Sunday, January 11, 2026

ಸತ್ಯ | ನ್ಯಾಯ |ಧರ್ಮ

ಆಂಧ್ರ ಪ್ರದೇಶದಲ್ಲಿ 35 ರೌಡಿಗಳ ಜೊತೆ 30 ಸಹಚರರು ಗಾಂಜಾ ದಂದೆ ಕೋರರು

ಆಂಧ್ರ ಪ್ರದೇಶ: ಗಾಂಜಾ ಕಳ್ಳ ಸಾಗಾಣಿಕೆ, ಅಕ್ರಮ ದಂದೆಗಳಲ್ಲಿ 35 ರೌಡಿಗಳು ಮತ್ತು 30 ಕ್ಕೂ ಹೆಚ್ಚು ಸಹಚರರು ತೊಡಗಿಕೊಂಡಿದ್ದಾರೆ ಎಂದು ವಿಶಾಖಪಟ್ಟಣದ ಸಿಪಿ ಮಾಹಿತಿ ನೀಡಿದ್ದಾರೆ.

ದಿನೇ ದಿನೇ ಗಾಂಜಾ ಕಳ್ಳಸಾಗಾಣಿಕೆ ಹೆಚ್ಚುತ್ತಿದ್ದು ಈ ಕುರಿತು ತನಿಖೆ ಮಾಡಿದ ವಿಶಾಖಪಟ್ಟಣದ ಪೋಲೀಸ್‌ ಕಮೀಷನರ್‌ ಸಿಎಚ್. ಶ್ರೀಕಾಂತ್ರವರು “ ಗಾಂಜಾ ಕಳ್ಳಸಾಗಣೆ ಮತ್ತು ಇತರ ಅಕ್ರಮ ಚಟುವಟಿಕೆಗಳಲ್ಲಿ 35 ರೌಡಿಗಳು ಮತ್ತು ಅವರ 30 ಕ್ಕೂ ಹೆಚ್ಚು ಸಹಚರರು ತೊಡಗಿಸಿಕೊಂಡಿದ್ದಾರೆ. ಈ ಗಾಂಜಾ ಪ್ರಕರಣದ ಆರೋಪಿಗಳು ಹೆಚ್ಚಾಗಿ ಉತ್ತರ ಭಾರತ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದವರೇ ಆಗಿದ್ದಾರೆ ಎಂದು ಹೇಳಿದ್ದಾರೆ.

ಗಾಂಜಾವನ್ನು ಆಂಧ್ರ ಪ್ರದೇಶ, ಒಡಿಶಾದಿಂದ ಟ್ರಕ್‌ಗಳಲ್ಲಿ ತಂದು ಕಲಬುರಗಿ, ಬೆಂಗಳೂರು, ಮುಂಬೈ ಸೇರಿದಂತೆ ವಿವಿಧ ಮಹಾ ನಗರಗಳಿಗೆ ಗಾಂಜಾ ಕಳ್ಳಸಾಗಣೆ ಮಾಡುಲಾಗುತ್ತಿದೆ ಎನ್ನುವ ಮಾಹಿತಿಯೂ ಇದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page