ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆರ್‌ಜೆಡಿ-ಕಾಂಗ್ರೆಸ್ ವೇದಿಕೆಯಿಂದ ಮಾಡಿದ ಮೌಖಿಕ ನಿಂದನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದು, ‘ವಿರೋಧಿಗಳ ನಿಂಧನೆ ಸ್ವೀಕರಿಸಿ ವಿಷಕಂಠನಾಗಲು ಸಿದ್ಧ’ ಎಂಬಂತೆ ಮಾತನಾಡಿದ್ದಾರೆ.
ತಮ್ಮ ಮತ್ತು ತಮ್ಮ ದಿವಂಗತ ತಾಯಿ ಹೀರಾಬೆನ್ ಮೋದಿ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾದ ಮೌಖಿಕ ನಿಂದನೆಗಳ ಕುರಿತು ಭಾರಿ ಗದ್ದಲದ ನಡುವೆಯೇ, ಪ್ರಧಾನಿ ಅವರು ತಾವು ಶಿವನ ಭಕ್ತನಾಗಿದ್ದು, ನಿಂದನೆಗಳ “ವಿಷವನ್ನು ನುಂಗುತ್ತೇನೆ” ಎಂದು ಹೇಳಿದರು.
“ನನಗೆ ಗೊತ್ತು, ಇಡೀ ಕಾಂಗ್ರೆಸ್ ಪರಿಸರ ವ್ಯವಸ್ಥೆಯು ನನ್ನನ್ನು ಗುರಿಯಾಗಿಸಿಕೊಂಡು ಮೋದಿ ಮತ್ತೆ ಅಳುತ್ತಿದ್ದಾರೆ ಎಂದು ಹೇಳುತ್ತದೆ. ಜನರೇ ನನ್ನ ದೇವರು; ನಾನು ನನ್ನ ನೋವನ್ನು ಅವರ ಮುಂದೆ ವ್ಯಕ್ತಪಡಿಸದೇ, ನಾನು ಅದನ್ನು ಬೇರೆಲ್ಲಿ ವ್ಯಕ್ತಪಡಿಸಲಿ? ಅವರು (ಜನತೆಯೇ ನನ್ನ ಯಜಮಾನರು, ನನ್ನ ದೇವತೆಗಳು ಮತ್ತು ನನ್ನ ರಿಮೋಟ್ ಕಂಟ್ರೋಲ್. ನನ್ನ ಬಳಿ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ” ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆರ್‌ಜೆಡಿ-ಕಾಂಗ್ರೆಸ್ ವೇದಿಕೆಯಿಂದ ಮಾಡಿದ ಮಾತಿನ ಚಕಮಕಿಯ ಕುರಿತು ಪ್ರಧಾನಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ಹೇಳಿಕೆ ನೀಡಿದಾಗ ವಿರೋಧ ಪಕ್ಷವು ತನ್ನ ಯಾವುದೇ ನಾಯಕರು ವೇದಿಕೆಯಲ್ಲಿ ಇರಲಿಲ್ಲ ಎಂದು ಒತ್ತಿ ಹೇಳಿದೆ.
ಭಾರತ ಸರ್ಕಾರವು ಈ ದೇಶದ ಮಹಾನ್ ಪುತ್ರ ಮತ್ತು ಅಸ್ಸಾಂನ ಹೆಮ್ಮೆಯ ಭೂಪೇನ್ ಹಜಾರಿಕಾ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ ದಿನ, ಕಾಂಗ್ರೆಸ್ ಅಧ್ಯಕ್ಷರು ಮೋದಿ ಈ ಪ್ರಶಸ್ತಿಯನ್ನು ‘ಗಾಯಕರು ಮತ್ತು ನರ್ತಕರಿಗೆ’ ನೀಡುತ್ತಿದ್ದಾರೆ ಎಂದು ಹೇಳಿದರು” ಎನ್ನುತ್ತಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪಿಸದೇ ನರೇಂದ್ರ ಮೋದಿ ಕಾಂಗ್ರೆಸ್‌ನ್ನು ದೂರಿದ್ದಾರೆ.
ಪ್ರಧಾನಿಯವರು ಜವಾಹರಲಾಲ್ ನೆಹರೂ ಅವರನ್ನು ಉಲ್ಲೇಖಿಸಿ, 1962 ರ ಭಾರತ-ಚೀನಾ ಯುದ್ಧದ ನಂತರ ದೇಶದ ಮೊದಲ ಪ್ರಧಾನಿ “ಈಶಾನ್ಯ ಜನರ ಗಾಯಗಳು ಇನ್ನೂ ವಾಸಿಯಾಗಿಲ್ಲ” ಎಂದು ಹೇಳಿದ್ದರು ಎಂದು ಹೇಳಿದರು. “ಕಾಂಗ್ರೆಸ್‌ನ ಪ್ರಸ್ತುತ ಪೀಳಿಗೆ ಆ ಗಾಯಗಳ ಮೇಲೆ ಉಪ್ಪು ಎರಚುತ್ತಿದೆ” ಎಂದು ನರೇಂದ್ರ ಮೋದಿ ಹೇಳಿದ್ದಾರೆ.