ಈ ತಿಂಗಳೆಲ್ಲ ಬರೀ ಬಿಜೆಪಿಯಿಂದ ಕಾಂಗ್ರಸ್ಸಿನಿಂದ ಅವರು ಬರುತ್ತಾರೆ, ಇವರು ಬರುತ್ತಾರೆ ಎನ್ನುವ ಸುದ್ದಿಗಳೇ ಓಡಾಡುತ್ತಿದ್ದವು. ಒಮ್ಮೆ ಸೋಮಶೇಖರ್ ಬಿಜೆಪಿ ಬಿಡುತ್ತಾರೆ ಎಂದರೆ ಇನ್ನೊಮ್ಮೆ ಗೋಪಾಲಯ್ಯ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ. ಈ ನಡುವೆ ಆಯನೂರು ಕಾಂಗ್ರೆಸ್ ಸೇರಿದರು. ಈಗ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರ ನಡುವೆ ಆಸೆಯಿಂದ ಓಡಾಡುತ್ತಿದ್ದಾರೆನ್ನುವ ಸುದ್ದಿಯೂ ಇದೆ.
ಇದರ ನಡುವೆ ಬೈರತಿ ಬಸವರಾಜ್ ಅವರೂ ಕಾಂಗ್ರೆಸ್‌ಗೆ ಮರಳಲಿದ್ದಾರೆನನುವ ಸುದ್ದಿ ಓಡಾಡುತ್ತಿತ್ತು. ಆದರೆ ಈಗ ಅವರು ಸುದ್ದಿಯ ರೆಕ್ಕೆ ಪುಕ್ಕಗಳನ್ನು ಕತ್ತರಿಸುವ ಮೂಲಕ ಸುದ್ದಿಗಾರರನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ.
ಈಗಿನ ಹೊಸ ಸುದ್ದಿಯೆಂದರೆ ಯಾವುದೇ ಸಂದರ್ಭದಲ್ಲೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಿಲ್ಲ ಎಂದು ಮಾಜಿ ಸಚಿವ, ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.
ನಾನು ಬಿಜೆಪಿ ತೊರೆಯುವುದಾದದರೆ ಅದು ರಾಜಕೀಯ ಕಣದಿಂದ ಹೊರ ಬಿದ್ದಾಗಲಷ್ಟೆಯೇ ಹೊರತು ಕಾಂಗ್ರಸ್ ಸೇರುವ ಸಲುವಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ವಿವರಿಸಿದ ಅವರು ಯಾವುದೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಅಧಿಕಾರ ಮತ್ತು ಗೌರವ ನೀಡಿದೆ ಹೀಗಾಗಿ ಬಿಜೆಪಿ ತೊರೆಯುವ ಇರಾದೆ ಇಲ್ಲ ಎಂದು ವಿವರಿಸಿದರು.