ಹೊಸದಿಲ್ಲಿ: ಮಹಿಳಾ IRS ಅಧಿಕಾರಿಯಯೊಬ್ಬರು ಪುರುಷರಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದು, ಭಾರತದ ನಾಗರಿಕ ಸೇವೆಗಳ ಇತಿಹಾಸದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ.
ಹೈದರಾಬಾದ್ ನ ಕೇಂದ್ರೀಯ ಎಕ್ಸೈಸ್ ಕಸ್ಟಮ್ಸ್ ಎಕ್ಸೈಸ್ ಮತ್ತು ಸೇವಾ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಪ್ರಾದೇಶಿಕ ಪೀಠದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಅನಸೂಯಾ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರದಿಂದ ಅವರು ತನ್ನ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಹೆಸರನ್ನು ಎಂ ಅನುಕಾಂತಿರ್ ಎಂದು ಲಿಂಗವನ್ನು ಪುರುಷ ಎಂದು ತಿದ್ದುಪಡಿಗಳನ್ನು ಮಾಡಿಕೊಂಡಿದ್ದಾರೆ. ಈಗ ಅವರು ಪುರುಷ ನಾಗರಿಕ ಸೇವಾ ಅಧಿಕಾರಿಯಾಗಿದ್ದಾರೆ.
“2013ನೇ ಬ್ಯಾಚ್ ನ ಐಆರ್ಎಸ್ ಅಧಿಕಾರಿಯಾಗಿರುವ ಎಂ.ಅನುಸೂಯ ಪ್ರಸ್ತುತ ಹೈದರಾಬಾದ್ ನ ಸಿಇಎಸ್ ಟಿಎಟಿಯಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರು ಪುರುಷರಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ತಮ್ಮ ಹೆಸರನ್ನು ಕುಮಾರಿ ಎಂ.ಅನಸೂಯಾ ಬದಲಾಗಿ ಶ್ರೀ ಎಂ.ಅನುಕಾಂತಿರ್ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ. ಅವರನ್ನು ಇನ್ನು ಮೇಲೆ ಪುರುಷ ಅಧಿಕಾರಿ ಎಂದೇ ಸಂಬೋಧಿಸಬೇಕುʼ ಎಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.
ಇನ್ನು ಮುಂದೆ ಎಲ್ಲ ದಾಖಲೆಗಳಲ್ಲಿ ಅವರ ಹೆಸರನ್ನು ಎಂ.ಅನುಕಾಂತಿರ್ ಸೂರ್ಯ ಎಂದು ಬದಲಿಸಲಾಗುತ್ತಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ತನ್ನ ಅಧಿನ ಅಧಿಕಾರಿಗಳಿಗೆ ಮಾಹಿತಿ ನೀಡಿದೆ.