Saturday, June 15, 2024

ಸತ್ಯ | ನ್ಯಾಯ |ಧರ್ಮ

ಮೊಹಮ್ಮದ್ ಜುಬೇರ್ 2023 ರ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿಗೆ ನಾಮನಿರ್ದೇಶನ

ಬೆಂಗಳೂರು,ಅಕ್ಟೋಬರ್.‌5: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರು 2023 ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ಗೆ ನಾಮಾಂಕಿತರಾಗಿದ್ದಾರೆ. ಪತ್ರಿಕೋದ್ಯಮ ವರ್ಗಕ್ಕೆ ನಾಮನಿರ್ದೇಶನಗೊಂಡ ಮೂವರು ನಾಮನಿರ್ದೇಶನಗಳಲ್ಲಿ ಒಬ್ಬರಾಗಿರುವ ಜುಬೇರ್ ಸುಳ್ಳು ಸುದ್ದಿಗಳ ವಿರುದ್ದದ ತಮ್ಮ ಕೆಲಸಕ್ಕೆ ಹೆಸರಾದವರು. ಸೆನ್ಸಾರ್ಶಿಪ್ ಮತ್ತು ಮುಕ್ತ ಅಭಿವ್ಯಕ್ತಿಗೆ ಬೆದರಿಕೆಗಳನ್ನು ಬಯಲಿಗೆ ತರುವ ಧೈರ್ಯವಂತ ಪತ್ರಿಕಾರಂಗಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.

ಭಾರತೀಯ ಮಾಧ್ಯಮ ರಂಗದಲ್ಲಿನ ನ್ಯೂನತೆಗಳನ್ನು ತಿಳಿಸುವ ಅವರ ಪ್ರಯತ್ನಗಳನ್ನು ಗುರುತಿಸಿ, ಮಾಧ್ಯಮಗಳ ಮೇಲಿನ ರಾಜಕೀಯ ಒತ್ತಡ ಮತ್ತು ಮಾಧ್ಯಮಗಳಿಗೆ ಸರ್ಕಾರ ನೀಡುವ ಹಣದ ಅಪಾರದರ್ಶಕ ವಿಧಾನಗಳು ಬಗ್ಗೆ ಇವರ ವರದಿಗಳಿಗಾಗಿ ಈ ಪ್ರಶಸ್ತಿಯಲ್ಲಿ ಗುರುತಿಸಲಾಗಿದೆ.  ಸತ್ಯಪರ ರಾಜಕೀಯ ವಿಶ್ಲೇಷಣೆಗಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ಬಯಲುಗೊಳಿಸುವ ಮತ್ತು ಮಾಧ್ಯಮಗಳು ಹರಡುವ ತಪ್ಪು ಮಾಹಿತಿ  ಹಾಗೂ ಅವುಗಳ ಪಕ್ಷಪಾತವನ್ನು ತೋರಿಸುವ ಆಲ್ಟ್ ನ್ಯೂಸ್‌ನ ಕೆಲಸವನ್ನು ಶ್ಲಾಘಿಸಲಾಗಿದೆ.

ಜೂನ್ 2022 ರಲ್ಲಿ ಜುಬೈರ್‌ರವತ ಬಂಧನವಾಗಿತ್ತು. ಇದು ಅಭಿವ್ಯಕ್ತಿ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸ್ಪಷ್ಟ ನಡೆಯಾಗಿ ದೇಶದಾದ್ಯಂತ ಟೀಕೆಗೆ, ಪ್ರತಿರೋಧಕ್ಕೆ ಒಳಗಾಗಿತ್ತು.  

@IndexCensorship
in X

ಈ ಪ್ರಶಸ್ತಿಗೆ ಸೊಮಾಲಿಯಾದ ಮೊದಲ ಮಹಿಳೆಯರೇ ನಡೆಸುವ ಮಾಧ್ಯಮ ಸಂಸ್ಥೆ ಬಿಲಾನ್ ಮೀಡಿಯಾ ಮತ್ತು ಈ ವರ್ಷದ ಜನವರಿಯಲ್ಲಿ ತಾಲಿಬಾನಿಗಳಿಂದ ಬಂಧನಕ್ಕೊಳಗಾದ ಅಫ್ಘಾನ್ ಪತ್ರಕರ್ತ ಮೊರ್ತಜಾ ಬೆಹಬೌಡಿ ಅವರ ಹೆಸರೂ ಪಟ್ಟಿಯಲ್ಲಿದೆ.

Index on Censorship ನ ಸಿಇಒ ರುತ್ ಆಂಡರ್ಸನ್ ಅವರು Freedom of Expression Awards “ವಿಶ್ವದಾದ್ಯಂತ ಇರುವ ಕಲಾವಿದರು, ಪತ್ರಕರ್ತರು ಮಾಡುತ್ತಿರುವ ಅಸಾಧಾರಣ ಕೆಲಸಗಳನ್ನು ಗುರುತಿಸುವ ಅವಕಾಶ” ಎಂದು ಹೇಳಿದ್ದಾರೆ.

ಇಂಡೆಕ್ಸ್ ಒಂದು ಲಾಭ ರಹಿತ ಸಂಸ್ಥೆಯಾಗಿದ್ದು ಅದು ವಿಶ್ವಾದ್ಯಂತ ಮುಕ್ತ ಅಭಿವ್ಯಕ್ತಿಯ ಪ್ರಚಾರ ಹಾಗೂ ಅದರ ರಕ್ಷಣೆಯ ಕೆಲಸವನ್ನು ಮಾಡುತ್ತದೆ. ಸೆನ್ಸಾರ್ ಮಾಡಲಾದ ಬರಹಗಾರರು ಮತ್ತು ಕಲಾವಿದರ ಕೆಲಸವನ್ನು ಇದು ಪ್ರಕಟಿಸುತ್ತದೆ.

ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ ಪ್ರಶಸ್ತಿಗೆ ಈ ಹಿಂದೆ ಪತ್ರಿಕೋದ್ಯಮ ವಿಭಾಗದಿಂದ ತಮ್ಮ MeToo ಚಳವಳಿಯಲ್ಲಿ ವಹಿಸಿದ  ಮಹತ್ವದ ಪಾತ್ರಕ್ಕಾಗಿ 2022 ರಲ್ಲಿ ಚೀನಾದ ಪತ್ರಕರ್ತೆ ಹುವಾಂಗ್ ಕ್ಸುಕಿನ್ ಭಾಜನರಾಗಿದ್ದರು.  ಸೆಪ್ಟೆಂಬರ್ 2021 ರಲ್ಲಿ ಕಣ್ಮರೆಯಾದ ಇವರು ಮತ್ತು ಕಾರ್ಮಿಕಪರ ಹೋರಾಟಗಾರ ವಾಂಗ್ ಜಿಯಾನ್‌ಬಿಂಗ್ ವಿರುದ್ಧ “ದೇಶದ ಅಧಿಕಾರದ ವಿಧ್ವಂಸಕತೆಯನ್ನು ಪ್ರಚೋದಿಸುವ” ಆರೋಪದ ಮೇಲೆ ಚೀನಾ ಸರ್ಕಾರ ಬಂಧಿಸಿತು. ಸದ್ಯ ಇವರು ಬಂಧನದಲ್ಲಿಯೇ ಇದ್ದಾರೆ.

ಹುವಾಂಗ್ ಕ್ಸುಕಿನ್

2021 ರಲ್ಲಿ ನೈಜೀರಿಯಾ ಪತ್ರಕರ್ತೆ ಸಮೀರಾ ಸಬೌ ಪ್ರಶಸ್ತಿಯನ್ನು ಗೆದ್ದಿದ್ದರು. 2020 ರಲ್ಲಿ ನಡೆದ ರಕ್ಷಣಾ ಸಚಿವಾಲಯದ ಭ್ರಷ್ಟಾಚಾರವನ್ನು ವರದಿ ಮಾಡಿದ್ದಕ್ಕಾಗಿ 2021 ರಲ್ಲಿ ಅವರನ್ನು ಅನೇಕ ಬಾರಿ ಬಂಧಿಸಿದರು.

ಸಮೀರಾ ಸಬೌ

Related Articles

ಇತ್ತೀಚಿನ ಸುದ್ದಿಗಳು