Thursday, September 11, 2025

ಸತ್ಯ | ನ್ಯಾಯ |ಧರ್ಮ

ಮನ ಮುಟ್ಟುವ ʼಚೌಕಿದಾರ್ʼ ಅಪ್ಪನ ಹಾಡಿಗೆ ಭರಪೂರ ಮೆಚ್ಚುಗೆ :1 ಮಿಲಿಯನ್ಸ್‌ ವೀವ್ಸ್‌ ವೀಕ್ಷಣೆ!

ರಥಾವರ ಖ್ಯಾತಿಯ ಚಂದ್ರಶೇಖರ್‌ ಬಂಡಿಯಪ್ಪ ಸಾರಥ್ಯದ ಚೌಕಿದಾರ್‌ ಸಿನಿಮಾ ಈಗಾಗಲೇ ನಾನಾ ಆಂಗಲ್ ನಲ್ಲಿ ಸುದ್ದಿಯಾಗುತ್ತಿದೆ. ಟೈಟಲ್‌, ಟೀಸರ್‌ ಈಗ ಹಾಡಿನ ಮೂಲಕ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಅಪ್ಪ ಮಗನ ಬಾಂಧವ್ಯ ಗೀತೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಅಪ್ಪನ ಆಂಥೆಮ್‌ ಗೀತೆಗೆ ಬರೋಬ್ಬರಿ 1 ಮಿಲಿಯನ್ಸ್‌ ವೀಕ್ಷಣೆ ಕಂಡಿದ್ದು, ಚೌಕಿದಾರ್‌ ಸಿನಿಮಾ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಿಸುತ್ತಿದೆ.

ಕವಿರತ್ನ ವಿ.ನಾಗೇಂದ್ರ ಪ್ರಸಾದ್ ಬರೆದ ಈ ಹಾಡಿನ ಸಾಲುಗಳು ತುಂಬಾನೆ ಚೆನ್ನಾಗಿವೆ. ಪ್ರತಿ ಸಾಲಿನಲ್ಲೂ ಅಪ್ಪನ ಮಹತ್ವ ಹೇಳಿದ್ದಾರೆ. ಅಪ್ಪನ ಶಕ್ತಿ ಎಂತಹದ್ದು ಅನ್ನೋ ವಿಷಯವನ್ನ ಪದಗಳಲ್ಲಿ ಕಟ್ಟಿಕೊಟ್ಟಿದ್ದು, ವಿಜಯ್ ಪ್ರಕಾಶ್ ಎಲ್ಲರಿಗೂ ತಟ್ಟುವ ರೀತಿನೇ ಹಾಡಿನ್ನು ಹಾಡಿದ್ದಾರೆ. ಸಚಿನನ್‌ ಬಸ್ರೂರ್‌ ಸಂಗೀತ ನಿರ್ದೇಶನ ಸೊಗಸಾಗಿದೆ. ಚೌಕಿದಾರ್ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸಿದ್ದಾರೆ. ಸಾಯಿ ಕುಮಾರ್ ತಂದೆ ಪಾತ್ರ ಮಾಡಿದ್ದಾರೆ.

ದೊಡ್ಮನೆಯ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಪೃಥ್ವಿಗೆ ಜೋಡಿ ನಟಿಸಿದ್ದಾರೆ. ಹಿರಿಯ ನಟಿ ಶ್ವೇತಾ, ಸುಧಾರಾಣಿ ತಾರಾಬಳಗದಲ್ಲಿದ್ದಾರೆ. ಚೌಕಿದಾರ್ ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದು, ವಿದ್ಯಾದೇವಿ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಚಿನ್‌ ಬಸ್ರೂರು ಸಂಗೀತವಿದ್ರೆ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಸಾಹಿತ್ಯ ಬರೆಯುತ್ತಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬರ್ ಮಾಸ್ ಲುಕ್ ಕೊಡಲಿದ್ದಾರೆ.

‘ಚೌಕಿದಾರ್’ ಬಹುಭಾಷೆಗಳಲ್ಲಿ ಮೂಡಿಬರುತ್ತಿದೆ. ಈವರೆಗೆ ಕ್ಲಾಸ್​​ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ತಮ್ಮ ಈ ಚಿತ್ರದ ಮೂಲಕ ಮಾಸ್ ಲುಕ್​ನಲ್ಲಿ ಎಂಟ್ರಿ ಕೊಡಲು ಸಜ್ಜಾಗಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page