Home ಬ್ರೇಕಿಂಗ್ ಸುದ್ದಿ ಬೇಲೂರು : ಎರಡು ತಿಂಗಳಲ್ಲೇ ಕಿತ್ತುಬಂದ ರಸ್ತೆ ಗುಣಮಟ್ಟಕ್ಕೆ ಗುತ್ತಿಗೆದಾರರೇ ಹೊಣೆ – ಕಳಪೆ ಕಾಮಗಾರಿಗೆ...

ಬೇಲೂರು : ಎರಡು ತಿಂಗಳಲ್ಲೇ ಕಿತ್ತುಬಂದ ರಸ್ತೆ ಗುಣಮಟ್ಟಕ್ಕೆ ಗುತ್ತಿಗೆದಾರರೇ ಹೊಣೆ – ಕಳಪೆ ಕಾಮಗಾರಿಗೆ ಜನಾಕ್ರೋಶ

ಬೇಲೂರು : ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ರಸ್ತೆ ಡಾಂಬರೀಕ ರಣಗೊಂಡು ಕೇವಲ ಎರಡು ತಿಂಗಳಲ್ಲೇ ರಸ್ತೆ ಕಿತ್ತುಬಂದಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾ ಗಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿರುವ ಕೆ.ಆರ್.ಎಸ್. ಪಕ್ಷದ ಬೇಲೂರು ತಾಲ್ಲೂಕು ಅಧ್ಯಕ್ಷ ಆದೇಶ್ ಲಿಂಗ ರಾಜ್, ಕೂಡಲೇ ತಾಂತ್ರಿಕ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ.
ಕಾಮಗಾರಿ ನಡೆಯುವಾಗಲೇ ಗುಣಮಟ್ಟದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಸಂಬಂಧಪಟ್ಟ ವರು ನಿರ್ಲಕ್ಷ್ಯ ವಹಿಸಿ ದ್ದಾರೆ. ಜನರ ತೆರಿಗೆ ಹಣದಲ್ಲಿ ನಿರ್ಮಿಸುವ ರಸ್ತೆ ಎರಡು ತಿಂಗಳಲ್ಲೇ ಕಿತ್ತುಬಂದರೆ ಇದಕ್ಕೆ ಹೊಣೆ ಯಾರು? ಎಂದು ಆದೇಶ್ ಲಿಂಗರಾಜ್ ಪ್ರಶ್ನಿಸಿದ್ದಾರೆ.
ಪಟ್ಟಣದ ವೈಕುಂಠ ಬೀದಿ ಹಾಗೂ ಕೆಂಪೇ ಗೌಡ ರಸ್ತೆಯ ಕಾಮಗಾ ರಿಗಳ ಗುಣಮಟ್ಟವನ್ನೂ ಪರಿಶೀಲಿಸಬೇಕು. ರಸ್ತೆ ನಿರ್ಮಾಣಕ್ಕೆಬಳಸಿರುವ ಸಾಮಗ್ರಿ, ತಳಹದಿ ಹಾಗೂ ಡಾಂಬರೀಕ ರಣದ ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಲೋಪ ಕಂಡುಬಂದರೆ ಗುತ್ತಿಗೆ ದಾರರು ಹಾಗೂ ಹೊಣೆ ಗಾರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜನರ ತೆರಿಗೆ ಹಣ ವನ್ನು ಈ ರೀತಿ ವ್ಯರ್ಥ ಮಾಡಲು ಅವಕಾಶ ನೀಡಬಾರದು. ಕಳಪೆ ಕಾಮಗಾರಿ ಕಂಡುಬಂ ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳು ವವರೆಗೂ ಹೋರಾಟ ನಡೆಸುತ್ತೇವೆ ಎಂದು ಆದೇಶ್ ಲಿಂಗರಾಜ್ ಎಚ್ಚರಿಕೆ ನೀಡಿದ್ದಾರೆ.

You cannot copy content of this page

Exit mobile version