Thursday, June 26, 2025

ಸತ್ಯ | ನ್ಯಾಯ |ಧರ್ಮ

ಬಿಯರ್ ಪ್ರಿಯರಿಗೆ ಮತ್ತೊಮ್ಮೆ ಶಾಕ್ : ಪ್ರತಿ ಬಾಟೆಲ್ ಮೇಲೆ ಏರಿಕೆಯಾದ ಬೆಲೆ

ಕಳೆದ ತಿಂಗಳಷ್ಟೇ ಬಿಯರ್ ಬೆಲೆ ಏರಿಕೆ ಮಾಡಿದ ನಂತರ ಮತ್ತೊಮ್ಮೆ ಬಿಯರ್ ಕಂಪನಿಗಳು ಪ್ರತೀ ಬಾಟೆಲ್ ಮೇಲೆ ದರ ಏರಿಕೆ ಮಾಡಲಿದ್ದು, ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡಿದಂತಾಗಿದೆ. ಈಗ ಮತ್ತೆ ಬೆಲೆ ಏರಿಕೆ ಮಾಡಿದ್ದು, ಒಂದೂವರೆ ವರ್ಷದಲ್ಲಿ ಐದನೇ ಬಾರಿಗೆ ಬಿಯರ್ ದರ ಹೆಚ್ಚಳವಾದಂತಾಗಿದೆ

ಕೆಲವು ಕಂಪನಿಗಳ ಬಿಯರ್ ದರ ಕಳೆದ ಗುರುವಾರದಿಂದ ಏರಿಕೆಯಾಗಿದೆ. ಇನ್ನು ಕೆಲವು ಕಂಪನಿಗಳ ಪರಿಷ್ಕೃತ ದರ ಮಂಗಳವಾರ, ಬುಧವಾರ ಜಾರಿಯಾಗಲಿದೆ. ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಪ್ರತಿ ಬಾಟಲಿಗೆ ಕನಿಷ್ಠ 5 ರಿಂದ 20 ರೂಪಾಯಿವರೆಗೆ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ.

ತೆರಿಗೆಯ ಕಾರಣಕ್ಕೆ ಕಳೆದ ಜುಲೈ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದ ಪರಿಣಾಮ ಪ್ರತಿ ಬಾಟಲ್ ಬಿಯರ್ ಬೆಲೆ ಕನಿಷ್ಠ 10 ರೂಪಾಯಿ ಜಾಸ್ತಿಯಾಗಿತ್ತು. ಆದರೆ ಈಗ ಬಿಯರ್ ನ ಕಚ್ಚಾವಸ್ತುಗಳ ಬೆಲೆ ಏರಿಕೆಯ ಪರಿಣಾಮ ಪ್ರತಿ ಬಿಯರ್ ಬಾಟಲ್ ಮೇಲೆ ಕನಿಷ್ಠ 5 ರಿಂದ 20 ರೂಪಾಯಿ ಹೆಚ್ಚಳಕ್ಕೆ ಬಿಯರ್ ಸಂಸ್ಥೆಗಳೇ ತೀರ್ಮಾನಿಸಿವೆ.

ರಾಜ್ಯದಲ್ಲಿ ಹೆಚ್ಚಾಗಿ ಬಳಕೆಯಾಗುವ ಲೆಜೆಂಡ್, ಆರ್ಸಿ ಸ್ಟ್ರಾಂಗ್, ನಾಕೌಟ್, ಬುಲೆಟ್, ಪವರ್ ಕೂಲ್ ಸೇರಿ ಎಲ್ಲಾ ಬ್ರಾಂಡ್ ಗಳ ಬಿಯರ್ ಬೆಲೆ ಏರಿಕೆಯಾಗಲಿದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page