Thursday, November 7, 2024

ಸತ್ಯ | ನ್ಯಾಯ |ಧರ್ಮ

ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಅರ್ಹ ರೈತರಿಂದ ಆಹ್ವಾನ

ಬೆಂಗಳೂರು: ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‍ವೈ) ಯಡಿಯಲ್ಲಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ, ರಬ್ಬರ್ ಹೊರತುಪಡಿಸಿ) ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆ. ಪ್ರದೇಶದವರೆಗೆ ಶೇ.90ರ ಸಹಾಯಧನ ಮತ್ತು ಇತರೆ ರೈತರಿಗೆ ಶೆ.75ರ ಸಹಾಯಧನ ನೀಡಲಾಗುವುದು. ಹಾಗೂ 2 ಹೆ. ರಿಂದ 5ಹೆ. ಪ್ರದೇಶದವರೆಗೆ ಶೇ. 45 ರ ಸಹಾಯಧನ ನೀಡಲಾಗುವುದು.

ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಲ್ಲಿ ತಾಳೆ ಬೆಳೆಯನ್ನು ಇಲಾಖಾ ಪಾಲುದಾರಿಕೆ ಕಂಪನಿಯಾದ ರುಚಿ ಸೋಯಾ ಇಂಡ್ಸ್‍ಸ್ಟ್ರೀಸ್ಸ್ ಅವರೊಂದಿಗೆ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ತಾಳೆ ಹೊಸ ಪ್ರದೇಶ ವಿಸ್ತರಣೆಗೆ ರೂ.20 ಸಾವಿರ ಸಹಾಯಧನ ಹಾಗೂ ಮೊದಲ ನಾಲ್ಕು ವರ್ಷದ ಪಾಲನೆಗಾಗಿ 5500 ರಂತೆ ಪ್ರತಿ ಹೇಕ್ಟರ್‍ಗೆ ನೀಡಲಾಗುವುದು. ಇದರ ಜೊತೆಗೆ ತಾಳೆಯಲ್ಲಿ ಡಿಸೇಲ್ ಪಂಪ್ ಸೆಟ್ ಖರೀದಿಗೆ, ಕಟಾವು ಯಂತ್ರ ಖರೀದಿಗೆ ಹಾಗೂ ಅಂತರ ಬೇಸಾಯ ಕೈಗೊಂಡಿದ್ದಲ್ಲಿ ಹೆಕ್ಟೇರ್‍ಗೆ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಉಪ ಯೋಜನೆಯಡಿಯಲ್ಲಿ ಪ್ರದೇಶ ವಿಸ್ತರಣೆ, ಕಿತ್ತಳೆ ಮತ್ತು ಕಾಳು ಮೆಣಸು ಪುನಶ್ಚೇತನ ಕಾರ್ಯಕ್ರಮ, ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಹಾಗೂ ಪ್ರಾಥಮಿಕ ಸಂಸ್ಕರಣ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಎಸ್‍ಎಂಎಎಂ ಯಾಂತ್ರೀಕರಣ ಯೋಜನೆಯಡಿ ಇಲಾಖಾ ಮಾರ್ಗಸೂಚಿಯಂತೆ ಅನುಮೋದಿತ ಸಂಸ್ಥೆಯಿಂದ ಖರೀದಿಸಿದ ಮರ ಕತ್ತರಿಸುವ ಯಂತ್ರ, ಪವರ್ ಸ್ಟೇಯರ್, ಕಳೆಕೊಚ್ಚುವ ಯಂತ್ರ, ಏಣಿ, ತಳ್ಳುವ ಗಾಡಿ ಮುಂತಾದ ಯಂತ್ರೋಪಕರಣಗಳಿಗೆ ಶೇ.40/50 ರ ಸಹಾಯಧನ ನೀಡಲಾಗುತ್ತದೆ.

ಈ ಸೌಲಭ್ಯ ಪಡೆಯಲು ಇಚ್ಚಿಸುವ ರೈತರು ನಿಗಧಿತ ಅರ್ಜಿ ನಮೂನೆ, ಆರ್‍ಟಿಸಿ, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲಾತಿಗಳೊಂದಿಗೆ ಸಮೀಪದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಯಲ್ಲಿ ಡಿ.31 ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಿದೆ ಹಾಗೂ ಸಹಾಯಧನವನ್ನು ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಜೇಷ್ಠತಾ ಪಟ್ಟಿ ಆಧಾರದ ಮೇಲೆ ನೀಡಲಾಗುವುದು ಹಾಗೂ ಸರ್ಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರಿಗೆ ಆದ್ಯತೆಯನ್ನು ನೀಡಲಾಗುವುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page