Wednesday, March 4, 2026

ಸತ್ಯ | ನ್ಯಾಯ |ಧರ್ಮ

ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕನ್ನರ ವಿರೋಧ: ನಾಲ್ವರಲ್ಲಿ ಒಬ್ಬರಿಗೆ ಮಾತ್ರ ದೃಢ ಸಮ್ಮತಿ

ಇರಾನ್ ಮೇಲೆ ಅಮೆರಿಕ ಬೃಹತ್ ದಾಳಿಯನ್ನು ಆರಂಭಿಸಿದ ಕೆಲವೇ ಗಂಟೆಗಳ ನಂತರ ನಡೆಸಲಾದ ರಾಯಿಟರ್ಸ್-ಇಪ್ಸೋಸ್ ಸಮೀಕ್ಷೆಯು ಅಮೆರಿಕನ್ನರ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ. ಈ ಸಮೀಕ್ಷೆಯ ಪ್ರಕಾರ, ಅಮೆರಿಕದ ಕೇವಲ ಕಾಲು ಭಾಗದಷ್ಟು ಅಂದರೆ ಪ್ರತಿ ನಾಲ್ವರು ಅಮೆರಿಕನ್ನರಲ್ಲಿ ಒಬ್ಬರು ಮಾತ್ರ ಇರಾನ್ ಮೇಲಿನ ಈ ದಾಳಿಯನ್ನು ಸಮರ್ಥಿಸಿದ್ದಾರೆ. ಶನಿವಾರ ಪ್ರಾರಂಭವಾಗಿ ಭಾನುವಾರ ಮುಕ್ತಾಯಗೊಂಡ ಈ ಪೋಲ್ ಸಮೀಕ್ಷೆಯು ಅಮೆರಿಕದ ಸಾರ್ವಜನಿಕರಲ್ಲಿ ಯುದ್ಧದ ಬಗ್ಗೆ ಇರುವ ಅನಾಸಕ್ತಿಯನ್ನು ಎತ್ತಿ ತೋರಿಸಿದೆ.

ವಿಶೇಷವೆಂದರೆ, ಇರಾನ್ ಮೇಲೆ ನಡೆಸಿದ ದಾಳಿ ಯಲ್ಅಲಿಮೆರಿಕದ ಕೆಲವು ಸೈನಿಕರು ಮೃತಪಟ್ಟಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸುವುದಕ್ಕೆ ಮೊದಲೇ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ವಾಯುದಾಳಿಗಳು ಮತ್ತು ಕ್ಷಿಪಣಿ ದಾಳಿಗಳ ಬಗ್ಗೆ ಅಮೆರಿಕದ ಜನಸಾಮಾನ್ಯರಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎಂಬುದು ಈ ವರದಿಯಿಂದ ತಿಳಿದುಬಂದಿದೆ.

ಈ ಯುದ್ಧವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ನ ನಟಾಂಜ ಅಣು ಕೇಂದ್ರದ ಮೇಲೆ ದಾಳಿ ನಡೆದಿರುವುದನ್ನು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯು ಈಗಾಗಲೇ ದೃಢಪಡಿಸಿದೆ. ಅಧ್ಯಕ್ಷ ಟ್ರಂಪ್ ಅವರು “ಇದುವರೆಗೆ ನಾವು ದೊಡ್ಡ ದಾಳಿಯನ್ನೇ ಮಾಡಿಲ್ಲ, ಮುಂದಿನ 24 ಗಂಟೆಗಳಲ್ಲಿ ಭೀಕರ ದಾಳಿ ನಡೆಯಲಿದೆ” ಎಂದು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಈ ಸಮೀಕ್ಷಾ ವರದಿ ಹೊರಬಿದ್ದಿರುವುದು ಅಮೆರಿಕದ ಆಂತರಿಕ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page