Thursday, December 5, 2024

ಸತ್ಯ | ನ್ಯಾಯ |ಧರ್ಮ

ಜನಕಲ್ಯಾಣ ಸಮಾವೇಶಕ್ಕೆ ಎಲ್ಲಾ ವರ್ಗದವರು ಭಾಗವಹಿಸಿ – ಹೆಚ್.ಕೆ. ಸಂದೇಶ್ ಮನವಿ

ಹಾಸನ:  ಗುರುವಾರದಂದು ನಗರದ ಎಸ್.ಎಂ. ಕೃಷ್ಣ ನಗರದಲ್ಲಿ ನಡೆಯಲಿರುವ ಜನ ಕಲ್ಯಾಣ ಸಮಾವೇಶಕ್ಕೆ ಹಾಸನ ಜಿಲ್ಲೆಯ ಎಲ್ಲಾ ವರ್ಗದ ಜನರು ಭಾಗವಹಿಸಿ ಅಭೂತಪೂರ್ವ ಯಶಸ್ವಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಮನವಿ ಮಾಡಿದರು.

        ಪತ್ರಕಾಗೋಷ್ಠಿಯಲ್ಲಿ ಬುಧವಾರ ಮಾತಾಡಿದ ಅವರು, ಈ ಸಮಾವೇಶಕ್ಕೆ ಆರು ಜಿಲ್ಲೆಗಳನ್ನು ಒಳಗೊಂಡ ದೊಡ್ಡ ಮಟ್ಟದ ಸಮಾವೇಶ ನಡೆಯುತ್ತಿದೆ. ಎಲ್ಲಾ ಸಮುದಾಯಗಳ ಸಹಕಾರದಿಂದ ಈ ಬಾರಿ ದಾಖಲೆಯ ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಅಲ್ಲದೆ ಹಾಸನ ಜಿಲ್ಲೆಯಲ್ಲಿ ಕೂಡ ಅನೇಕ ವರ್ಷಗಳ ಬಳಿಕ ಕಾಂಗ್ರೆಸ್ ನ ಸಂಸದನ ಆಯ್ಕೆಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ರಾಜಕೀಯವಾಗಿ ಶಕ್ತಿ ನೀಡಿದ ಹಾಸನದ ನೆಲದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ನ ದೊಡ್ಡ ಮಟ್ಟದ ಸಮಾವೇಶ ನಡೆಯುತ್ತಿದೆ. ಇದೊಂದು ಐತಿಹಾಸಿಕ ಸಮಾವೇಶ ಆಗಬೇಕು ಈ ನಿಟ್ಟಿನಲ್ಲಿ ಜಾತ್ಯತೀತವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

    ಈ ರಾಜ್ಯದಲ್ಲಿ ಸಿದ್ದರಾಮಯ್ಯ ಅವರಂತಹ ಮುಖ್ಯಮಂತ್ರಿ ಮತ್ತೆ ಹುಟ್ಟುವುದು ಅಸಾಧ್ಯ, ಅವರ ಆಲೋಚನೆ ಜನಪರ ಕಾರ್ಯಕ್ರಮಗಳು, ಎಲ್ಲಾ ಸಮುದಾಯ ಎಲ್ಲಾ ವರ್ಗಗಳ ಜನರಿಗೆ ತಲುಪಿವೆ ಈ ಮೂಲಕ ಎಲ್ಲಾ ವರ್ಗದ ಜನರು ಆರ್ಥಿಕವಾಗಿ ಸಭಲರಾಗಲು ಅನುಕೂಲ ಕಲ್ಪಿಸಿದ್ದಾರೆ ಅಂತವರಿಗೆ ಅಭಿನಂದನೆ ಸಲ್ಲಿಸುವುದು ಎಲ್ಲಾ ವರ್ಗದ ಜನರ ಕರ್ತವ್ಯ ಈ ನಿಟ್ಟಿನಲ್ಲಿ ನಾಳಿನ ಸಮಾವೇಶ ಯಶಸ್ವಿ ಯಾಗಲಿ ಎಂದು ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ದಸಂಸ ಮುಖಂಡರಾದ ಸೋಮಶೇಖರ್, ವಿಜಯ್ ಕುಮಾರ್, ಬಿ.ಡಿ. ನಾಗೇಶ್ ರಾಜೇಶ್, ಮಧು ನಾಯಕ್, ಪ್ರಸನ್ನ ಕುಮಾರ್  ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page