Thursday, July 31, 2025

ಸತ್ಯ | ನ್ಯಾಯ |ಧರ್ಮ

2008ರ ಮಾಲೇಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆ

ಮುಂಬೈ: ಮಾಲೇಗಾಂವ್‌ನಲ್ಲಿ ಬಾಂಬ್ ಸ್ಫೋಟ ನಡೆದ ಹದಿನೇಳು ವರ್ಷಗಳ ನಂತರ, ರಾಜಕೀಯವಾಗಿ ಸೂಕ್ಷ್ಮವಾಗಿರುವ ಈ ಭಯೋತ್ಪಾದನಾ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ಎಲ್ಲಾ ಏಳು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯವು ಗುರುವಾರ ಖುಲಾಸೆಗೊಳಿಸಿದೆ.

ಎನ್‌ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಅವರು ಕಿಕ್ಕಿರಿದ ಕೋರ್ಟ್‌ರೂಂನಲ್ಲಿ ಈ ತೀರ್ಪನ್ನು ಪ್ರಕಟಿಸಿದರು.

ಸರಿಯಾಗಿ 17 ವರ್ಷಗಳ ಹಿಂದೆ, 2006ರ ಸೆಪ್ಟೆಂಬರ್ 8ರಂದು ಶಬ್-ಎ-ಬರಾತ್ ಹಬ್ಬದ ಸಂದರ್ಭದಲ್ಲಿ ಮಾಲೇಗಾಂವ್‌ನ ಬಡಾ ಕಬ್ರಸ್ತಾನ್, ಮುಶಾವ್ರ ಚೌಕ್ ಮತ್ತು ಹಮೀದಿಯಾ ಮಸೀದಿಯಲ್ಲಿ ಮೂರು ಸ್ಫೋಟಗಳು ಸಂಭವಿಸಿದ್ದವು. ಈ ದುರಂತದಲ್ಲಿ 37 ಜನರು ಸಾವನ್ನಪ್ಪಿ, 312 ಜನರು ಗಾಯಗೊಂಡಿದ್ದರು.

ಈ ಪ್ರಕರಣವನ್ನು ನಾಸಿಕ್ ಗ್ರಾಮೀಣ ಪೊಲೀಸರಿಂದ ಭಯೋತ್ಪಾದನಾ ನಿಗ್ರಹ ದಳಕ್ಕೆ (ATS) ಹಸ್ತಾಂತರಿಸಲಾಗಿತ್ತು. ಆಗ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ನಲ್ಲಿ ಸೇವೆ ಸಲ್ಲಿಸಿದ್ದ ವಿಶೇಷ ಪೊಲೀಸ್ ಮಹಾನಿರೀಕ್ಷಕ ಹೇಮಂತ್ ಕರ್ಕರೆ ತನಿಖೆಯ ನೇತೃತ್ವ ವಹಿಸಿದ್ದರು.

ನವೆಂಬರ್ 2008ರ ಮುಂಬೈ 26/11 ಭಯೋತ್ಪಾದಕ ದಾಳಿಯಲ್ಲಿ ಹೇಮಂತ್ ಕರ್ಕರೆ ಅವರು ಹುತಾತ್ಮರಾದ ನಂತರ ಎಟಿಎಸ್ ತನಿಖೆಗೆ ಹಿನ್ನಡೆಯಾಗಿತ್ತು. ಕೆಲವು ವರ್ಷಗಳ ನಂತರ, ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಯಿತು. ಆರೋಪಪಟ್ಟಿಯಲ್ಲಿ ಎಲ್.ಎಮ್.ಎಲ್. ಫ್ರೀಡಂ ಸ್ಕೂಟರ್ ಬಗ್ಗೆ ಉಲ್ಲೇಖವಿತ್ತು.

ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳಾದ ರಾಮ್ಜಿ ಅಲಿಯಾಸ್ ರಾಮಚಂದ್ರ ಕಲ್ಸಂಗ್ರಾ ಮತ್ತು ಸಂದೀಪ್ ಡಾಂಗೆ ಇಬ್ಬರೂ ಇಂದೋರ್ ನಿವಾಸಿಗಳಾಗಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ. ಆದರೆ, ಈ ಹಿಂದೆ ಇವರಿಬ್ಬರನ್ನು ಎಟಿಎಸ್ ಹತ್ಯೆ ಮಾಡಿದೆ ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದರು.

ವಿಚಾರಣೆ ಎದುರಿಸಿದ ಏಳು ಆರೋಪಿಗಳೆಂದರೆ: ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಲೆ. ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಾಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ.

ಈ ಪ್ರಕರಣದ ನಂತರವೇ “ಕೇಸರಿ ಭಯೋತ್ಪಾದನೆ” ಮತ್ತು “ಹಿಂದೂ ಭಯೋತ್ಪಾದನೆ”ಯಂತಹ ಪದಗಳು ರಾಜಕೀಯ ಚರ್ಚೆಗಳಲ್ಲಿ ಬಳಕೆಗೆ ಬಂದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page