Sunday, June 16, 2024

ಸತ್ಯ | ನ್ಯಾಯ |ಧರ್ಮ

ವನ್ಯಜೀವಿಗಳ ಭಾಗಗಳನ್ನು ಬಳಸಿ ಆಭರಣ ತಯಾರಿಕೆ ಆರೋಪ: ʼಟಿಜೆಎʼಗೆ ಅರಣ್ಯ ಇಲಾಖೆಯಿಂದ ಪತ್ರ

ಬೆಂಗಳೂರು: ರಾಜ್ಯದಲ್ಲಿನ ಆಭರಣ ತಯಾರಕರಲ್ಲಿ ವನ್ಯಜೀವಿ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.

ಭಾನುವಾರ, ಇಲಾಖೆಯು ಕರ್ನಾಟಕದ ದಿ ಜ್ಯುವೆಲರ್ಸ್ ಅಸೋಸಿಯೇಷನ್‌ಗೆ (ಟಿಜೆಎ) ಪತ್ರ ಬರೆದಿದ್ದು, ಆಭರಣ ತಯಾರಿಕೆಗೆ ಪ್ರಾಣಿಗಳ ಭಾಗಗಳನ್ನು ಬಳಸುವ ಸದಸ್ಯರ ಮೇಲೆ ನಿಗಾ ಇಡುವಂತೆ ತಿಳಿಸಿದೆ.

ಅರಣ್ಯ ಇಲಾಖೆಯು ಟಿಜೆಎ ಕಾರ್ಯದರ್ಶಿ ಕೇತನ್. ಎಸ್ ಧ್ರುವ ಅವರಿಗೆ ಬರೆದ ಪತ್ರದಲ್ಲಿ, “ವನ್ಯಜೀವಿ ಅಪರಾಧಗಳಲ್ಲಿ ಚಿನ್ನಾಭರಣ ಮಾಡುವವರು, ಅಕ್ರಮವಾಗಿ ಕೊಲ್ಲಲ್ಪಟ್ಟ ವನ್ಯಜೀವಿಗಳ ದೇಹದ ಭಾಗಗಳನ್ನು ತಮ್ಮ ಸಿದ್ಧಪಡಿಸಿದ ಸರಕುಗಳಲ್ಲಿ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯದ ಆಭರಣ ವ್ಯಾಪಾರಿಗಳು ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ದಂಡದ ನಿಬಂಧನೆಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಆಭರಣ ತಯಾರಿಕೆಯಲ್ಲಿ ಆನೆಯ ದಂತ, ಹುಲಿಯ ಉಗುರುಗಳು ಮತ್ತು ಹಲವು ಪ್ರಾಣಿಯ ಕೆಲವು ಭಾಗಗಳನ್ನು ಅಕ್ರಮವಾಗಿ ಬಳಸಲಾಗುತ್ತಿರುವುದರ ಬಗ್ಗೆ ಅರಣ್ಯ ಇಲಾಖೆಯು ಬರೆದ ಪತ್ರಕ್ಕೆ, ಜ್ಯುವೆಲ್ಲರಿ ಅಸೋಸಿಯೇಷನ್ ​​ತನ್ನ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ ಎಂದು ಅರಣ್ಯ ಇಲಾಖೆ ದೂರಿದೆ.

Related Articles

ಇತ್ತೀಚಿನ ಸುದ್ದಿಗಳು