Wednesday, June 19, 2024

ಸತ್ಯ | ನ್ಯಾಯ |ಧರ್ಮ

ಆಂದ್ರ ಪ್ರದೇಶ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳ ಸಂದರ್ಶನ : ವೈಎಸ್‌ ಶರ್ಮಿಳಾ‌ ರಣತಂತ್ರ

ಆಂಧ್ರಪ್ರದೇಶದಲ್ಲಿ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮದೇ ರೀತಿಯಲ್ಲಿ ಚುನಾವಣಾ ತಂತ್ರಗಳನ್ನುರೂಪಿಸುತ್ತಿದ್ದು. ವೈಸಿಪಿ, ಟಿಡಿಪಿ, ಜನಸೇನಾ ಈಗಾಗಲೇ ಅಭ್ಯರ್ಥಿಗಳನ್ನು ಬಿಡುಗಡೆ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಪ್ರವೇಶಿಸುತ್ತಿದ್ದಾರೆ.

ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಚುನಾವಣಾ ಹೋರಾಟಕ್ಕೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ವೈ.ಎಸ್ ಶರ್ಮಿಳಾ ಅವರು ಎಪಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಕಾಂಗ್ರೆಸ್ ಪಕ್ಷವು ಹೊಸ ಉತ್ಸಾಹದೊಂದಿಗೆ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಶರ್ಮಿಳಾ ಅವರ ತಂತ್ರಗಾರಿಕೆ ಬಗ್ಗೆ ಜನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಗೆಲ್ಲುವ ಕುದುರೆಗಳಿಗೇ ಟಿಕೆಟ್ ಕೊಡಬೇಕು ಎಂಬ ಗಟ್ಟಿ ನಿರ್ಧಾರದೊಂದಿಗೆ ಅಭ್ಯರ್ಥಿಗಳ ಆಯ್ಕೆಮಾಡುವ ಜವಾಬ್ದಾರಿಯನ್ನು ವೈ.ಎಸ್.ಶರ್ಮಿಳಾ ಅವರಿಗೆ ವಹಿಸಲಾಗಿದೆ. ಜನಸೇನಾ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿರುವ ಅಭ್ಯರ್ಥಿಗಳಿಗೆ ಇರುವ ಬೆಂಬಲದ ಆಧಾರದ ಮೇಲೆ ಮತ್ತು ಅವರ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವೈಸಿಪಿ, ಟಿಡಿಪಿ ಎಪಿ ಚುನಾವಣೆಗೆ ಟಿಕೆಟ್ ಹಂಚುತ್ತಿವೆ. ಆದರೆ ಕಾಂಗ್ರೆಸ್ ಪಕ್ಷ ಟಿಕೆಟ್ ಹಂಚಿಕೆಯಲ್ಲಿ ಹೊಸಾ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ.

ಎಪಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶರ್ಮಿಳ ಅವರು ಟಿಕೆಟ್ ಆಕಾಂಕ್ಷಿಗಳ ನಡುವೆ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಕಾರ್ಪೊರೇಟ್ ಶೈಲಿಯಲ್ಲಿ ಸಂದರ್ಶನಗಳನ್ನು ನಡೆಸುತ್ತಿದ್ದಾರೆ. ಈಗಾಗಲೆ ಬಹಳಷ್ಟು ಜನ ಟಿಕೆಟ್‌ ಗಾಗಿ ಅರ್ಜಿಗಳನ್ನು ಆಂದ್ರಪ್ರದೇಶದ ಕಾಂಗ್ರೆಸ್‌ ಮುಖ್ಯ ಕಛೇರಿಗೆ ತಲುಸಿದ್ದಾರೆ. ಪ್ರತಿಯೊಬ್ಬರನ್ನೂ ಖುದ್ದಾಗಿ ಶರ್ಮಿಳಾ ಅವರೇ ಸಂದರ್ಶನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆಂಧ್ರ ರತ್ನ ಭವನದಲ್ಲಿ ನೆನ್ನೆ ಆರಂಭವಾದ ಸಂದರ್ಶನ ಇಂದು ಕೂಡ ಮುಂದುವರಿದಿದೆ. ನರಸಪುರಂ, ಮಚಲಿಪಟ್ಟಣಂ, ನರಸರಾವ್‌ಪೇಟೆ, ಏಲೂರು, ಬಾಪಟ್ಲಾ ಮತ್ತು ಗುಂಟೂರು ಲೋಕಸಭಾ ಕ್ಷೇತ್ರಗಳ ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳಿಗೆ ನಿನ್ನೆ ಸಂದರ್ಶನ ನಡೆಸಲಾಗಿತ್ತು.

ನಿನ್ನೆ ರಾತ್ರಿಯವರೆಗೂ ಶರ್ಮಿಳಾ ಅವರು ಅಭ್ಯರ್ಥಿ ಆಕಾಂಕ್ಷಿಗಳನ್ನು ಸಂದರ್ಶಿಸಿದ್ದರು. ಶ್ರೀಕಾಕುಳಂ, ಅರಕು, ವಿಜಯನಗರ, ವಿಶಾಖ, ಅನಕಾಪಲ್ಲಿ, ರಾಜಮಂಡ್ರಿ, ಕಾಕಡಿ, ಆಮ್ಲಾಪುರ, ಓಂಗೋಲು ಸಂಸತ್ ಕ್ಷೇತ್ರಗಳ ವ್ಯಾಪ್ತಿಯ 67 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ವೈ.ಎಸ್.ಶರ್ಮಿಳಾ ಅವರು ನೇರವಾಗಿ ಆಕಾಂಕ್ಷಿಗಳೊಂದಿಗೆ ಮಾತನಾಡುತ್ತಿದ್ದಾರೆ. ವೈಎಸ್ ಶರ್ಮಿಳಾ ಅವರು ಅಭ್ಯರ್ಥಿಗಳ ಆರ್ಥಿಕ ಸ್ಥಿತಿ, ಜನರಲ್ಲಿ ಒಳ್ಳೆಯ ಹೆಸರು, ಅಭ್ಯರ್ಥಿಗಳ ಗುಣಗಳು, ಪಕ್ಷದ ಬಗ್ಗೆ ಅವರಿಗಿರುವ ಅಭಿಪ್ರಾಯಗಳು ಹೀಗೆ ಎಲ್ಲ ಅಂಶಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Related Articles

ಇತ್ತೀಚಿನ ಸುದ್ದಿಗಳು