Tuesday, June 25, 2024

ಸತ್ಯ | ನ್ಯಾಯ |ಧರ್ಮ

ಅಮಿತ್ ಶಾ ಕುದುರೆ ವ್ಯಾಪಾರದ ದಲ್ಲಾಳಿಯೋ? : ಕಾಂಗ್ರೆಸ್

ತೆಲಂಗಾಣ : ತೆಲಂಗಾಣದಲ್ಲಿ ಕಾನೂನು ಬಾಹಿರ “ಆಪರೇಷನ್ ಕಮಲ”ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ “ಆಪರೇಷನ್ ಕಮಲ” ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದ್ದು, ಅಮಿತ್‌ ಶಾ ವಿರುದ್ದ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼಅಮಿತ್ ಶಾ ಗೃಹ ಸಚಿವರೋ ಅಥವಾ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಕುದುರೆ ವ್ಯಾಪಾರದ ದಲ್ಲಾಳಿಯೋ?ʼ ಎಂದು ಪ್ರಶ್ನೆ ಮಾಡಿದೆ.

ಆಪರೇಷನ್ ಕಮಲ ಎಂಬ ದಗಾಕೊರ ಕೆಲಸದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಗೃಹಸಚಿವ ಅಮಿತ್‌ ಶಾ, ಬಿ.ಎಲ್‌ ಸಂತೋಷ್ ಅವರುಗಳ ಹೆಸರುಗಳು ಬಹಿರಂಗವಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಾಂಗ್ರೆಸ್‌ ಕಿಡಿಕಾರಿದೆ.

‌ʼತೆಲಂಗಾಣದಲ್ಲಿ 150 ಕೋಟಿಯ ಆಪರೇಷನ್ ಕಮಲದ ಡೀಲ್‌ನಲ್ಲಿ ಸಿಕ್ಕಿಬಿದ್ದವರು ಕರ್ನಾಟಕದ ಕುದುರೆ ವ್ಯಾಪಾರದಲ್ಲೂ ಪಾತ್ರ ವಹಿಸಿದ್ದರು ಎಂಬುದನ್ನು ಬಾಯ್ಬಿಟ್ಟಿದ್ದಾರೆ. ಬಿ ಎಲ್ ಸಂತೋಷ್ ಎಂಬ ವ್ಯಕ್ತಿಯ ಐನಾತಿ ಕೆಲಸ ಈಗ ಹೊರಬರುತ್ತಿದೆ, ಕುದುರೆವ್ಯಾಪಾರದಲ್ಲಿ ಸಂತೋಷ ಕೂಟದ ನೇತೃತ್ವ ಇದ್ದಿದ್ದಕ್ಕೆ ಬಿ.ಎಸ್‌ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದ್ದೇ?ʼ ಎಂದು ಆಕ್ರೋಶ ವ್ಯಕ್ತ ಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು