ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಅಜಿಂಕ್ಯ ರಹಾನೆ ವಿದಾಯ – ಅಭಿಮಾನಗಳ ಬಾರಿ ನಿರಾಸೆ

ಮುಂಬೈ : ಭಾರತೀಯ ಕ್ರಿಕೆಟ್ ತಂಡದ (Team India) ಹಿರಿಯ ಬ್ಯಾಟರ್ ಹಾಗೂ ಬಾರ್ಡರ್-ಗವಾಸ್ಕರ್ ಟ್ರೋಫಿ ವಿಜೇತ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ದಿಢೀರ್ ನಿವೃತ್ತಿ (Retirement) ಘೋಷಿಸಿದ್ದಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ಜಗತ್ತಿನ ಸುದೀರ್ಘ ಹಾಗೂ ಅತ್ಯಂತ ಯಶಸ್ವಿ ಅಧ್ಯಾಯವೊಂದು ಕೊನೆಗೊಂಡಂತಾಗಿದೆ.

ಚಾರಿತ್ರಿಕ ಜಯ ತಂದುಕೊಟ್ಟ ನಾಯಕ

ಟೀಮ್ ಇಂಡಿಯಾಗೆ ರಹಾನೆ ನೀಡಿದ ಕೊಡುಗೆ ಅತ್ಯಂತ ಅಪಾರವಾದದ್ದು. ವಿಶೇಷವಾಗಿ 2020-21 ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಗೈರುಹಾಜರಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರಹಾನೆ, ಮೆಲ್ಬೋರ್ನ್ ಟೆಸ್ಟ್ನಲ್ಲಿ ಚಾರಿತ್ರಿಕ ಶತಕ ಸಿಡಿಸಿ ಮಿಂಚಿದ್ದರು. ಅಡಿಲೇಡ್ ಟೆಸ್ಟ್ನಲ್ಲಿ ಭಾರಿ ಹಿನ್ನಡೆ ಅನುಭವಿಸಿ ಕಂಗೆಟ್ಟಿದ್ದ ಭಾರತೀಯ ಪಡೆಯನ್ನು ಅತ್ಯಂತ ದಕ್ಷತೆಯಿಂದ ಸಂಘಟಿಸಿ, 2-1 ಅಂತರದ ಐತಿಹಾಸಿಕ ಸರಣಿ ಗೆಲುವು ತಂದುಕೊಟ್ಟ ಹೆಗ್ಗಳಿಕೆ ರಹಾನೆ ಅವರಿಗೆ ಸಲ್ಲುತ್ತದೆ.

ಟೆಸ್ಟ್ ಹಾಗೂ ಸೀಮಿತ ಓವರ್ಗಳ ಅದ್ಭುತ ಸಾಧನೆ

ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ, 12 ಭರ್ಜರಿ ಶತಕ ಹಾಗೂ 32 ಅರ್ಧಶತಕಗಳ ನೆರವಿನಿಂದ 5077 ರನ್ ಕಲೆಹಾಕಿದ್ದಾರೆ. ಇನ್ನು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದ ಇವರು, ೯೦ ಏಕದಿನ ಪಂದ್ಯಗಳಿಂದ 2962 ರನ್ ಹಾಗೂ 20 ಟಿ 20 ಪಂದ್ಯಗಳಿಂದ 375 ರನ್ ಬಾರಿಸಿದ್ದಾರೆ.

ಮೈದಾನದಲ್ಲಿ ಅತ್ಯಂತ ನಂಬಿಗಸ್ಥ ಫೀಲ್ಡರ್

ಬ್ಯಾಟಿಂಗ್ ಮಾತ್ರವಲ್ಲದೆ ಅತ್ಯುತ್ತಮ ಫೀಲ್ಡಿಂಗ್ಗೂ ಹೆಸರುವಾಸಿಯಾಗಿದ್ದ ರಹಾನೆ, ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಅತ್ಯಂತ ನಂಬಿಗಸ್ಥ ಸ್ಲಿಪ್ ಫೀಲ್ಡರ್ ಎನಿಸಿಕೊಂಡಿದ್ದರು. ಟೆಸ್ಟ್ ಮಾದರಿಯಲ್ಲಿ ಬರೋಬ್ಬರಿ 99 ಅದ್ಭುತ ಕ್ಯಾಚ್ಗಳನ್ನು ಹಿಡಿಯುವ ಮೂಲಕ ಮೈದಾನದಲ್ಲಿ ತಂಡಕ್ಕೆ ದೊಡ್ಡ ಬಲ ತುಂಬಿದ್ದರು. ರಹಾನೆ ಅವರ ನಿವೃತ್ತಿಯ ನಿರ್ಧಾರದೊಂದಿಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಸಹಪಾಠಿ ಆಟಗಾರರು ಅವರಿಗೆ ಶುಭ ಹಾರೈಸುತ್ತಿದ್ದಾರೆ.ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಅಜಿಂಕ್ಯ ರಹಾನೆ ದಿಢೀರ್ ವಿದಾಯ 

Related Articles

ಇತ್ತೀಚಿನ ಸುದ್ದಿಗಳು