Thursday, August 21, 2025

ಸತ್ಯ | ನ್ಯಾಯ |ಧರ್ಮ

ಚುನಾವಣಾ ಸ್ವಾರಸ್ಯ: ಮೋದಿ ಪ್ರಚಾರ ಮಾಡಿದ್ದ ಅಣ್ಣಾಮಲೈಗೆ ಕೇವಲ ಒಂದು ಓಟು, ಇಂದೋರ್‌ ಕ್ಷೇತ್ರದಲ್ಲಿ ಬಿಜೆಪಿ V/S ನೋಟಾ

ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ ನಿಜಕ್ಕೂ ಜನರ ಕುತೂಹಲ ಕೆರಳಿಸುತ್ತಿದೆ. ಕಳೆದ ಎರಡು ಬಾರಿ ನಡೆದಿದ್ದ ಒನ್‌ ಸೈಡೆಡ್‌ ಚುನಾವಣೆಗಳಂತಲ್ಲದೆ ಈ ಬಾರಿ ಇಂಡಿಯಾ ಮತ್ತು ಎನ್‌ಡಿಎ ನಡುವೆ ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಿದೆ.

ಚುನಾವಣೆ ಘೋಷಣೆಯಾದ ದಿನದಿಂದಲೂ ಇಂಡಿಯಾ ಒಕ್ಕೂಟ ಬಹಳ ಆತ್ಮವಿಶ್ವಾಸದಿಂದ ತಾನು ಗೆಲ್ಲುವುದಾಗಿ ಹೇಳಿಕೊಂಡೇ ಬಂದಿತ್ತು. ಹಾಗೂ ಅದು ಈಗ ಬಹುತೇಕ ಗೆಲುವಿನ ಹತ್ತಿರಕ್ಕೆ ಬಂದಿದೆ. ಕಾಂಗ್ರೆಸ್‌ ಪಕ್ಷದ ಮಟ್ಟಿಗಂತೂ ಈ ಬಾರಿಯ ಚುನಾವಣೆ ಬೌನ್ಸ್‌ ಬ್ಯಾಕ್‌ ಎಂದೇ ಹೇಳಬಹುದು.

ಅಂತೆಯೇ ಈ ಬಾರಿಯ ಚುನಾವಣೆಯಲ್ಲೂ ಹಲವು ಸ್ವಾರಸ್ಯಕರ ಘಟನೆಗಳು ನಡೆದಿವೆ. ಅದರಲ್ಲಿ ಒಂದು ತಮಿಳುನಾಡಿನ ಮತಗಟ್ಟೆಯೊಂದರಲ್ಲಿ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಕೇವಲ ಒಂದೇ ಒಂದು ಮತ ಪಡೆಯುವ ಮೂಲಕ ತಮಿಳುನಾಡು ಮತ್ತು ದೇಶಾದ್ಯಂತ ಟ್ರೋಲ್‌ ಮಟೀರಿಯಲ್‌ ಆಗಿ ಮಾರ್ಪಟ್ಟಿದ್ದಾರೆ.

ಅಣ್ಣಾಮಲೈ ಕುರಿತು ವಿಶೇಷ ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿ ಇಲ್ಲಿ ಪ್ರಧಾನಿ ಮೋದಿಯವರಿಂದಲೂ ಪ್ರಚಾರ ಮಾಡಿಸಿತ್ತು.‌

ಅತ್ತ ಮಧ್ಯಪ್ರದೇಶದ ಇಂದೋರ್‌ ಕ್ಷೇತ್ರ ಈ ಬಾರಿ ಸುದ್ದಿಯಲ್ಲಿತ್ತು. ಅಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಕೊನೇ ಕ್ಷಣದಲ್ಲಿ ನಾಮಪತ್ರ ವಾಪಸ್‌ ಪಡೆದಿದ್ದಲ್ಲದೆ ನಂತರ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದರು. ಅದಾದ ನಂತರ ಆ ಅಭ್ಯರ್ಥಿ ಮತ್ತು ಆತನ ಅಪ್ಪನಿಗೆ ಕೊಲೆಯತ್ನ ಪ್ರಕರಣದಲ್ಲಿ ಜಾಮೀನು ಕೂಡಾ ದೊರಕಿ ಜನರ ನಡುವೆ ಅನುಮಾನಕ್ಕೆ ಕಾರಣವಾಗಿತ್ತು.

ಈಗ ಅದೇ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಏಕಪಕ್ಷೀಯ ಹೋರಾಟ ನಡೆಸುತ್ತಿದ್ದರೂ, ನೋಟಾ ಅದಕ್ಕೆ ಕಠಿಣ ಪೈಪೋಟಿ ನೀಡುತ್ತಿದೆ. ಪ್ರಸ್ತುತ ಅಲ್ಲಿನ ಮತ ಹಂಚಿಕೆ ಹೀಗಿದೆ:

ಶಂಕರ್ ಲಾಲ್ವಾನಿ ಬಿಜೆಪಿ 958853
ಸಂಜಯ್ ಸೋಲಂಕಿ BSP 40940
ಪವನ್ ಕುಮಾರ್ ಅಭಾ ಪರಿವಾರ್ ಪಾರ್ಟಿ 12455
ಅಭಯ್ ಜೈನ್ ಸ್ವತಂತ್ರ 6530
ನೋಟಾ 171309

Related Articles

ಇತ್ತೀಚಿನ ಸುದ್ದಿಗಳು

You cannot copy content of this page