ಮೌನಿ ಅಮಾವಾಸ್ಯೆಯಂದು ಬುಧವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 30 ಭಕ್ತರು ಸಾವಿಗೀಢಾಗಿ 60 ಜನರು ಗಾಯಗೊಂಡಿದ್ದರು.
ಈ ಸಂದರ್ಭದಲ್ಲಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್ ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಜೆಟ್ ವಿಷಯವನ್ನು ನಂತರ ಸಂಸತ್ತಿನ ಅಧಿವೇಶನಗಳಲ್ಲಿ ಚರ್ಚಿಸಬಹುದು ಎಂದು ಹೇಳಿದರು. ಮೊದಲು, ನಾವು ಮಹಾಕುಂಭಮೇಳ ಘಟನೆಯ ಬಗ್ಗೆ ಮಾತನಾಡಬೇಕು” ಎಂದು ಹೇಳಿದರು.
ಕುಂಭಮೇಳ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಶಾಂತಿ ಒದಗಿಸುವ ಬಗ್ಗೆ ಸಂಸದರು ಮಾತನಾಡಬೇಕು” ಎಂದು ಅವರು ಹೇಳಿದರು. ಈ ಮಹಾ ಕುಂಭಮೇಳದಲ್ಲಿ ಎಷ್ಟು ಜನರು ಸತ್ತರು ಎಂಬುದನ್ನು ಯುಪಿ ಸರ್ಕಾರ ಮರೆಮಾಡುತ್ತಿದೆ ಮತ್ತು ಪರಿಹಾರವನ್ನು ನೀಡುತ್ತಿಲ್ಲ ಎಂದು ಅವರು ಹೇಳಿದರು.
ಮಹಾ ಕುಂಭಮೇಳದಲ್ಲಿ ಸಂಭವಿಸಿದ ಸಾವುನೋವುಗಳನ್ನು ಯುಪಿ ಸರ್ಕಾರ ನಿರ್ವಹಿಸಿದ ರೀತಿ ಬಗ್ಗೆ ಅಖಿಲೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ನೈತಿಕವಾಗಿ ಕುಸಿದಿದ್ದಾರೆ. ಅಂತಹ ವ್ಯಕ್ತಿ ರಾಜಕೀಯ ತೊರೆಯುವುದು ಯಾವಾಗ ಎಂಬುದು ಈಗಿರುವ ಪ್ರಶ್ನೆ ಎಂದು ಅವರು ಖಾರವಾಗಿ ಹೇಳಿದರು. ಈ ಘಟನೆಗೆ ಸರ್ಕಾರವೇ ಹೊಣೆ ಹೊರಬೇಕು ಎಂದು ಅವರು ಒತ್ತಾಯಿಸಿದರು.