Tuesday, June 25, 2024

ಸತ್ಯ | ನ್ಯಾಯ |ಧರ್ಮ

ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲು

ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಲೈಂಗಿಕ ದೌರ್ಜನ್ಯದ ಪ್ರಕರಣ ಬಿಟ್ಟೂ ಬಿಡದಂತೆ ಕಾಡಲು ಶುರುವಾಗಿದೆ. ಅಶ್ಲೀಲ ವಿಡಿಯೋ ಸರಣಿಗೆ ಸಂಬಂಧಿಸಿದಂತೆ ಇಂದು ಮತ್ತೊಂದು ಪ್ರಕರಣ ದಾಖಲಾಗಿದ್ದು, ಪುನಃ 4 ದಿನಗಳ ಕಾಲ ವಿಚಾರಣೆಗೆ ಹಾಜರಾಗಲು ತನಿಖಾ ತಂಡ ಎಸ್‌ಐಟಿ ಸೂಚಿಸಿದೆ.

ಈ ಹೊಸ ದೂರಿನಂತೆ ಅಶ್ಲೀಲ ವಿಡಿಯೋ ಸೆರೆ, ಸಂಗ್ರಹ ಮತ್ತು ವೈರಲ್ ಮಾಡಿದ ಪ್ರಕರಣದಲ್ಲಿ ಪುನಃ 4 ದಿನಗಳ ಕಾಲ ವಿಚಾರಣೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಿಸಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪ್ರಜ್ವಲ್ ರೇವಣ್ಣನನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ನೀಡುವಂತೆ ಎಸ್ ಐಟಿ ಕೇಳಿತ್ತು. 42ನೇ ಎಸಿಎಂಎಂ ಕೋರ್ಟ್ ನಲ್ಲಿ ಈ ಅರ್ಜಿ ವಿಚಾರಣೆ ಮಾಡಲಾಗಿದ್ದು, ಆರೋಪಿ ಪ್ರಜ್ವಲ್ ರೇವಣ್ಣನನ್ನು ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇಂದು ಆರೋಪಿ ಪ್ರಜ್ವಲ್ ರೇವಣ್ಣನ ಕೋರ್ಟ್ ವಿಚಾರಣೆ ಸಂದರ್ಭದಲ್ಲೇ ನಾಲ್ಕನೇ ಎಫ್ ಐ ಆರ್ ಬಗ್ಗೆ ನ್ಯಾಯಾಧೀಶರು ಮಾಹಿತಿ ನೀಡಿದರು. ನಿಮ್ಮ ಮೇಲೆ ಮತ್ತೊಂದು ಎಫ್ ಐ ಆರ್ ಆಗಿದೆ. ನಿಮ್ಮ ವಕೀಲರು ಇಲ್ಲೇ ಇದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೊಡುವಿರಾ ಎಂದು ಕೇಳಿದಾಗ ಆರೋಪಿಗೆ ತನ್ನ ನಾಲ್ಕನೇ ಎಫ್‌ಐಆರ್ ಬಗ್ಗೆ ಮಾಹಿತಿ ಇಲ್ಲದ ಕಾರಣ ಒಂದು ಕ್ಷಣ ನ್ಯಾಯಾಧೀಶರ ಎದುರೇ ಗಾಬರಿ ಬಿದ್ದ ಘಟನೆ ನಡೆದಿದೆ.

ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ಪ್ರಕರಣವನ್ನು ಸ್ವಲ್ಪ ಕಾಲ ಮುಂದೂಡಿಕೆ ಮಾಡಿದ್ದರು.  ಬೇರೆ ಕೇಸ್ ವಿಚಾರಣೆ ಬಳಿಕ ತೆಗೆದುಕೊಳ್ಳುವುದಾಗಿ ಪ್ರಜ್ವಲ್ ಪರ ವಕೀಲ ಅರುಣ್ ಮಾಹಿತಿ ನೀಡಿದರು. 

ಆದರೆ, ವಾದ ವಿವಾದ ಆಲಿಸಿದ ನ್ಯಾಯಾಧೀಶರು ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಕಸ್ಟಡಿಗೆ ಮುಂದಾದ 42 ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್ ಅವರು ಮುಂದಿನ ನಾಲ್ಕು ದಿನಗಳ ಕಾಲ (ಜೂ.29ರವರೆಗೆ) ಎಸ್‌ಐಟಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದರು. 

Related Articles

ಇತ್ತೀಚಿನ ಸುದ್ದಿಗಳು