಣ ಮೂರ್ತಿಯವರ ಇನ್ಫೋಸಿಸ್ ಐಟಿ ಕಂಪನಿ ಬಳಿಕ ಇದೀಗ ಭವಿಶ್ ಅಗರ್ವಾಲ್ ಅವರ OLA ಕಂಪನಿ ತನ್ನ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆಯೇ ಇನ್ಫೋಸಿಸ್ ತನ್ನ ಮೈಸೂರು ಕ್ಯಾಂಪಸ್‌ನಿಂದ ನೂರು ಪ್ರಶಿಕ್ಷಣಾರ್ಥಿಗಳನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ದೊಡ್ಡ ಸುದ್ದಿಯಾಗಿತ್ತು. ಈಗ ಮತ್ತೊಂದು ಭಾರತೀಯ ಕಂಪನಿಯಾದ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಕಂಪನಿಯು ತನ್ನ ನಷ್ಟವನ್ನು ಕಡಿಮೆಗೊಳಿಸಲು ಹಾಗೂ ಕಾರ್ಯಾಚರಣೆಯನ್ನು ಸುಗಮಗೊಳಿಸುವ ಪ್ರಯತ್ನದಲ್ಲಿ 1,000 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆಯಂತೆ.

ಉದ್ಯೋಗ ಕಡಿತದ ನಿರ್ಧರಾದ ಹಿಂದೆ ಗ್ರಾಹಕ ಸಂಬಂಧಗಳನ್ನು ಸ್ವಯಂಚಾಲಿತಗೊಳಿಸುವುದು ಮತ್ತು ಲಾಜಿಸ್ಟಿಕ್ಸ್ ಮತ್ತು ವಿತರಣಾ ಪ್ರಕ್ರಿಯೆಗಳನ್ನು ಪರಿಷ್ಕರಿಸುವುದು ಸೇರಿದಂತೆ ದೊಡ್ಡ ಪುನರ್ ರಚನೆಯ ತಂತ್ರದ ಭಾಗವಾಗಿ ಕಂಪನಿ ಯೋಜಿಸಿದೆ ಎಂದೂ ಹೇಳಲಾಗುತ್ತಿದೆ.ಓಲಾ ಎಲೆಕ್ಟ್ರಿಕ್ ಷೇರು ಬೆಲೆ ಕುಸಿತ : ಡಿಸೆಂಬರ್ 2024ರ ತ್ರೈಮಾಸಿಕದಲ್ಲಿ ಕಂಪನಿಯು ಶೇ.50ರಷ್ಟು ನಷ್ಟಕ್ಕೆ ಒಳಗಾಗಿದೆ ಎಂಬ ವರದಿ ಬೆನ್ನಲ್ಲೇ ಈ ಆರ್ಥಿಕ ಒತ್ತಡವನ್ನು ಸರಿದೂಗಿಸುವ ಹಿಂದೆ ಕಂಪನಿಯು ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಓಲಾ ಎಲೆಕ್ಟ್ರಿಕ್ ಷೇರುಗಳು ಕಳೆದ ಸೋಮವಾರ 5.36% ರಷ್ಟು ಕುಸಿದು, ಬಿಎಸ್‌ಇಯಲ್ಲಿ 52 ವಾರಗಳ ಕನಿಷ್ಠ ರೂ. 53.71 ಕ್ಕೆ ತಲುಪಿದೆ. 4 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಇದು ಎರಡನೇ ಬಾರಿಗೆ ಕಂಪನಿಯು ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. 2024ರ ನವೆಂಬರ್ ನಲ್ಲಿ ಓಲಾ ಸುಮಾರು 500 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page