Home ಜನ-ಗಣ-ಮನ ಅಂಬೇಡ್ಕರ್ ಭಾರತವೋ? ಸಾವರ್ಕರ್ ಭಾರತವೋ, ಸಂವಿಧಾನವೋ? ಮನು ಸ್ಮ್ರತಿಯೋ?

ಅಂಬೇಡ್ಕರ್ ಭಾರತವೋ? ಸಾವರ್ಕರ್ ಭಾರತವೋ, ಸಂವಿಧಾನವೋ? ಮನು ಸ್ಮ್ರತಿಯೋ?

0

ಏಪ್ರಿಲ್ 14,2024 ರಂದು ಅಂಬೇಡ್ಕರ್ ಜಯಂತಿ. ನಾನು ಇಲ್ಲಿ ಕೊಟ್ಡಿರುವ ಟೈಟಲ್ ನಿಂದ ನಿಮಗೆ ಅಚ್ಚರಿ ಮತ್ತು ಗಾಬರಿ ಆಗಬಹುದು. ಅಂಬೇಡ್ಕರ್ ಭಾರತವೋ? ಸಾವರ್ಕರ್ ಭಾರತವೋ? ಸಂವಿಧಾನವೋ? ಮನುಸ್ಮ್ರತಿಯೋ?

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರಲು ಹಲವು ಸ್ಥರದ ಹೋರಾಟಗಳು ನಡೆದಿವೆ. ಅದು ಆದಿವಾಸಿ ಬುಡಕಟ್ಟುಗಳ ಹೋರಾಟವಿರಬಹುದು,ಕಮ್ಯೂನಿಸ್ಟ್‌ ರ ವಿರೋಚಿತ ಹೋರಾಟವಿರಬಹುದು,ಗಾಂಧಿ, ಅಂಬೇಡ್ಕರ್, ಪುಲೆ ದಂಪತಿಗಳ ಹೋರಾಟಗಳಿರಬಹುದು. ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಈ ಟೈಟಲ್ ಕೊಟ್ಟಿರುವೆ.

ಇವರೆಲ್ಲರ ಹೋರಾಟವನ್ನು ಗೌರವಿಸುತ್ತಲೇ ನಾನು ಹೇಳಲು ಹೊರಟಿರುವುದು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ. ಕಳೆದ ಹತ್ತು ವರ್ಷಗಳಿಂದ ಸಾವರ್ಕರ್ ನಂಬಿದ ಮನುಸ್ಮೃತಿ ಆಡಳಿತವನ್ನು ಕೇಶವಕೃಪ ಅಣತಿಯಂತೆ ಮೋಶಾ ಸರ್ಕಾರ ಆಡಳಿತ ಮಾಡಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಸಂವಿಧಾನವನ್ನು ಎಷ್ಟು ತಿರುಚಲು ಸಾಧ್ಯವೋ ಅಷ್ಟು ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದ ದುಡಿವ ಜನ ಅನುಭವಿಸಿದ ಬವಣೆ ಕಡಿಮೆ ಏನಲ್ಲ. ಅದಕ್ಕೆ ಉದಾಹರಣೆ ದೆಹಲಿ ಗಡಿಯಲ್ಲಿನ ರೈತರ ವಿರೋಚಿತ ಹೋರಾಟ. ನಂತರ ಈ ಫ್ಯಾಸಿಸ್ಟ್ ಸರ್ಕಾರವನ್ನು ಪ್ರಶ್ನಿಸಿದ ಹೋರಾಟಗಾರರನ್ನು,ಬರಹಗಾರರನ್ನು ಜೈಲಿಗೆ ಅಟ್ಟಿದ್ದು. ನ್ಯಾಯಾಂಗ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ದುರಿಪಯೋಗ ಮಾಡಿಕೊಂಡಿದ್ದು. ಈ ದೇಶದ ದಲಿತರು,ಮಹಿಳೆಯರು, ಅಲ್ಪಸಂಖ್ಯಾತ ರನ್ನು ಬೇಟೆ ಆಡಿದ್ದು. ಇದಕ್ಕೆ ಮಣಿಪುರ ಸ್ಪಷ್ಟವಾದ ಉದಾಹರಣೆ.

ಇಷ್ಟೆಲ್ಲವೂ ಸಾಲದಂತೆ, ದೇಶದುದ್ದಗಲಕ್ಕೂ ಧರ್ಮದ ಟ್ರಂಪ್‌ ಕಾರ್ಡ್‌ ಹಿಡಿದು, ಡಿಮಾನಿಟೈಸೇಷನ್‌, ಕೋವಿಡ್‌ ಸಾವುಗಳನ್ನು ಮರೆಮಾಚಿ, ಜನರ ದಿಕ್ಕು ತಪ್ಪಿಸಿದ್ದು. ಇತ್ತೀಚಿನ ದಿನಗಳಂತೂ ಇಡಿ, ಸಿಬಿಐ ಧಾಳಿ ಮಾಡಿಸಿ ವಿರೋಧಪಕ್ಷಗಳ ದನಿ ಅಡಗಿಸುವ ಹುನ್ನಾರ ಹೂಡಿದ್ದು ಜಗಜ್ಜಾಹಿರಾದ ವಿಚಾರ.

ಹೇಳಲು ಬಹಳ ವಿಚಾರವಿದೆ. ಆದರೆ ಬರುವ ಲೋಕಸಭಾ ಚುನಾವಣೆ ಬಹಳ ನಿರ್ಣಾಯಕ . ಈ ಹಿನ್ನೆಲೆಯಲ್ಲಿ ನಾವು ಅಂಬೇಡ್ಕರ್ ಭಾರತವನ್ನು ಸಂವಿಧಾನವನ್ನು ಉಳಿಸಿಕೊಳ್ಳಬೇಕಿದೆ,ಸಾವರ್ಕರ್ ಭಾರತ ಮತ್ತು ಮನುಸ್ಮೃತಿ ಯನ್ನು ಸೋಲಿಸಬೇಕಿದೆ..ಬನ್ನಿ…

ಚಾರ್ವಾಕ ರಾಘು,ಸಾಗರ

You cannot copy content of this page

Exit mobile version