ಅಂಚೆ ಕಛೇರಿಗಳಲ್ಲಿ ರಾಷ್ಟ್ರಧ್ವಜ ಮಾರಾಟ

ಎಪ್ಪತೈದನೆಯ ಸ್ವಾತಂತ್ರ್ಯದಿನದ (ಅಮೃತ ಮಹೋತ್ಸವ) ಅಂಗವಾಗಿ ‘ಹರ್ ಘರ್ ತಿರಂಗ’ ಅಭಿಯಾನದಡಿಯಲ್ಲಿ ರಾಜ್ಯದ ಅಂಚೆ ಕಛೇರಿಗಳಲ್ಲಿ 7.5 ಲಕ್ಷ ರಾಷ್ಟ್ರಧ್ವಜವನ್ನು ಮಾರಾಟ ಮಾಡಲು ಯೋಜಿಸಿದ್ದೆವೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.

‘ಹರ್ ಘರ್ ತಿರಂಗ’ ಕಾರ್ಯಾಕ್ರಮವು ಎಲ್ಲಾ ಭಾರತೀಯರಲ್ಲಿ ದೇಶಭೀಮಾನ ಮೂಡಿಸುವ, ದೇಶ ಪ್ರೇಮವನ್ನೂ ಮೇರೆಯುವ ವಿನೂತನ ಕಾರ್ಯಾಕ್ರಮ, ಪ್ರತಿಯೊಬ್ಬ ಭಾರತೀಯನು ಇದರಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ರಾಷ್ಟ್ರಧ್ವಜ ಬೇಕೆನ್ನೂವ ಪ್ರತಿಯೊಬ್ಬರು ಸ್ಥಳೀಯ ಅಂಚೆ ಕಛೇರಿಗೆ ಹೋಗಿ ಕೊಳ್ಳಬಹುದು ಎಂದರು, ರಾಜ್ಯದ 97 ಅಂಚೆ ಕಛೇರಿಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಇಂಡಿಯಾ ಪೋಸ್ಟ್ ಮತ್ತು ಅಮೃತ ಮಹೋತ್ಸವ ಟ್ಯಾಗ್ ಮಾಡುವ ಮೂಲಕ ಸೆಲ್ಫಿಗಳನ್ನು ಕ್ಲಿಕ್ ಮಾಡಿ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು