Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಪ್ರಯಾಣದ ಹಿನ್ನೆಲೆಯಲ್ಲಿ ಭಾರತ ಸುರಕ್ಷಿತವಲ್ಲ : ಅಮೇರಿಕಾ

ಪ್ರಯಾಣದ ಹಿನ್ನೆಲೆಯಲ್ಲಿ ಭಾರತ ಸುರಕ್ಷಿತವಲ್ಲ : ಅಮೇರಿಕಾ

0

ಅಪರಾಧ ಪ್ರಕರಣ ಮತ್ತು ಭಯೋತ್ಪಾದನೆ ಹಿನ್ನೆಲೆಯಲ್ಲಿ ಭಾರತ ಅಷ್ಟು ಸುರಕ್ಷಿತ ಅಲ್ಲ ಎಂದು ಅಮೆರಿಕ ತನ್ನ ದೇಶದ ಪ್ರಜೆಗಳಿಗೆ ಸಲಹೆ ನೀಡಿದೆ. ಹಾಗಾಗಿ ಪ್ರಯಾಣದ ಹಿನ್ನೆಲೆಯಲ್ಲಿ ಭಾರತಕ್ಕೆ ಹೋಗುವವರು ಈ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಸೂಚಿಸಿದೆ.

ಇದರ ಜೊತೆಗೆ ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣದ ಉದ್ದೇಶ ಇಟ್ಟುಕೊಳ್ಳಲೇಬೇಡಿ ಎಂದೂ ಸಹ ಅಮೇರಿಕಾ ತನ್ನ ನಾಗರೀಕರಿಗೆ ಸೂಚಿಸಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರ ತಲೆ ತಗ್ಗಿಸುವ ವಿಚಾರವಾಗಿದ್ದು ‘ಭಾರತ ಸುರಕ್ಷಿತ ರಾಷ್ಟ್ರ ಅಲ್ಲ’ ಎಂದು ಬಿಂಬಿತವಾಗುತ್ತಿದೆ.

ತನ್ನ ನಾಗರೀಕರ ಅನುಕೂಲಕ್ಕಾಗಿ ಹೊರಡಿಸಿದ ಹೊಸ ಪ್ರಯಾಣ ಮಾರ್ಗಸೂಚಿಯಲ್ಲಿ ಅಮೇರಿಕಾ ಸ್ಟೇಟ್ ಡಿಪಾರ್ಟಮೆಂಟ್ ಭಾರತ ಪ್ರಯಾಣ ಸಲಹಾ ಮಟ್ಟವನ್ನು 1 ರಿಂದ 4 ರ ಪ್ರಮಾಣದಲ್ಲಿ 2 ಕ್ಕೆ ಇಳಿಸಿದೆ. ಅಪರಾಧ ಮತ್ತು ತೀವ್ರತರವಾದ ಭಯೋತ್ಪಾದನೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭಾರತ ಸರ್ಕಾರ ಯಾವುದೇ ಕಠಿಣ ನಿಲುವು ತಗೆದುಕೊಳ್ಳದ ಹಿನ್ನೆಲೆಯಲ್ಲಿ ಕಾಶ್ಮೀರ ಕೂಡಾ ಸುರಕ್ಷಿತ ಸ್ಥಳ ಅಲ್ಲ ಎಂದು ಅಮೇರಿಕಾ ಹೇಳಿದೆ.

ಇದೇ ಸಂದರ್ಭದಲ್ಲಿ ಅಮೇರಿಕಾದ ವಿದೇಶಾಂಗ ಇಲಾಖೆಯು ನೀಡಿದ ಪ್ರತ್ಯೇಕ ಸಲಹೆಯಲ್ಲಿ, ಒಂದು ದಿನದ ಹಿಂದೆ, ಪಾಕಿಸ್ತಾನವನ್ನು 3ನೇ ಹಂತದಲ್ಲಿ ಇರಿಸಿತ್ತು. ಭಯೋತ್ಪಾದನೆ ಮತ್ತು ಪಂಥೀಯ ಹಿಂಸಾಚಾರದ ಕಾರಣದಿಂದ ಅದರ ಪ್ರಕ್ಷುಬ್ಧ ಪ್ರಾಂತ್ಯಗಳ ಪ್ರಯಾಣವನ್ನು ಮರುಪರಿಶೀಲಿಸುವಂತೆ ಅದರ ನಾಗರಿಕರನ್ನು ಕೇಳಿದೆ.

ಇದನ್ನು ಭಾರತಕ್ಕೆ ಹೋಲಿಸಿ ಹೇಳುವಾಗ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣ, ಅತ್ಯಾಚಾರ ಪ್ರಕರಣ, ಕೋಮು ಗಲಭೆಯಂತಹ ಹಿಂಸಾತ್ಮಕ ಘಟನೆಗಳು ಪ್ರವಾಸಿ ತಾಣ ಮತ್ತು ಇತರೆ ಕಡೆಗಳಲ್ಲಿ ನಡೆಯುತ್ತಿದೆ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಅಮೇರಿಕಾ ತನ್ನ ನಾಗರೀಕರಿಗೆ ಭಾರತದ ಪ್ರವಾಸದ ಬಗ್ಗೆ ಸಲಹೆಗಳನ್ನು ನೀಡಿದೆ. ಭಾರತದಲ್ಲಿ ಈ ರೀತಿಯ ಘಟನೆಗಳು ನಡೆದು, ಅದರಲ್ಲಿ ತನ್ನ ದೇಶದ ಪ್ರಜೆಗಳು ಸಿಕ್ಕಾಗ ರಕ್ಷಣೆ ಹಿನ್ನೆಲೆಯಲ್ಲಿ ಅಮೇರಿಕಾ ತನ್ನ ಸೀಮಿತ ವ್ಯಾಪ್ತಿಯಲ್ಲಿ ರಕ್ಷಣೆಗೆ ಮುಂದಾಗುವುದು ಕಷ್ಟವಿದೆ. ಹಾಗಾಗಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಅನುಸರಿಸಿ ಭಾರತಕ್ಕೆ ಪ್ರಯಾಣ ಬೆಳೆಸಲು ಎಚ್ಚರಿಕೆ ನೀಡಿದೆ.

You cannot copy content of this page

Exit mobile version