Home ಬ್ರೇಕಿಂಗ್ ಸುದ್ದಿ ಭೀಕರ ‘ರಾಗಸ’ ಚಂಡಮಾರುತ ; ತೈವಾನ್ ನಲ್ಲಿ ಬಾರೀ ದುರಂತ, 14 ಸಾವು, 130 ಕ್ಕೂ...

ಭೀಕರ ‘ರಾಗಸ’ ಚಂಡಮಾರುತ ; ತೈವಾನ್ ನಲ್ಲಿ ಬಾರೀ ದುರಂತ, 14 ಸಾವು, 130 ಕ್ಕೂ ಹೆಚ್ಚು ಮಂದಿ ನಾಪತ್ತೆ

0

ತೈವಾನ್ ನಲ್ಲಿ ಉಂಟಾದ ಭೀಕರ ‘ರಾಗಸ’ ಚಂಡಮಾರುತ ದುರಂತದಲ್ಲಿ 14 ಜನರು ಸಾವನ್ನಪ್ಪಿದ್ದಾರೆ ಮತ್ತು 130 ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ ಎಂದು ತೈವಾನ್‌ನ ಅಗ್ನಿಶಾಮಕ ಇಲಾಖೆ ಬುಧವಾರ ವರದಿ ಮಾಡಿದೆ.

‘ರಾಗಸ’ ಚಂಡಮಾರುತ ಮಂಗಳವಾರ ದಕ್ಷಿಣ ಚೀನಾಕ್ಕೆ ಅಪ್ಪಳಿಸಿದೆ. ಇದರಿಂದಾಗಿ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದೆ. ಚಂಡಮಾರುತ ಬುಧವಾರ ಹಾಂಗ್ ಕಾಂಗ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಚಂಡಮಾರುತದ ಪರಿಣಾಮ ದಕ್ಷಿಣ ತೈವಾನ್‌ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಡಲತೀರದಲ್ಲಿ ಪ್ರವಾಹದಿಂದಾಗಿ ನೂರಾರು ಮರಗಳು ಧರೆಗುರುಳಿವೆ. ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೈವಾನ್‌ ಪೂರ್ವ ಪ್ರದೇಶದಲ್ಲಿ ಭಾರೀ ಮಳೆಯಾದ ನಂತರ ಭೂಕುಸಿತ ಉಂಟಾಗಿದೆ. ಮಂಗಳವಾರ 2 ಇದ್ದ ಸಾವಿನ ಸಂಖ್ಯೆ ಬುಧವಾರ 14ಕ್ಕೆ ಏರಿಕೆಯಾಗಿದೆ. ಈವರೆಗೆ 124 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸುತ್ತಿವೆ.

You cannot copy content of this page

Exit mobile version